ನೆಲಮಂಗಲ: ಗಜಾರಿಯ ಬಡಾವಣೆಯಲ್ಲಿ ಟಾಟಾಎಸ್ ವಾಹನದಿಂದ ಕೆಳಗೆ ಬಿದ್ದು ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ. ಮೃತನನ್ನು ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಮಾತೃಪಲ್ಲಿ ಗ್ರಾಮದ ನಿವಾಸಿ ದೇವರಾಜು(35) ಎಂದು ಗುರುತಿಸಲಾಗಿದೆ. ಕಳೆದ 3 ವರ್ಷಗಳ ಹಿಂದೆ ಪತ್ನಿ ಅನಿತಾಳನ್ನು ತೊರೆದಿದ್ದ ದೇವರಾಜು ನಗರದ ಗಜಾರಿಯ ಬಡಾವಣೆ ನಿವಾಸಿ ನಾಸೀರ್ ಎಂಬಾತನ ಬಳಿ ಕುರಿ ಮೇಕೆ ವ್ಯಾಪಾರ ಮಾಡುತ್ತಿದ್ದ, ಪ್ರತಿನಿತ್ಯ ವಾಹನದಲ್ಲೇ ಮಲಗುತ್ತಿದ್ದನು. ಎಂದಿನಂತೆ ಶುಕ್ರವಾರ ರಾತ್ರಿ ಮದ್ಯ ಸೇವಿಸಿ ಮಲಗಲು ತೆರಳಿದ್ದು ಕಾಲು ಜಾರಿ ಕೆಳಗೆ ಬಿದ್ದು ಮೃತ ಪಟ್ಟಿದ್ದಾನೆ. ಶನಿವಾರ ಬೆಳಗ್ಗೆ ಸ್ಥಳೀಯರೊಬ್ಬರು ನೋಡಿ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ್ದ ನಗರ ಪೊಲೀಸ್ ಇನ್ಸ್‌ಪೆಕ್ಟರ್ .ಡಿ.ಶಶಿಧರ್ ನೇತೃತ್ವದ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.ಡೆಸಿದರು.