ವಾರದೊಳಗೆ ಮಂಡಲ ಅಧ್ಯಕ್ಷರ ನೇಮಕ

KannadaprabhaNewsNetwork |  
Published : May 08, 2025, 12:31 AM IST
ಪೋಟೋ, 7ಎಚ್‌ಎಸ್‌ಡಿ1: ಮದುವೆ ಊಟ ಸೇವಿಸಿ ಅಸ್ವಸ್ಥಗೊಂಡವರು ಶ್ರೀರಾಂಪುರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವುದು. | Kannada Prabha

ಸಾರಾಂಶ

ಹಿರಿಯೂರು ನಗರದ ಜಯದೇವ ಸಮುದಾಯ ಭವನದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಎಂಎಲ್‌ಸಿ ನವೀನ್‌ ಮಾತನಾಡಿದರು.

ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಎಂಎಲ್‌ಸಿ ನವೀನ್‌ ಮಾಹಿತಿಕನ್ನಡಪ್ರಭ ವಾರ್ತೆ ಹೊಸದುರ್ಗ

ಒಂದು ವಾರದೊಳಗೆ ಮಂಡಲ ಅಧ್ಯಕ್ಷರ ನೇಮಕವಾಗಲಿವೆ ಎಂದು ವಿಧಾನ ಪರಿಷತ್‌ ಸದಸ್ಯ ಕೆ.ಎಸ್‌.ನವೀನ್‌ ಹೇಳಿದರು.

ನಗರದ ಜಯದೇವ ಸಮುದಾಯ ಭವನದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ಸಿಗೆ ಬುದ್ಧಿ ಕಲಿಸಲು ಮತದಾರರು ಸಿದ್ದರಿದ್ದಾರೆ. ನಮ್ಮಲ್ಲಿರುವ ಗೊಂದಲ ನಿವಾರಣೆ ಮಾಡಿಕೊಂಡು ಮುಂದಿನ ಎಲ್ಲಾ ಚುನಾವಣೆಗೆ ಬಿಜೆಪಿ ಸಿದ್ಧತೆ ಮಾಡಿಕೊಳ್ಳುತ್ತೆವೆ ಎಂದರು.

ಆಪರೇಷನ್ ಸಿಂಧೂರ ಹೆಸರಿನಲ್ಲಿ ನಮ್ಮ ಸೇನೆ ಪಾಕಿಸ್ತಾನ ಉಗ್ರರ ನೆಲೆಗಳನ್ನು ಹೊಡೆದುರುಳಿಸಲಿವೆ, ಇದರಿಂದ ನಮ್ಮ ಪ್ರಧಾನಿ ಮೋದಿಯವರ ತಾಕತ್ತು ಜಗತ್ತಿಗೆ ಪರಿಚಯವಾಗಿದೆ. ನನ್ನ ಸಹೋದರಿಯರ ಹಣೆಯ ಸಿಂಧೂರ ಅಳಿಸಿದ ಪಾತಕಿಗಳ ಎಡೆಮುರಿ ಕಟ್ಟಿ ಕಾಶ್ಮೀರಕ್ಕೆ ಸುಂದರ ತಿಲಕ ಇಟ್ಟ ದೇಶದ ಹೆಮ್ಮೆಯ ಪ್ರಧಾನಿಗೆ ಅಭಿನಂದನೆಗಳು ಎಂದರು.

ಹೊಸದುರ್ಗದಲ್ಲಿ ಬಿಜೆಪಿ ಬಲಿಷ್ಠವಾಗಿದ್ದು ಕಾರ್ಯಕರ್ತರು ಗಟ್ಟಿಯಾಗಿದ್ದಾರೆ. ರಾಹುಕಾಲದಲ್ಲಿ ನಾನು ಬಿಜೆಪಿ ಸೇರಿದ್ದೆ, ನಾನು ದೇಶ, ರಾಜ್ಯ ನೋಡುವ ಹಾಗೆ ಕೆಲಸ ಮಾಡುವೆ, ನನಗೆ ಮತ ಹಾಕಿದ ಮಾತದಾರರ ಋಣ ತೀರಿಸುವ ಕೆಲಸ ಮಾಡುತ್ತೇನೆ. ಹಿಂದುಳಿದ ಸಮುದಾಯದ ಹೆಚ್ಚು ಹೆಚ್ಚು ಜನರು ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ ಎಂದರು.

ಪುರಸಭಾ ಸದಸ್ಯ ಕೆ.ಎಸ್‌.ನವೀನ್‌ ಮಾತನಾಡಿ, ಭಾರತೀಯರ ಸ್ವಾಭಿಮಾನದ ಪ್ರತಿಷ್ಠೆಯ ಪ್ರಶ್ನೆಯಾಗಿ ಉಳಿದಿದ್ದ ಪೆಹಲ್ಗಾಮ್ ಘಟನೆ ಮಾಸುವ ಮುನ್ನವೇ ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ ಹೆಮ್ಮೆಯ ಸೈನ್ಯ ಪಾಕಿಸ್ತಾನದ ಉಗ್ರರ ಅಡಗು ತಾಣಗಳ ಹುಟ್ಟಡಗಿಸಿ ಪ್ರಪಂಚಕ್ಕೆ ಭಾರತದ ಶಕ್ತಿಯನ್ನು ಅನಾವರಣಗೊಳಿಸಿದ್ದಾರೆ. ಕೇಂದ್ರ ಸರ್ಕಾರ ಮತ್ತು ಸೈನ್ಯದ ಬಗ್ಗೆ ಅಪಹಾಸ್ಯ ಮಾಡುವರು ಮುಂದಾದರು ಬಾಯಿ ಮುಚ್ಚಿಕೊಳ್ಳಲೇಬೇಕು. ಇದು ನನ್ನ ದೇಶ ನನ್ನ ಹೆಮ್ಮೆ, ನಮ್ಮ ಹೆಮ್ಮೆಯ ಸೈನಿಕರ ಶ್ರಮದ ಪ್ರತಿಫಲ ಎಂದರು.

ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಬುರ್ಡೆಕಟ್ಟೆ ರಾಜೇಶ್, ಕೆ.ಎಸ್‌.ಕಲ್ಮಠ್‌, ಬಿಜೆಪಿ ಮಂಡಲ ಅಧ್ಯಕ್ಷ ಗೂಳಿಹಟ್ಟಿ ಜಗದೀಶ್, ಪುರಸಭಾ ಅದ್ಯಕ್ಷೆ ರಾಜೇಶ್ವರಿ ಆನಂದ್ ಗೀತಾ ಆಸಂದಿ, ಪುರಸಭಾ ಮಾಜಿ ಅಧ್ಯಕ್ಷ ಶ್ರೀನಿವಾಸ್, ಸದಸ್ಯರಾದ ಮಂಜುನಾಥ್ ನಾಗರಾಜ್, ಮಾಜಿ ಜಿಪಂ ಸದಸ್ಯರಾದ ದೊಡ್ಡಘಟ್ಟ ದ್ಯಾಮಣ್ಣ, ಮಾವಿನಕಟ್ಟೆ ಗುರುಸ್ವಾಮಿ, ಪರಶುರಾಮಪ್ಪ ಹೆಬ್ಬಳ್ಳಿ ಮಲ್ಲಿಕಾರ್ಜುನ್, ತಮ್ಮಣ್ಣ ಲಿಂಗದೇವರು, ಹೇರೂರು ಮಂಜುನಾಥ್, ಪಂಪ, ಕಲ್ಲೇಶ್, ಸುಮಂತ್, ಮಲ್ಲಿಕಾರ್ಜುನ್ ರವಿಕಿರಣ್ ಪಾಟೀಲ್ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ