ಮಾಲೂರು ಪುರಸಭೆ ನಗರಸಭೆಯಾಗಿ ಮೇಲ್ದರ್ಜೆಗೆ: ಶಾಸಕ ಕೆ.ವೈ.ನಂಜೇಗೌಡ

KannadaprabhaNewsNetwork |  
Published : May 13, 2025, 11:54 PM IST
ಶಿರ್ಷಿಕೆ-13ಕೆ.ಎಂ.ಎಲ್‌.ಆರ್.1-ಮಾಲೂರಿನ ಕಾಂಗ್ರಸ್‌ ಭವನದಲ್ಲಿ ರಾಜ್ಯ ಸರ್ಕಾರ ಅಧಿಕಾರಕ್ಕೆ ಬದು ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸರ್ಕಾರವು ಯಶಸ್ವಿಯಾಗಿ ಎರಡು ವರ್ಷ ಪೂರೈಸಿರುವ ಬಗ್ಗೆ ಸಂತಸ ವ್ಯಕ್ತಪಡಿಸಿ ಪಕ್ಷದ ಮುಖಂಡರುಗಳಿಗೆ ಸಿಹಿ ತಿನ್ನಿಸಿದರು. | Kannada Prabha

ಸಾರಾಂಶ

ಇಂದಿಗೆ ಎರಡು ವರ್ಷದ ಹಿಂದೆ ರಾಜ್ಯದ ಜನತೆ ಬಿಜೆಪಿ ಭ್ರಷ್ಟ ಸರ್ಕಾರ ವಿರುದ್ಧ ತೀರ್ಪು ನೀಡಿದ ದಿನವಾಗಿದೆ. ಕಾಂಗ್ರಸ್‌ ಮೇಲೆ ನಂಬಿಕೆ ಇಟ್ಟು ದಾಖಲೆಯ 136 ಶಾಸಕರ ಆಯ್ಕೆಯ ಫಲಿತಾಂಶ ಘೋಷಣೆಯಾದ ದಿನ ಎಂದ ಶಾಸಕರು ಪಂಚ ಗ್ಯಾರಂಟಿ ಸೇರಿದಂತೆ ಚುನಾವಣಾ ಪ್ರಣಾಳಿಕೆ ನೀಡಿರುವ ಬಹುತೇಕ ಆಶ್ವಾಸನೆಯನ್ನು ನಮ್ಮ ಸರ್ಕಾರ ಈಡೇರಿಸಿ ಜನತೆಯ ನಂಬಿಕೆ ಉಳಿಸಿಕೊಂಡಿದೆ.

ಕನ್ನಡಪ್ರಭ ವಾರ್ತೆ ಮಾಲೂರು

ಮಾಲೂರು ಪುರಸಭೆ ಶೀಘ್ರದಲ್ಲೇ ನಗರಸಭೆಯಾಗಿ ಮೇಲ್ದರ್ಜೆಗೆ ಏರಲಿದೆ. ಈಗಾಗಲೇ ರಾಜ್ಯ ಸರ್ಕಾರ ಇದಕ್ಕೆ ಹಸಿರು ನಿಶಾನೆ ತೋರಿಸಿದ್ದು, ಗೆಜೆಟ್‌ನಲ್ಲಿ ಪ್ರಕಟಗೊಳಸಲಿದೆ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.

ಅವರು ಪಟ್ಟಣದ ಕಾಂಗ್ರೆಸ್‌ ಭವನದಲ್ಲಿ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ತಾವು ಶಾಸಕರಾಗಿ 2 ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ತಾಲೂಕು ಜನತೆಗೆ ನೀಡುತ್ತಿರುವ ಕೂಡುಗೆ ಎಂದರು.

ಬಿಜೆಪಿ ವಿರುದ್ಧ ತೀರ್ಪು ನೀಡಿದ ದಿನ:

ಇಂದಿಗೆ ಎರಡು ವರ್ಷದ ಹಿಂದೆ ರಾಜ್ಯದ ಜನತೆ ಬಿಜೆಪಿ ಭ್ರಷ್ಟ ಸರ್ಕಾರ ವಿರುದ್ಧ ತೀರ್ಪು ನೀಡಿದ ದಿನವಾಗಿದೆ. ಕಾಂಗ್ರಸ್‌ ಮೇಲೆ ನಂಬಿಕೆ ಇಟ್ಟು ದಾಖಲೆಯ 136 ಶಾಸಕರ ಆಯ್ಕೆಯ ಫಲಿತಾಂಶ ಘೋಷಣೆಯಾದ ದಿನ ಎಂದ ಶಾಸಕರು ಪಂಚ ಗ್ಯಾರಂಟಿ ಸೇರಿದಂತೆ ಚುನಾವಣಾ ಪ್ರಣಾಳಿಕೆ ನೀಡಿರುವ ಬಹುತೇಕ ಆಶ್ವಾಸನೆಯನ್ನು ನಮ್ಮ ಸರ್ಕಾರ ಈಡೇರಿಸಿ ಜನತೆಯ ನಂಬಿಕೆ ಉಳಿಸಿಕೊಂಡಿದೆ. ಇದೇ ಶನಿವಾರ ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್‌ ಲೋಕಾರ್ಪಣೆ ಮಾಡಲಾಗುವುದು ಎಂದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸಿ.ಲಕ್ಷ್ಮಿನಾರಾಯಣ್‌ ,ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವಿಜಯನಾರಸಿಂಹ ಮಾತನಾಡಿದರು. ಇದೇ ಸಂದರ್ಭದಲ್ಲಿ ಶಾಸಕರು ಪಕ್ಷದ ಮುಖಂಡರುಗಳಿಗೆ ತಾವೇ ಸಿಹಿ ತಿನ್ನಿಸಿದರು. ಪುರಸಭೆ ಅಧ್ಯಕ್ಷೆ ವಿಜಯಲಕ್ಷ್ಮಿ ,ಉಪಾಧ್ಯಕ್ಷೆ ವಿಜಯಲಕ್ಷಿ ಕೃಷ್ಣಪ್ಪ ,ಕೆ.ಪಿ.ಸಿ.ಸಿ ಸದಸ್ಯ ಅಂಜನಿ ಸೋಮಣ್ಣ,ಪ್ರದೀಪ್‌ ರೆಡ್ಡಿ ,ಮಾಜಿ ಅಧ್ಯಕ್ಷೆ ಕೋಮಲ ನಾರಾಯಣ್‌ ,ಪ್ರಾಧಿಕಾರ ಅಧ್ಯಕ್ಷ ನಯೀಂ,ಪುರಸಭೆ ಸದಸ್ಯ ಇಂತಿಯಾಜ್‌ ,ವೆಂಕಟೇಶ್‌ ,ಆನೇಪುರ ಹನುಮಂತಪ್ಪ,ರಮೇಶ್‌,ವೆಂಕಟಸ್ವಾಮಿ,ಆಂಜಿನಪ್ಪ ,ಮಂಜುನಾಥ್‌ ರೆಡ್ಡಿ ,ನವೀನ್‌,ರೋಹಿತ್‌,ತನ್ವೀರ್‌ ,ಮೈಲಾಂಡಹಳ್ಳಿ ನಾರಾಯಣಸ್ವಾಮಿ ಇನ್ನಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಯ್ಯಪ್ಪನ ಮಾಲೆ ಧರಿಸಿದ ಬಾಲಕನ ಮೇಲೆ ಶಿಕ್ಷಕ ಹಲ್ಲೆ!
ತಂದೆಗೆ ಕಿರುಕುಳ ನೀಡದಂತೆ ಚೈತ್ರಾ ಕುಂದಾಪುರಗೆ ಆದೇಶ