ಪ್ರೋಟೀನ್ ಕೊರತೆಯಿಂದ ಮಕ್ಕಳಲ್ಲಿ ಅಪೌಷ್ಠಿಕತೆ: ಡಾ.ಚೆನ್ನಬಸಪ್ಪ ಎಂ.ಜಿ.

KannadaprabhaNewsNetwork |  
Published : Nov 15, 2025, 01:45 AM IST
ಮಕ್ಕಳ ಆರೋಗ್ಯ ತಪಾಸಣೆ ಮತ್ತು ಪೌಷ್ಠಿಕಾಂಶಗಳ ಔಷಧಿ ವಿತರಣಾ ಕಾರ್ಯಕ್ರಮ | Kannada Prabha

ಸಾರಾಂಶ

ತರೀಕೆರೆ, ಅಗತ್ಯವಿರುವ ಪೋಷಕಾಂಶಗಳು, ಕ್ಯಾಲೋರಿಗಳು ಅಥವಾ ಪ್ರೋಟೀನ್ ಕೊರತೆಯಿಂದ ಮಕ್ಕಳಲ್ಲಿ ಅಪೌಷ್ಟಿಕತೆ ಉಂಟಾಗುತ್ತದೆ. ಇದು ಜಾಗತಿಕ ಸಮಸ್ಯೆಯಾಗಿದೆ ಎಂದು ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಅಡಳಿತ ವೈದ್ಯಾಧಿಕಾರಿ ಡಾ.ಚೆನ್ನಬಸಪ್ಪ ಎಂ.ಜಿ.ಹೇಳಿದ್ದಾರೆ.

- ಮಕ್ಕಳ ಆರೋಗ್ಯ ತಪಾಸಣೆ ಮತ್ತು ಪೌಷ್ಠಿಕಾಂಶಗಳ ಔಷಧಿ ವಿತರಣಾ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ತರೀಕೆರೆ

ಅಗತ್ಯವಿರುವ ಪೋಷಕಾಂಶಗಳು, ಕ್ಯಾಲೋರಿಗಳು ಅಥವಾ ಪ್ರೋಟೀನ್ ಕೊರತೆಯಿಂದ ಮಕ್ಕಳಲ್ಲಿ ಅಪೌಷ್ಟಿಕತೆ ಉಂಟಾಗುತ್ತದೆ. ಇದು ಜಾಗತಿಕ ಸಮಸ್ಯೆಯಾಗಿದೆ ಎಂದು ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಅಡಳಿತ ವೈದ್ಯಾಧಿಕಾರಿ ಡಾ.ಚೆನ್ನಬಸಪ್ಪ ಎಂ.ಜಿ.ಹೇಳಿದ್ದಾರೆ.ಸರ್ಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಚಿಕ್ಕಮಗಳೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ತಾಲೂಕು ಸಾರ್ವಜನಿಕ ಆಸ್ಪತ್ರೆ, ಆಶೀರ್ವಾದ ನರ್ಸಿಂಗ್ ಹೋಮ್, ರೋಟರಿ ಕ್ಲಬ್, ತರೀಕೆರೆ. ಇವರ ಸಹಯೋಗದಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ ಸಾಧಾರಣ ಮತ್ತು ತೀವ್ರ ಅಪೌಷ್ಟಿಕ ಮಕ್ಕಳ ಆರೋಗ್ಯ ತಪಾಸಣೆ ಮತ್ತು ಪೌಷ್ಟಿಕಾಂಶಗಳ ಔಷಧಿ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಇದಕ್ಕೆ ಮುಖ್ಯ ಕಾರಣಗಳೆಂದರೆ ಬಡತನ, ಅಸುರಕ್ಷಿತ ನೀರು, ಅಸಮರ್ಪಕ ನೈರ್ಮಲ್ಯ, ಸರಿಯಾದ ಆಹಾರ ಮತ್ತು ಪೋಷಣೆ ಇಲ್ಲದಿರುವುದು. ಇದು ಮಕ್ಕಳು ಕುಂಠಿತಗೊಳ್ಳಲು, ರೋಗಗಳಿಗೆ ಹೆಚ್ಚು ಒಳಗಾಗಲು ಮತ್ತು ತೀವ್ರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ತಿಳಿಸಿದರು.ತಾಲೂಕು ವೈದ್ಯಾಧಿಕಾರಿ ಡಾ.ಬಿ.ಜಿ.ಚಂದ್ರಶೇಖರ್ ಮಾತನಾಡಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅಪೌಷ್ಟಿಕ ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ ಎಂದು ತಿಳಿಸಿದರು. ಸಾರ್ವಜನಿಕ ಆಸ್ಪತ್ರೆ ಮಕ್ಕಳ ತಜ್ಞ ಡಾ.ಮಂಜುನಾಥ್ ಬಿ.ಎಸ್. ಅವರು ಮಾತನಾಡಿ ಮಕ್ಕಳಲ್ಲಿ ಅಪೌಷ್ಟಿಕತೆಗೆ ಚಿಕಿತ್ಸೆ ತಕ್ಷಣದ ಪೌಷ್ಟಿಕಾಂಶದ ಪೂರೈಕೆ (ಆರ್.ಯು.ಟಿ.ಎಫ್) ಅರೆ-ದೊಡ್ಡ ಆಹಾರಗಳು, ಪೌಷ್ಠಿಕಾಂಶಗಳ ಪೂರಕ, ವೈದ್ಯಕೀಯ ಮೇಲ್ವಿಚಾರಣೆ ಮತ್ತು ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆಗಳಂತಹ ಸರ್ಕಾರಿ ಕಾರ್ಯಕ್ರಮ ಒಳಗೊಂಡಿರುತ್ತದೆ. ಸಮಗ್ರ ಅಭಿವೃದ್ಧಿ ಸೇವೆಗಳು (ಐಸಿಡಿಎಸ್) ರಾಷ್ಟ್ರೀಯ ಆರೋಗ್ಯ ಮಿಷನ್ ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆ ಮೂಲಕ ಪೂರಕ ಆಹಾರಗಳು ಮತ್ತು ಪೌಷ್ಟಿಕಾಂಶದ ಬಗ್ಗೆ ಶಿಕ್ಷಣ ಒದಗಿಸುವುದು ಎಂದು ಮಾಹಿತಿ ನೀಡಿದರು. ಆಶೀರ್ವಾದ ನರ್ಸಿಂಗ್ ಹೋಮ್ ಮಕ್ಕಳ ತಜ್ಞ ಡಾ.ಗಿರೀಶ್ ಎಸ್. ಮಾತನಾಡಿ ಮಕ್ಕಳಲ್ಲಿ ಅಪೌಷ್ಟಿಕತೆ ಎಂಬ ಪದ ಬಹುಮುಖಿಯಾಗಿದೆ. ಇದು ತೀವ್ರ ಮತ್ತು ದೀರ್ಘಕಾಲದ ಅಪೌಷ್ಟಿಕತೆ ಮತ್ತು ಸೂಕ್ಷ್ಮ ಪೋಷಕಾಂಶಗಳ ಕೊರತೆ ಸೇರಿ ದಂತೆ ಬಹು ಪರಿಸ್ಥಿತಿಗಳನ್ನು ಉಲ್ಲೇಖಿಸುವ ಅಪೌಷ್ಟಿಕತೆ ಎರಡನ್ನೂ ಒಳಗೊಂಡಿದೆ. ಮಧ್ಯಮ ತೀವ್ರ ಅಪೌಷ್ಟಿಕತೆ (ಎಂಎಎಂ) ತೀವ್ರ ಅಪೌಷ್ಟಿಕತೆ (ಎಸ್.ಎಎಂ) ಈ ಕೆಳಗಿನವುಗಳು ಎಂಎಎಂಯ ಮತ್ತು ಎಸ್.ಎಎಂ ಗೆ ಗಮನಾರ್ಹ ಅಪಾಯಕಾರಿ ಅಂಶಗಳಾಗಿವೆ. ಅಸಮರ್ಪಕ ಆಹಾರ ಸೇವನೆ, ಅನುಚಿತ ಆಹಾರ ಭ್ರೂಣದ ಬೆಳವಣಿಗೆ ನಿರ್ಬಂಧ, ಅಸಮರ್ಪಕ ನೈರ್ಮಲ್ಯ, ಪೋಷಕರ ಶಿಕ್ಷಣದ ಕೊರತೆ, ಕುಟುಂಬದ ಗಾತ್ರ, ಅಪೂರ್ಣ ಲಸಿಕೆ,ಬಡತನ, ಆರ್ಥಿಕ, ಪರಿಸರ ಅಸ್ಥಿರತೆಗಳು ಹಾಗೂ ಚಿಕಿತ್ಸೆಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ದಿ ಯೋಜನಾ ಅಧಿಕಾರಿ ಚರಣ್ ರಾಜ್ ಎಸ್. ಆಯುಷ್ ತಜ್ಞರು ಡಾ. ಶ್ರೀನಿವಾಸ್, ರೋಟರಿ ಜೋನ್ -7 ನ ಅಸಿಸ್ಟೆಂಟ್ ಗವರ್ನರ್, ಪ್ರವೀಣ್ ನಹಾರ್, ರೋಟರಿ ಕ್ಲಬ್ ಅಧ್ಯಕ್ಷ ಬಿ.ಪಿ.ರವಿ ಕುಮಾರ್, ರೋಟರಿ ಕ್ಲಬ್ ನ ಸದಸ್ಯ ವೆಂಕಟೇಶ್ , ಓಂಕಾರಮೂರ್ತಿ, ಸಾರ್ವಜನಿಕ ಆಸ್ಪತ್ರೆ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ತಾಲೂಕಿನ 48 ಮಧ್ಯಮ ತೀವ್ರ ಅಪೌಷ್ಟಿಕ, 3 ತೀವ್ರ ಅಪೌಷ್ಟಿಕ ಮಕ್ಕಳಿಗೆ, ಉಚಿತವಾಗಿ ಪೌಷ್ಟಿಕ ಕಿಟ್ ಗಳನ್ನು ವಿತರಿಸಲಾಯಿತು.

-

13ಕೆಟಿಆರ್.ಕೆ.1ಃ

ತರೀಕೆರೆಯಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ಜಿ. ಚಂದ್ರಶೇಖರ್ ಮಾತನಾಡಿದರು. ಸಾರ್ವಜನಿಕ ಆಸ್ಪತ್ರೆ ಅಡಳಿತ ವೈದ್ಯಾಧಿಕಾರಿ ಡಾ.ಚೆನ್ನಬಸಪ್ಪ ಎಂ.ಜಿ. ರೋಟರಿ ಕ್ಲಬ್ ಅಧ್ಯಕ್ಷ ಬಿ.ಪಿ.ರವಿ ಕುಮಾರ್, ಎಂ.ಜಿ.ಆಶೀರ್ವಾದ ನರ್ಸಿಂಗ್ ಹೋಮ್ ಮಕ್ಕಳ ತಜ್ಞ ಡಾ.ಗಿರೀಶ್ ಎಸ್.ಮತ್ತಿತರರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ