ಕನ್ಮಡಪ್ರಭ ವಾರ್ತೆ ಮಾಲೂರು
ಪ್ರಸಕ್ತ ವರ್ಷದ ೨೦೨೫-೨೬ನೇ ಸಾಲಿನ ಆಯವ್ಯಯ ಪುರಸಭಾ ಅಧ್ಯಕ್ಷೆ ಕೋಮಲ ನಾರಾಯಣ್ ಮಂಡಿಸಿದರು. ಪುರಸಭೆಯ ಸರ್ವತೋಮುಖ ಅಭಿವೃದ್ಧಿಗೆ ಅಗತ್ಯ ಯೋಜನೆಗಳನ್ನು ರೂಪಿಸಲಾಗಿದೆ ಎಂದರು.
ಎಲ್ಲ ಆದಾಯ ಮೂಲಗಳಿಂದ ಬರಬಹುದಾದ ಒಟ್ಟು ಆದಾಯ ೬೪೭೫.೦೭ ಲಕ್ಷ ರೂಗಳ ಅಂದಾಜ ಮಾಡಲಾಗಿದ್ದು, ನಿರೀಕ್ಷಿತ ಒಟ್ಟು ವೆಚ್ಚ ೭೭೧೫.೯೩ ಲಕ್ಷಗಳಾಗಬಹುದೆಂದು ಅವರು ಹೇಳಿದರು.ರಸ್ತೆ ದುರಸ್ತಿ ಕಾಮಗಾರಿ
ಆಯವ್ಯಯ ಸಭೆಯ ನಂತರ ನಡೆದ ಸಭೆಯಲ್ಲಿ ಶಾಸಕ ಕೆ ವೈ ನಂಜೇಗೌಡ ಭಾಗವಹಿಸಿ ಸಲಹೆಗಳನ್ನು ನೀಡಿದರು. ಪಟ್ಟಣದಲ್ಲಿ ಮುಂದಿನ ತಿಂಗಳು ಕರಗ ಮಹೋತ್ಸವ ನಡೆಯುವುದರಿಂದ ಕರಗ ಸಂಚರಿಸುವ ರಸ್ತೆಗಳ ಗುಂಡಿ ಮುಚ್ಚುವುದು ಸ್ವಚ್ಛತೆ ಕಾರ್ಯ ಕೈಗೊಳ್ಳಲು ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು.ಪುರಸಭೆ ಉಪಾಧ್ಯಕ್ಷ ವಿಜಯಲಕ್ಷ್ಮಿ, ಸ್ಥಾಯಿ ಸಮಿತಿಯ ಅಧ್ಯಕ್ಷ ಎ.ರಾಜಪ್ಪ, ಮುಖ್ಯ ಅಧಿಕಾರಿ ಎಬಿ ಪ್ರದೀಪ್, ಯೋಜನಾ ಪ್ರಾಧಿಕಾರ ಅಧ್ಯಕ್ಷ ಮಹಮ್ಮದ್ ನಹಿಮ್ ಉಲ್ಲ್ಲ, ಪರಿಸರ ಅಭಿಯಂತರ ಶಾಲಿನಿ, ಕಂದಾಯ ಅಧಿಕಾರಿ ರೇಣುಕಾ, ಲೆಕ್ಕಾಧಿಕಾರಿ ಜೈರಾಮ್, ಆರೋಗ್ಯ ಹಿರಿಯ ನಿರೀಕ್ಷಕ ಶ್ರೀನಿವಾಸ್, ಕಿರಿಯ ನಿರೀಕ್ಷಕ ರಾಜಣ್ಣ, ಕಂದಾಯ ನಿರೀಕ್ಷಕ ನಾಗರಾಜ್, ಹಾಗೂ ಪುರಸಭೆಯ ಸದಸ್ಯರು ಹಾಗೂ ಸಿಬ್ಬಂದಿ ಹಾಜರಿದ್ದರು.