ನಾಲತ್ವಾಡದ ವೀರೇಶ್ವರ ಶಿವಶರಣರ ಪುರಾಣ ಮಹಾ ಮಂಗಲೋತ್ಸವ ಕಾರ್ಯಕ್ರಮಕನ್ನಡಪ್ರಭ ವಾರ್ತೆ ಗಜೇಂದ್ರಗಡ
ಸ್ಥಳೀಯ ಮೈಸೂರು ಮಠದಲ್ಲಿ ನಡೆದ ನಾಲತ್ವಾಡದ ವೀರೇಶ್ವರ ಶಿವಶರಣರ ಪುರಾಣ ಮಹಾ ಮಂಗಲೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಸಂತೋಷದಿಂದ ಇರಬೇಕು ಎಂಬುದು ಪ್ರತಿಯೊಬ್ಬರಲ್ಲಿರುವ ಸಹಜ ಆಸೆ. ಆದರೆ ಇಂದು ಆಸೆಗಳನ್ನು ಬೆನ್ನತ್ತಿರುವ ಮನುಷ್ಯರು ಇರುವ ನೆಮ್ಮದಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಸಂತೃಪ್ತಿ, ಸಮಾಧಾನಕರ ಹಾಗೂ ಗೌರಬಯುತ ಜೀವನ ನಡೆಸಬೇಕೆಂಬ ಸಂಕಲ್ಪ ಮಾಡಬೇಕಿದೆ. ಇರುವುದರಲ್ಲಿ ಸಂತಸ ಪಟ್ಟುಕೊಂಡು ಸಂತೋಷದಿಂದ ಜೀವನ ನಡೆಸಬೇಕೆಂಬ ಸಂಕಲ್ಪದ ಸಿದ್ಧತೆ ಹಾಗೂ ತಿಳಿವಳಿಕೆಗಾಗಿ ಪ್ರತಿವರ್ಷ ಇಂತಹ ಪ್ರವಚನಗಳನ್ನು ನಡೆಸಲಾಗುತ್ತದೆ ಎಂದ ಅವರು, ೧೨ನೇ ಶತಮಾನದಲ್ಲಿ ಶಿವ ಶರಣರು ನಡೆಸಿದ ಶ್ರೇಷ್ಠ ಜೀವನವನ್ನು ನಾಲತ್ವಾಡ ವೀರೇಶ್ವರ ಶರಣರು ತೋರಿಸಿದ್ದಾರೆ. ರಾಜ್ಯವು ಇಷ್ಟೊಂದು ಸುಶಿಕ್ಷತ ಹಾಗೂ ಮಠಗಳು ಇಂದು ಇಷ್ಟೊಂದು ಸಮಾಜಮುಖಿಯಾಗಿ ಬೆಳೆದಿರುವುದರ ಹಿಂದೆ ಹಾನಗಲ್ ಗುರು ಕುಮಾರ ಮಹಾ-ಶಿವಯೋಗಿಗಳ ಪ್ರೇರಣಾ ಶಕ್ತಿಯಿದೆ ಎಂದರು.ಮೈಸೂರು ಸಂಸ್ಥಾನ ಮಠದ ವಿಜಯಮಹಾಂತ ಸ್ವಾಮೀಜಿ ಮಾತನಾಡಿ, ಶರಣರ, ದಾರ್ಶನಿಕರ ಕಥೆ, ಪುರಾಣ ಆಲಿಸುವುದರಿಂದ ನಮ್ಮ ಪಾಪಗಳೆಲ್ಲ ಅಳಿದು ಪುಣ್ಯ ಪ್ರಾಪ್ತಿಯಾಗುತ್ತದೆ. ಹೀಗಾಗಿ ಶ್ರಾವಣ ಮಾಸದಲ್ಲಿ ನಡೆಯುವ ಪುರಾಣ ಹಾಗೂ ಪ್ರವಚನಗಳಲ್ಲಿ ಪಾಲಕರು ಯುವ ಸಮೂಹವನ್ನುಕರೆ ತಂದು ನಮ್ಮ ಸಂಸ್ಕೃತಿ, ಆಚಾರ, ವಿಚಾರ ಮತ್ತು ಪರಂಪರೆಯ ಮಹತ್ವ ತಿಳಿಸಬೇಕಿದೆ ಎಂದರು.
ಈ ಸಂದರ್ಭ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಮತ್ತು ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.