ಯುವ ಪ್ರತಿಭೆ ಬೆಳೆಸಲು ಕಾಲೇಜು ಉತ್ಸವಗಳು ಅದ್ಭುತ ವೇದಿಕೆ

KannadaprabhaNewsNetwork |  
Published : Feb 01, 2026, 02:30 AM IST
9 | Kannada Prabha

ಸಾರಾಂಶ

ಪ್ರತಿಭೆ ಎನ್ನುವುದು ನಿಂತ ನೀರಲ್ಲ. ಅದು ಯಾವಾಗಲೂ ನದಿಯಂತೆ ಹರಿಯುತ್ತಿರುತ್ತದೆ. ಹೀಗಾಗಿ, ಇಂತಹ ಪ್ರತಿಭೆಗಳು ಹೊರ ಹೊಮ್ಮಲು ಶಿಕ್ಷಣ ಸಂಸ್ಥೆಗಳು ವೇದಿಕೆ ಕಲ್ಪಿಸುವುದನ್ನು ಮುಖ್ಯ ಕರ್ತವ್ಯವಾಗಿಸಿಕೊಳ್ಳಬೇಕು

ಫೋಟೋ- 29ಎಂವೈಎಸ್9

----ಕನ್ನಡಪ್ರಭ ವಾರ್ತೆ ಮೈಸೂರುಯುವ ಪ್ರತಿಭೆಗಳನ್ನು ಬೆಳೆಸಲು ಕಾಲೇಜು ಉತ್ಸವಗಳು ಅದ್ಭುತ ವೇದಿಕೆಯಾಗಿದೆ ಎಂದು ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ಬಿ. ನಿರಂಜನಮೂರ್ತಿ ತಿಳಿಸಿದರು.ನಗರದ ಸರಸ್ವತಿಪುರಂನ ಜೆಎಸ್‌ಎಸ್‌ಮಹಿಳಾ ಕಾಲೇಜಿನಲ್ಲಿ ಗುರುವಾರ ನಡೆದ ವಾಣಿಜ್ಯ ಮತ್ತು ನಿರ್ವಹಣಶಾಸ್ತ್ರ ವಿಭಾಗದ ರಾಜ್ಯ ಮಟ್ಟದ ಮ್ಯಾನ್‌.ಕಾಮ್‌.ಫೆಸ್ಟ್‌ಅವಿಷ್ಕಾರ್‌- 2026ರ ಆರೋಹಣ ಲಾಂಛನ ಅನಾವರಣ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಪ್ರತಿಭೆ ಎನ್ನುವುದು ನಿಂತ ನೀರಲ್ಲ. ಅದು ಯಾವಾಗಲೂ ನದಿಯಂತೆ ಹರಿಯುತ್ತಿರುತ್ತದೆ. ಹೀಗಾಗಿ, ಇಂತಹ ಪ್ರತಿಭೆಗಳು ಹೊರ ಹೊಮ್ಮಲು ಶಿಕ್ಷಣ ಸಂಸ್ಥೆಗಳು ವೇದಿಕೆ ಕಲ್ಪಿಸುವುದನ್ನು ಮುಖ್ಯ ಕರ್ತವ್ಯವಾಗಿಸಿಕೊಳ್ಳಬೇಕು. ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ, ಸಂವಹನ ಕೌಶಲ ಮತ್ತು ಜ್ಞಾನ ವೃದ್ಧಿಸಲು ಇಂತಹ ಉತ್ಸವಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಅವರು ಹೇಳಿದರು.ಹಳೇಯ ನೀರು ಹೋಗಿ ಹೊಸ ನೀರು ಹರಿದು ಬರುವುದು ಪ್ರಕೃತಿಯ ನಿಯಮ. ಅದೇ ರೀತಿ ಎಲ್ಲಾ ಕ್ಷೇತ್ರದಲ್ಲೂ ಹೊಸ ಹೊಸ ಪ್ರತಿಭೆಗಳು ಆವಿಷ್ಕಾರಗೊಳ್ಳಬೇಕು. ಇದಕ್ಕೆ ಪೂರಕವಾದಂತಹ ವಾತಾವರಣವನ್ನು ಶಾಲಾ ಕಾಲೇಜು ಮಟ್ಟದಲ್ಲಿ ನಿರ್ಮಿಸಬೇಕು. ಅದಕ್ಕಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ಬೇರೆ ಬೇರೆ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಿ ವೇದಿಕೆ ಕಲ್ಪಿಸಬೇಕು ಎಂದರು. ರ್ಯಾಪ್ ಗಾಯನರ್ಯಾಪ್ ಗಾಯಕಿ ಐಶಿರಿ ಶರ್ಮಾ, ನಾನು ಜೆಎಸ್‌ಎಸ್ ಮಹಿಳಾ ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಎಂದು ಹೇಳುವುದಕ್ಕೆ ಹೆಮ್ಮೆಯಾಗುತ್ತಿದೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹ ಪಠ್ಯ ಕಾರ್ಯಕ್ರಮಗಳು ಮಹತ್ವದಾಗಿದೆ ಎಂದ ಅವರು, ತಮ್ಮ ರ್ಯಾಪ್ ಗಳನ್ನು ಹಾಡುವುದರ ಮೂಲಕ ವಿದ್ಯಾರ್ಥಿನಿಯರನ್ನು ರಂಜಿಸಿದರು. ರಾಜ್ಯ ಮಟ್ಟದ ಮ್ಯಾನ್.ಕಾಮ್.ಫೆಸ್ಟ್ ಫೆ.6 ಮತ್ತು 7 ರಂದು ನಡೆಯಲಿದೆ. ಇದೇ ವೇಳೆ ಆರೋಹಣ ಲಾಂಛನವನ್ನು ಚಲನಚಿತ್ರ ನಟ ನಿಹಾರ್ ಮುಖೇಶ್ ಅನಾವರಣಗೊಳಿಸಿದರು. ನಂತರ ಫೆಸ್ಟ್‌ ನ ವಿಜ್ಞಾಪನ (ಮಾರ್ಕೆಟಿಂಗ್), ನೇತೃತ್ವ (ಎಚ್‌ಆರ್), ಅನ್ವೇಷಣ (ಟ್ರೆಜರ್ ಹಂಟ್), ಶಿಖರ (ಬೆಸ್ಟ್ ಮ್ಯಾನೇಜರ್) ಮತ್ತು ಸಮನ್ವಯ (ಗ್ರೂಪ್ ಡ್ಯಾನ್ಸ್) ಸ್ಪರ್ಧೆಗಳ ಲಾಂಛನ ಸಹ ಅನಾವರಣಗೊಳಿಸಲಾಯಿತು.ಕಾಲೇಜಿನ ಪ್ರಾಂಶುಪಾಲ ಡಾ. ರೇಚಣ್ಣ, ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ.ವಿ. ಗಂಗಾಧರಸ್ವಾಮಿ, ಎಂ.ಕೆ. ಉಷಾರಾಣಿ, ಡಾ.ಎಸ್. ಗೀತಾ ಇದ್ದರು. ನಿಖಿತಾ ಭಟ್ ತಂಡದವರು ಪ್ರಾರ್ಥಿಸಿದರು. ಎಂ. ಕವನ ಸ್ವಾಗತಿಸಿದರು. ಐಶ್ವರ್ಯ ಶಿವಾನಂದ ವಂದಿಸಿದರು. ಎನ್. ಪುಣ್ಯ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಳಚೆ ನೀರಲ್ಲಿ ತಟ್ಟೆ ತೊಳೆದ ಪ್ರಕರಣ; ಶಿಕ್ಷಕಿ ಅಮಾನತು
ಅಲೆಮಾರಿ ಜನಾಂಗದವರು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲಿ: ಪಲ್ಲವಿ