ಬೀದರ್: ಆಧುನಿಕ ಜೀವನ ಪದ್ದತಿಯಲ್ಲಿ ಮನುಷ್ಯ ಯಾಂತ್ರಿಕ ಬದುಕನ್ನು ನಡೆಸುತ್ತಿದ್ದಾನೆ ಎಂದು ಖ್ಯಾತ ಸಾಹಿತಿ, ಚುಟುಕು ಬರಹಗಾರ ಎಚ್. ಡುಂಡಿರಾಜ್ ಹೇಳಿದರು. ಶನಿವಾರ ನಗರದ ಬಸವಮುಕ್ತಿ ಮಂದಿರದ ಅನುಭವ ಮಂಟಪ ಹರ್ಬಲ್ ಕ್ಲಬ್ ಆವರಣದಲ್ಲಿ ಜಿಲ್ಲಾ ಕಸಾಪ ಹಮ್ಮಿಕೊಂಡಿದ್ದ ಸಾಹಿತ್ಯ -ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮತ್ತು ಶಿವಕುಮಾರ ಕಟ್ಟೆ ಅವರು ರಚಿಸಿರುವ, ಶಂಭುಲಿಂಗ ವಾಲದೊಡ್ಡಿ ಅವರು ಹಾಡಿರುವ ಮತ್ತು ದಿಲೀಪ್ ಕಾಡವಾದ ಸಂಗೀತ ಸಂಯೋಜನೆ ಮಾಡಿರುವ ''''''''ಅನಂತಕಾಲ ಉರುಳಿದವು... ಹಾಗೂ "ಭಾವಸಾಗರಿ'''''''' ಎನ್ನುವ ಎರಡು ಭಾವಗೀತೆಗಳ ಧ್ವನಿಮುದ್ರಿತ ಥಂಬ್ಲೈನ್ ಭಿತ್ತಿಪತ್ರಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.ಅತ್ಯಂತ ಕಡಿಮೆ ಶಬ್ದಗಳನ್ನು ಬಳಸುವ ಮೂಲಕ ಮತ್ತು ಚುಟುಕಿನ ಕೊನೆಯಲ್ಲಿ ಪಂಚ್ ಅಥವಾ ವಿಶೇಷ ಅರ್ಥ ಬರಿವ ಪದಗಳನ್ನು ಬಳಸುವುದು ಉತ್ತಮ. ಇರುವ ವಿಷಯವನ್ನೇ ವಿಶಿಷ್ಟಾರ್ಥ ಬರುವ ರೀತಿಯಲ್ಲಿ ಚುಟುಕು ಬರೆಯಲು ಸಲಹೆ ನೀಡಿದರು. ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಅವರು ಗಡಿ ಭಾಗದಲ್ಲಿ ಕನ್ನಡ ಉಳಿಸುವ ಸರ್ವಪ್ರಯತ್ನಗಳನ್ನು ಕಸಾಪ ಮಾಡುತ್ತಿದೆ ಎಂದರು. ಸಂವಾದದಲ್ಲಿ ಡಾ.ಶ್ರೇಯಾ ಮಹೇಂದ್ರಕರ್, ಕೇಶವ ದಡ್ಡೆ, ಎಸ್.ಎಸ್.ಹೊಡಮನಿ, ಉಮಾದೇವಿ ಬಾಪೂರೆ ಅವರ ಪ್ರಶ್ನೆಗಳಿಗೆ ಡುಂಡಿರಾಜ್ ಉತ್ತರಿಸಿದರು. ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಡಾ. ಸಂಜೀವಕುಮಾರ ಅತಿವಾಳೆ ಅವರನ್ನು ಗೌರವಿಸಲಾಯಿತು, ಕಸಾಪ ಕಾರ್ಯದರ್ಶಿ ಶಿವಕುಮಾರ ಕಟ್ಟೆ ಸ್ವಾಗತಿಸಿದರು. ಜಯದೇವಿ ಯದಲಾಪುರೆ ನಿರೂಪಿಸಿದರೆ ಡಾ.ಬಸವರಾಜ ಬಲ್ಲೂರು ವಂದಿಸಿದರು. ಹಾಸ್ಯ ಬರಹಗಾರ ಹಾಗೂ ಚಿತ್ರ ಸಾಹಿತಿ ಎಂ.ಎಸ್.ನರಸಿಂಹಮೂರ್ತಿ, ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ, ಬೆಂಗಳೂರಿನ ಸೈಸೆಕ್ ಸಂಸ್ಥೆಯ ಪ್ರೋಗ್ರಾಂ ವ್ಯವಸ್ಥಾಪಕರಾದ ಬಿ.ಎಚ್. ವನಜಾಕ್ಷಿ, ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ಭಾರತಿ ವಸ್ತ್ರದ ಮತ್ತಿತರರಿದ್ದರು. -- ಚಿತ್ರ 14ಬಿಡಿಆರ್58 ಖ್ಯಾತ ಸಾಹಿತಿ, ಚುಟುಕು ಬರಹಗಾರ ಎಚ್. ಡುಂಡಿರಾಜ್ ಅವರು ಶನಿವಾರ ಬೀದರ್ನಲ್ಲಿ ಶಿವಕುಮಾರ ಕಟ್ಟೆ ಅವರು ರಚಿಸಿರುವ ಭಾವಗೀತೆಗಳ ಧ್ವನಿಮುದ್ರಿತ ಥಂಬ್ಲೈನ್ ಭಿತ್ತಿಪತ್ರಗಳನ್ನು ಬಿಡುಗಡೆಗೊಳಿಸಿದರು. ---