ನಂಜಪ್ಪ ಲೈಫ್‌ಕೇರ್‌ನಲ್ಲಿ ‘ಮಂಡಿನೋವು ಉಚಿತ ತಪಾಸಣಾ ಶಿಬಿರ’ ಪುನಾರಂಭ

KannadaprabhaNewsNetwork |  
Published : Sep 12, 2026, 01:45 AM IST
ಫೊಟೋ 11 ಟಿಟಿಎಚ್ 03: ವರ್ತುಲ ರಸ್ತೆ ನಿರ್ಮಾಣಕ್ಕೆ ವಿರೋದ ವ್ಯಕ್ತಪಡಿಸಿ ಪಟ್ಟಣದ ಪ್ರವಾಸಿಮಂದಿರದಲ್ಲಿ ಗ್ರಾಮಸ್ಥರು ಗ್ರಾಮೀಣ ಯೋಜನಾ ಪ್ರಾಧಿಕಾರದ ಅಧಿಕಾರಿಗಳಿಗೆ ತಕರಾರು ಅರ್ಜಿ ಸಲ್ಲಿಸಿದರು | Kannada Prabha

ಸಾರಾಂಶ

'Mandinovu free check-up camp' resumes at Nanjappa Lifecare

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ವಯೋ ಸಹಜ ಮಂಡಿ ನೋವು ಹಾಗೂ ತೀವ್ರ ಮಾದರಿಯ ಕೀಲು ನೋವಿನಿಂದ ಬಳಲುತ್ತಿರುವ ಜನರಿಗೆ ನೆರವಾಗಲು ''''''''ನಂಜಪ್ಪ ಲೈಫ್ ಕೇರ್'''''''' ಆಸ್ಪತ್ರೆಯಲ್ಲಿ ಆಯೋಜಿಸಿದ್ದ ವಿಶೇಷ ''''''''ಮಂಡಿನೋವು ತಪಾಸಣಾ ಶಿಬಿರ''''''''ಕ್ಕೆ ಸಾರ್ವಜನಿಕರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ.

ಈ ಮೊದಲು ಸೆ.1 ರಿಂದ 7ರವರೆಗೆ ನಿಗದಿಯಾಗಿದ್ದ ಈ ಶಿಬಿರವನ್ನು, ಸಾರ್ವಜನಿಕರ ಬೇಡಿಕೆ ಮತ್ತು ವಿನಂತಿ ಪುರಸ್ಕರಿಸಿ ಮತ್ತೆ ಸೆ.15 ರಿಂದ ಪುನಾರಂಭಿಸಿ 19 ರವರೆಗೆ ವಿಸ್ತರಿಸಲಾಗಿದ್ದು, ಪ್ರತಿದಿನ ಬೆಳಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ಈ ಶಿಬಿರ ನಡೆಯಲಿದೆ.

ಶಿವಮೊಗ್ಗ ಹಾಗೂ ಸುತ್ತಮುತ್ತ ಜಿಲ್ಲೆ ಮಾತ್ರವಲ್ಲದೆ ಬೆಂಗಳೂರು, ಮೈಸೂರು, ಕೊಡಗು ಹಾಗೂ ಉತ್ತರ ಕರ್ನಾಟಕದ ವಿವಿಧ ಭಾಗಗಳಿಂದ ಪ್ರತಿದಿನ ಹಲವಾರು ಸಾರ್ವಜನಿಕರು ಈ ಉಚಿತ ಶಿಬಿರದ ಸೌಲಭ್ಯ ಪಡೆಯಲು ಆಗಮಿಸುತ್ತಿದ್ದಾರೆ. ಈ ಹಿನ್ನೆಲೆ ದೂರದ ಊರುಗಳಿಂದ ಬರುವ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಲ್ಲಿ ಆಸ್ಪತ್ರೆ ಆಡಳಿತ ಮಂಡಳಿಯು ಶಿಬಿರದ ಅವಧಿಯನ್ನು ವಿಸ್ತರಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ.

ಬಿದ್ದು ಗಾಯಗೊಂಡು, ಸರಿಯಾದ ವೈದ್ಯಕೀಯ ಚಿಕಿತ್ಸೆ ಪಡೆಯದೆ ನಾಟಿ ಕಟ್ಟು (ಸಂಪ್ರದಾಯಿಕ ಕಟ್ಟು) ಮಾಡಿಸಿಕೊಂಡು ಕಾಲು ಡೊಂಕಾಗಿಸಿಕೊಂಡಿರುವವರು, ಸುದೀರ್ಘ ಅವಧಿಯಿಂದ ಹಳೆ ಮಂಡಿನೋವಿನಿಂದ ಬಳಲುತ್ತಿರುವವರು ಹಾಗೂ ಎಲ್ಲೂ ಸೂಕ್ತ ಪರಿಹಾರ ಸಿಗದೆ ಕಂಗಾಲಾದವರು. ಎರಡು ಮಂಡಿಗಳು ಸಂಪೂರ್ಣ ಡೊಂಕಾಗಿ, ಕುಳಿತರೆ ಏಳಲಾಗದೆ, ಮೆಟ್ಟಿಲು ಹತ್ತಲು ಭಯಪಡುವ ಸ್ಥಿತಿಯಲ್ಲಿರುವವರು.

ಮೂಳೆಗಳಲ್ಲಿ ಕ್ಯಾಲ್ಸಿಯಂ ಕೊರತೆಯಿಂದಾಗಿ (ಃoಟಿe ಅಚಿಟಛಿium ಆeಜಿiಛಿieಟಿಛಿಥಿ) ಮೂಳೆ ಸವೆತ ಹಾಗೂ ಕೀಲು ನೋವು ಎದುರಿಸುತ್ತಿರುವವರು. ಕೂತು ಏಳಲು ಕಷ್ಟಪಡುವ ಹಾಗೂ ದೈನಂದಿನ ಕೆಲಸ ಕಾರ್ಯಗಳಿಗೆ ಓಡಾಡಲಾಗದೆ ಮನೆಯಲ್ಲೇ ಕಾಲ ಕಳೆಯುತ್ತಿರುವ ಹಿರಿಯ ನಾಗರಿಕರು ಮತ್ತು ವಯಸ್ಕರು ಈ ಶಿಬಿರದ ಸದುಪಯೋಗ ಪಡೆಯಬಹುದು.

ಉಚಿತ ಸಮಾಲೋಚನೆ: ಅನುಭವೀ ಮೂಳೆ ಶಸ್ತ್ರಚಿಕಿತ್ಸಕರು (ಔಡಿಣhoಠಿeಜiಛಿ Sಠಿeಛಿiಚಿಟisಣs) ಪ್ರತಿಯೊಬ್ಬ ರೋಗಿಯ ಸಮಸ್ಯೆಯನ್ನು ಕೂಲಂಕಷವಾಗಿ ತಪಾಸಣೆ ಮಾಡಿ, ಸೂಕ್ತ ಸಲಹೆ ಮತ್ತು ಚಿಕಿತ್ಸಾ ಮಾರ್ಗದರ್ಶನ ನೀಡಲಿದ್ದಾರೆ. (ಗಮನಿಸಿ: ನಂಜಪ್ಪ ಲೈಫ್ ಕೇರ್‌ನಲ್ಲಿ ಪ್ರಥಮ ಬಾರಿಗೆ ಸಮಾಲೋಚನೆ ಪಡೆಯುತ್ತಿದ್ದಲ್ಲಿ ನೋಂದಣಿ ಶುಲ್ಕ ಮಾತ್ರ ಅನ್ವಯಿಸುತ್ತದೆ).

ತಪಾಸಣೆಗೆ ರಿಯಾಯಿತಿ: ಶಿಬಿರದಲ್ಲಿ ಪಾಲ್ಗೊಳ್ಳುವ ರೋಗಿಗಳಿಗೆ ಅಗತ್ಯವಿರುವ ರಕ್ತ ಪರೀಕ್ಷೆಗಳು ಹಾಗೂ ರೋಗನಿರ್ಣಯ (ಆiಚಿgಟಿosಣiಛಿ ಖಿesಣs) ಪರೀಕ್ಷೆಗಳ ಮೇಲೆ ಶೇ.20 ರಷ್ಟು ವಿಶೇಷ ರಿಯಾಯಿತಿ ನೀಡಲಾಗುತ್ತಿದೆ.

ಲಭ್ಯರಿರುವ ತಜ್ಞರು: ಮೂಳೆ ತಜ್ಞರ ಜೊತೆಗೆ ನುರಿತ ಫಿಸಿಯೋಥೆರಪಿಸ್ಟ್ (Phಥಿsioಣheಡಿಚಿಠಿisಣs), ಸೂಕ್ತ ಆಹಾರ ಪದ್ಧತಿ ತಿಳಿಸಲು ಆಹಾರ ತಜ್ಞರು (ಆieಣiಣiಚಿಟಿs) ಹಾಗೂ ಮಾನಸಿಕ ಧೈರ್ಯ ತುಂಬಲು ಸೈಕಾಲಜಿಸ್ಟ್ಗಳು (Psಥಿಛಿhoಟogisಣs) ಸ್ಥಳದಲ್ಲೇ ಲಭ್ಯವಿರಲಿದ್ದಾರೆ.

ಮಂಡಿನೋವು ಹಾಗೂ ಕೀಲು ನೋವಿನಿಂದ ಮುಕ್ತಿ ಪಡೆದು ಸಕ್ರಿಯ ಜೀವನ ನಡೆಸಲು ಬಯಸುವ ಶಿವಮೊಗ್ಗ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಸಾರ್ವಜನಿಕರು, ಹಿರಿಯರು ಮತ್ತು ವಯಸ್ಕರು ಈ ವಿಸ್ತರಿತ ಅವಕಾಶವನ್ನು ತಪ್ಪದೇ ಸದುಪಯೋಗಪಡಿಸಿಕೊಳ್ಳಬೇಕಾಗಿ ಆಸ್ಪತ್ರೆಯ ಪತ್ರಿಕಾ ಪ್ರಕಟಣೆ ತಿಳಿಸಿದೆ. ಮಾಹಿತಿಗಾಗಿ 08182-267300 ಅನ್ನು ಸಂಪರ್ಕಿಸಬಹುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಣೇಶೋತ್ಸವದಲ್ಲಿ ಪಿಒಪಿ ಮೂರ್ತಿಗೆ ಅವಕಾಶವಿಲ್ಲ
ಮಲೆ ಮಹದೇಶ್ವರ ಬೆಟ್ಟದಲ್ಲಿ ವಿಶೇಷ ಕುಂಭಾಭಿಷೇಕ