ದಣಿವರಿಯದ ಸಮಾಜ ಸೇವೆಯಿಂದ ಮಾನವ ಮಹಾದೇವ

KannadaprabhaNewsNetwork |  
Published : Jan 17, 2024, 01:47 AM IST
ತಿಕೋಟಾ ತಾಲೂಕಿನ ತಾಜಪೂರ ಶ್ರೀ ಮಡಿವಾಳೇಶ್ವರ ಮಠದಲ್ಲಿ ಹಮ್ಮಿಕೊಂಡ ಶ್ರೀ ವೇ.ಮೂ.ಪಂ.ಶಂಕರಯ್ಯ ಮಹಾಸ್ವಾಮಿಗಳವರ ‘ನಿಜಜಂಗಮ’ ಅಭಿನಂದನ ಗ್ರಂಥ ಲೋಕಾರ್ಪಣೆಗೊಳಿಸಲಾಯಿತು  | Kannada Prabha

ಸಾರಾಂಶ

ತಿಕೋಟಾ ತಾಲೂಕಿನ ತಾಜಪುರ ತೋಟದ ಆಶ್ರಮದ ಮಡಿವಾಳೇಶ್ವರ ಮಠದಲ್ಲಿ ವೇ.ಮೂ.ಪಂ ಶಂಕರಯ್ಯ ಮಹಾಸ್ವಾಮಿಗಳವರ ನಿಜಜಂಗಮ ಅಭಿನಂದನ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟನೆಯಲ್ಲಿ ನಾಗಠಾಣ ಉದಯಲಿಂಗೇಶ್ವರ ಹಿರೇಮಠದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದ್ದು ಹೀಗೆ.

ಕನ್ನಡಪ್ರಭ ವಾರ್ತೆ ವಿಜಯಪುರ

ದಣಿವರಿಯದ ಸಮಾಜ ಸೇವೆಯಿಂದ ಮಾನವ ಮಹಾದೇವನಾಗುತ್ತಾನೆ. ನಮ್ಮಲ್ಲಿರುವ ಉತ್ತಮ ಗುಣಗಳೇ ನಮ್ಮನ್ನು ಎತ್ತರಕ್ಕೆ ಕರೆದೊಯ್ಯುತ್ತವೆ ಎಂದು ನಾಗಠಾಣ ಉದಯಲಿಂಗೇಶ್ವರ ಹಿರೇಮಠದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.

ತಿಕೋಟಾ ತಾಲೂಕಿನ ತಾಜಪುರ ತೋಟದ ಆಶ್ರಮದ ಮಡಿವಾಳೇಶ್ವರ ಮಠದಲ್ಲಿ ವೇ.ಮೂ.ಪಂ ಶಂಕರಯ್ಯ ಮಹಾಸ್ವಾಮಿಗಳವರ ನಿಜಜಂಗಮ ಅಭಿನಂದನ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಕವಾಗಿ ಅಪಾರ ಕೊಡುಗೆ ನೀಡಿದ ಶಂಕ್ರಯ್ಯ ಸ್ವಾಮಿಗಳ ಕುರಿತು ರಚನೆಯಾದ ನಿಜಜಂಗಮ ಅಭಿನಂದನಾ ಕೃತಿ ಅರ್ಥಪೂರ್ಣ ಹಾಗೂ ಮೌಲಿಕ ಕೃತಿಯಾಗಿದೆ. ಶಂಕ್ರಯ್ಯ ಸ್ವಾಮಿಗಳು ಅಖಂಡ 85 ವರ್ಷ ಕರ್ನಾಟಕ-ಮಹಾರಾಷ್ಟ್ರ ತುಂಬೆಲ್ಲ ಪುರಾಣ-ಪ್ರವಚನದಿಂದ ಭಕ್ತರನ್ನು ಉದ್ದರಿಸಿದರು. ಹೋದಲ್ಲೆಲ್ಲ ಭಕ್ತರಿಗೆ ಲಿಂಗಧಾರಣೆ ಮತ್ತು ಪೂಜಾ ವಿಧಾನಗಳನ್ನು ಹೇಳಿಕೊಡುವ ಪೂಜ್ಯರು ನಿಜಜಂಗಮರೇ ಸರಿ ಎಂದರು.ಬಬಲೇಶ್ವರ ಶಾಂತವೀರ ಪ.ಪೂ.ಕಾಲೇಜಿನ ಪ್ರೊ.ಮಹಾದೇವ ರೆಬಿನಾಳ ಮಾತನಾಡಿ, ಯಾವುದೇ ಮಹತ್ಕಾರ್ಯಗಳು ಜರುಗಬೇಕಾದರೆ ಸದ್ಗುರುವಿನ ಕೃಪೆ ಮುಖ್ಯವಾದುದು. ಈ ಗ್ರಂಥದಲ್ಲಿ ಪೂಜ್ಯ ಮಡಿವಾಳಯ್ಯನವರ ಚರಿತ್ರೆ, ಶಂಕ್ರಯ್ಯ ಸ್ವಾಮಿಗಳ ಚರಿತ್ರೆ, ಜಿಲ್ಲೆಯ ವಿವಿಧ ಮಠಗಳ ಪರಿಚಯ, ಮಠದಲ್ಲಿ ನಡೆದ ಧರ್ಮಸಭೆ ಮತ್ತು ಶ್ರೀಗಳ ಕುರಿತು ಭಕ್ತರ-ಅನುಯಾಯಿಗಳ ನುಡಿಗಳು ಮುಂತಾದ ಭಾಗಗಳ ಮೂಲಕ ಗ್ರಂಥ ಅರ್ಥಪೂರ್ಣವಾಗಿ ಮೂಡಿಬಂದಿದೆ. ಯಾರ್‍ಯಾರದೋ ಗ್ರಂಥ ಬರೆಯುವುದಕ್ಕಿಂತ ಲೋಕಮಾನ್ಯ ಪುಣ್ಯ ಪುರುಷರ ಅಭಿನಂದನಾ ಗ್ರಂಥಗಳು ಮೂಡಿಬಂದಾಗ ಸಮಾಜಕ್ಕೆ ದಾರಿದೀಪವಾಗುತ್ತವೆ. ದಾಶ್ಯಾಳ-ತಾಜಪುರ ಗ್ರಾಮ ಮತ್ತು ಸುತ್ತಮುತ್ತಲೂ ಸಾಮರಸ್ಯ, ಕೃಷಿ ಸುಧಾರಣೆ, ಆಧ್ಯಾತ್ಮಿಕ ಭಾವ-ಚಿಂತನೆಗಳನ್ನು ಬಿತ್ತುತ್ತಿರುವ ಪೂಜ್ಯರು ಪ್ರಾಥಃಸ್ಮರಣಿಯರಾಗಿದ್ದಾರೆ ಎಂದು ತಿಳಿಸಿದರು.

ಗ್ರಂಥದ ಪ್ರಧಾನ ಸಂಪಾದಕ ಡಾ.ವಿ.ಡಿ.ಐಹೊಳ್ಳಿ ಮಾತನಾಡಿ, ಉದಯೋನ್ಮುಖ ಬರಹಗಾರರು, ಲೇಖಕರು ಮಾನವೀಯ ಮೌಲ್ಯ ಹಾಗೂ ಸಾಮಾಜಿಕ ಸಂಬಂಧ ಬೆಸೆದವರ ಕುರಿತು ಬರೆಯಲು ಪ್ರಯತ್ನಿಸಬೇಕು. ಅಭಿನಂದನ ಗ್ರಂಥ ಸಾಹಿತ್ಯದ ಒಂದು ಭಾಗ. ಶಂಕ್ರಯ್ಯ ಸ್ವಾಮಿಗಳು ಪ್ರವಚನದ ಮೂಲಕ ಕಾಯಕ, ದಾನ, ದಾಸೋಹಗಳಿಗೆ ಪ್ರೇರೆಪಣೆ ನೀಡಿದರು. ಕಾಯಕದಲ್ಲಿಯೇ ಕೈಲಾಸ ಕಂಡ ಶ್ರೀಗಳ ಕೃತಿ ಮುಧೋಳದ ಮೃತ್ಯುಂಜಯ ಸ್ವಾಮಿಗಳ ಅಭಿನಂದನ ಗ್ರಂಥದಂತೆ ನಿಜಜಂಗಮ ಕೃಷಿ ಕೂಡ ಮಹತ್ವ ಪೂರ್ಣತೆಯಿಂದ ಕೂಡಿದೆ ಎಂದರು.

ಕನ್ನೂರ ಹಿರೇಮಠದ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ತಡವಲಗಾ ಹಿರೇಮಠದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ಮಮದಾಪುರ ವಿರಕ್ತಮಠದ ಅಭಿನವ ಮುರುಘೆಂದ್ರ ಮಹಾಸ್ವಾಮಿಗಳು, ಹೊನವಾಡದ ಬಾಬುರಾವ ಮಹಾರಾಜರು, ಮುಖಂಡರಾದ ಆರ್.ಜಿ.ಯರನಾಳ, ಗುರುಲಿಂಗಪ್ಪ ಅಂಗಡಿ, ಡಾ.ಸುರೇಶ ಬಿರಾದಾರ, ಸಹನಾ ಕುಲಕರ್ಣಿ, ಲಕ್ಷ್ಮೀ ನಾಯಕ ಸಂಚಾಲಕ ಡಾ.ಮಳಿಸ್ವಾಮಿ ಹಿರೇಮಠ, ಪ್ರೊ.ಶರಣಗೌಡ ಪಾಟೀಲ, ಪ್ರೊ.ಸುಭಾಸಚಂದ್ರ ಕನ್ನೂರ, ಡಾ.ಮಾಧವ ಗುಡಿ, ಸಮಾಜ ಸೇವಕ ಅಪ್ಪಾಸಾಹೇಬ ಯರನಾಳ, ಜಗದೀಶ ಹಿರೇಮಠ, ಡಾ.ಸವಿತಾ ಝಳಕಿ, ಡಾ.ಎನ್.ಎಸ್.ಮಾಗಣಗೇರಿ, ವಿಜಯಲಕ್ಷ್ಮಣಿ ಹಿರೇಮಠ ಮುಂತಾದವರು ಇದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ