ಕಾರ್ಕಳ: ತಾಲೂಕಿನ ಮುಂಡ್ಕೂರು ಗ್ರಾಮದ ಸಚ್ಚೇರಿ ಗಾಂದಡ್ಪು ಶ್ರೀ ಮಹಾದೇವಿ ದೇವಸ್ಥಾನದಲ್ಲಿ 30ರಿಂದ ಏ.1ರವರೆಗೆ ಪುನಃ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಕ್ಷೇತ್ರದ ವ್ಯವಸ್ಥಾಪಕ ಕೇಶವ ಅಂಚನ್ ತಿಳಿಸಿದ್ದಾರೆ.
ಅನಾದಿಕಾಲದಿಂದ ಪೂರ್ವಜರು ಆರಾಧಿಸಿಕೊಂಡು ಬಂದ ಶ್ರೀ ಮಹಾದೇವಿ ಅಮ್ಮನವರ ಪುನಃ ಪ್ರತಿಷ್ಠೆ, ಶ್ರೀ ನಾಗದೇವರ ಮಹೋತ್ಸವ ಹಾಗೂ ಶ್ರೀ ಅಣ್ಣಪ್ಪ ಸ್ವಾಮಿಯ ಕಲಶಾಭಿಷೇಕವು ಕಡಂದಲೆ ವೇದಮೂರ್ತಿ ಶ್ರೀ ಸ್ಕಂದ ಭಟ್ ಅವರ ಪೌರೋಹಿತ್ಯದಲ್ಲಿ, ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಅರ್ಚಕ ವೇದಮೂರ್ತಿ ಶ್ರೀ ಹರಿನಾರಾಯಣ ಅಸ್ರಣ್ಣ ಅವರ ಉಪಸ್ಥಿತಿಯಲ್ಲಿ ನಡೆಯಲಿದೆ.
30ರಂದು ಬೆಳಿಗ್ಗೆ ತೋರಣ ಮುಹೂರ್ತ ಹಾಗೂ ದೇವತಾ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಗಲಿದೆ. ಸಂಜೆ ಸಾರ್ವಜನಿಕ ಅನ್ನಸಂತರ್ಪಣೆ, ಸಭಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವಾಗಿ ವಿಜಯ ಕುಮಾರ್ ಕೊಡಿಯಾಲ್ ಬೈಲ್ ತಂಡದ ಶಿವದೂತ ಗುಳಿಗೆ ತುಳು ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.31ರಂದು ವಿವಿಧ ಪೂಜಾ ವಿಧಿಗಳು ನಡೆಯಲಿದ್ದು, ಸಂಜೆ ಅನ್ನಸಂತರ್ಪಣೆ ಹಾಗೂ ಕುದ್ರೋಳಿ ಗಣೇಶ್ ತಂಡದ ವಿಸ್ಮಯ ಜಾದೂ ಮ್ಯಾಜಿಕ್ ಕಾರ್ಯಕ್ರಮ ನಡೆಯಲಿದೆ.
ಪೊಸ್ರಾಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ಜಗದೀಶ ಶೆಟ್ಟಿ ಸಚ್ಚರಪರಾರಿ, ಪೊಸ್ರಾಲು ಮುಂಡ್ಕೂರು ಬ್ರಹ್ಮ ಶ್ರೀ ನಾರಾಯಣ ಗುರು ಸಂಘದ ಗೌರವಾಧ್ಯಕ್ಷ ಶ್ರೀಧರ ಸನಿಲ್, ಆದಿಜಾರಾಂದಯ ದೈವಸ್ಥಾನ ಶಿರ್ವ ಇದರ ವ್ಯವಸ್ಥಾಪಕ ತಮ್ಮಣ್ಣ ಪೂಜಾರಿ, ಕಾರ್ಯಕ್ರಮದ ಸಂಯೋಜಕರಾದ ಕೃಷ್ಣ ಸಾಲ್ಯಾನ್ ಸಂಕಲಕರಿಯ ಹಾಗೂ ಶರತ್ ಶೆಟ್ಟಿ ಸಚ್ಚೇರಿಪೇಟೆ ಉಪಸ್ಥಿತರಿದ್ದರು.