ಮಂಡ್ಯ ಮಂಜುನಾಥಕನ್ನಡಪ್ರಭ ವಾರ್ತೆ, ಮಂಡ್ಯಜಿಲ್ಲೆಯಲ್ಲಿ ಬೆಳೆದು ನಿಂತಿರುವ ೩೭,೩೧೭ ಹಕ್ಟೇರ್ ಕಬ್ಬು ಬೆಳೆಯನ್ನು ರಕ್ಷಣೆ ಮಾಡುವುದಕ್ಕೆ ೮.೭೯ ಟಿಎಂಸಿ ಅಡಿ ನೀರಿನ ಅವಶ್ಯಕತೆ ಇದೆ. ಆದರೆ, ಪ್ರಸ್ತುತ ಜಲಾಶಯದಲ್ಲಿರುವುದು ೧೧ ಟಿಎಂಸಿ ಅಡಿ ನೀರು ಮಾತ್ರ. ಆ ನೀರನ್ನು ಕುಡಿಯುವ ನೀರಿಗೆ ಕಾಯ್ದಿರಿಸಲಾಗಿದೆ. ಮಳೆ ಆಶಾದಾಯಕವಾಗಿ ಬಂದಲ್ಲಿ ಕಬ್ಬು ಬೆಳೆ ರಕ್ಷಣೆ ಸಾಧ್ಯ. ಇಲ್ಲವಾದಲ್ಲಿ ನೀರಿನ ಕೊರತೆಯಿಂದ ಕಬ್ಬು ಬೆಳೆ ನಷ್ಟಕ್ಕೊಳಗಾಗುವ ಸಾಧ್ಯತೆಗಳೇ ಹೆಚ್ಚಿರುವುದು ರೈತರಲ್ಲಿ ಆತಂಕ ಮೂಡಿಸಿದೆ.ಪ್ರಸ್ತುತ ಕೃಷ್ಣರಾಜಸಾಗರ ಜಲಾಶಯದ ನೀರಿನ ಮಟ್ಟ ೮೨.೪೫ ಅಡಿ ಇದೆ. ಸೋಮವಾರದಿಂದ ಅಣೆಕಟ್ಟೆಗೆ ಹರಿದುಬರುವ ಒಳಹರಿವಿನ ಪ್ರಮಾಣದಲ್ಲಿ ಸ್ವಲ್ಪ ಪ್ರಮಾಣದ ಏರಿಕೆ ಕಂಡುಬಂದಿದೆ. ೭೬೪ ಕ್ಯುಸೆಕ್ ಇದ್ದ ಒಳಹರಿವಿನ ಪ್ರಮಾಣ ಇದೀಗ ೫೭೩೪ ಕ್ಯುಸೆಕ್‌ಗೆ ಏರಿಕೆಯಾಗಿದೆ. ನೀರಿನ ಮಟ್ಟದಲ್ಲಿ ಸುಮಾರು ಎರಡು ಅಡಿಗಳಷ್ಟು ಏರಿಕೆಯಾಗಿದೆ. ಜಲಾಶಯದಲ್ಲಿ ೧೨ ಟಿಎಂಸಿಯಷ್ಟು ನೀರು ಸಂಗ್ರಹವಾಗಿದೆ.ಯಾವ ತಾಲೂಕಿನಲ್ಲಿ ಎಷ್ಟು ಕಬ್ಬು?ಜಿಲ್ಲೆಯಲ್ಲಿ ೩ ತಿಂಗಳ ಕಬ್ಬು ೨೨೯೩ ಹೆಕ್ಟೇರ್, ೩ ರಿಂದ ೬ ತಿಂಗಳ ಕಬ್ಬು ೨೨೦೮ ಹೆಕ್ಟೇರ್, ೬ ರಿಂದ ೯ ತಿಂಗಳ ಕಬ್ಬು ೪೭೬೦ ಹೆಕ್ಟೇರ್, ೯ ರಿಂದ ೧೨ ತಿಂಗಳ ಕಬ್ಬು ೨೪,೪೭೬ ಹೆಕ್ಟೇರ್, ೧೨ ತಿಂಗಳ ಕಬ್ಬು ೩೫೮೦ ಹೆಕ್ಟೇರ್ ಸೇರಿ ೩೭,೩೧೭ ಹೆಕ್ಟೇರ್‌ನಷ್ಟು ಕಬ್ಬು ಇದೆ. ಮಂಡ್ಯ ತಾಲೂಕಿನಲ್ಲಿ ೮೮೫೫ ಹೆಕ್ಟೇರ್, ಮದ್ದೂರು-೧೦೨೪೩ ಹೆಕ್ಟೇರ್, ಮಳವಳ್ಳಿ-೩೨೯೦ ಹೆಕ್ಟೇರ್, ಶ್ರೀರಂಗಪಟ್ಟಣ-೨೯೭೦ ಹೆಕ್ಟೇರ್, ಪಾಂಡವಪುರ-೬೮೮೫ ಹೆಕ್ಟೇರ್, ಕೆ.ಆರ್.ಪೇಟೆ-೪೯೬೪ ಹೆಕ್ಟೇರ್, ನಾಗಮಂಗಲ ತಾಲೂಕಿನಲ್ಲಿ ೧೧೦ ಹೆಕ್ಟೇರ್‌ನಲ್ಲಿ ಕಬ್ಬು ಬೆಳೆ ಇದೆ.ನೀರಿನ ಪ್ರಮಾಣ ಎಷ್ಟು ಬೇಕು?ನೀರಾವರಿ ಇಲಾಖೆ ಅಧಿಕಾರಿಗಳ ಪ್ರಕಾರ ೨೨೯೩ ಹೆಕ್ಟೇರ್‌ನಲ್ಲಿರುವ ೩ ತಿಂಗಳ ಕಬ್ಬಿಗೆ ೦.೨೪ ಟಿಎಂಸಿ ಅಡಿ, ೨೨೦೮ ಹೆಕ್ಟೇರ್‌ನಲ್ಲಿರುವ ಕಬ್ಬು ಬೆಳೆಗೆ ೦.೪೩ ಟಿಎಂಸಿ, ೪೭೬೦ ಹೆಕ್ಟೇರ್‌ನಲ್ಲಿರುವ ಕಬ್ಬಿಗೆ ೧.೬೮ ಟಿಎಂಸಿ ಹಾಗೂ ೨೮,೦೫೬ ಹೆಕ್ಟೇರ್‌ನಲ್ಲಿರುವ ಕಬ್ಬಿಗೆ ೬.೪೪ ಟಿಎಂಸಿ ಅಡಿ ಸೇರಿದಂತೆ ೩೭೩೧೭ ಹೆಕ್ಟೇರ್‌ನಲ್ಲಿರುವ ಕಬ್ಬು ಬೆಳೆಗೆ ೮.೭೦ ಟಿಎಂಸಿ ಅಡಿ ನೀರಿನ ಅವಶ್ಯಕತೆ ಇದೆ.ಒಂದು ಟಿಎಂಸಿ ನೀರಿನಿಂದ ೩ ತಿಂಗಳ ಕಬ್ಬನ್ನು ೯೪೪೦ ಹೆಕ್ಟೇರ್, ೬ ತಿಂಗಳ ಕಬ್ಬನ್ನು ೫೧೪೯ ಹೆಕ್ಟೇರ್‌ನಲ್ಲಿ, ೯ ತಿಂಗಳ ಕಬ್ಬಿಗೆ ೨೮೩೨ ಹೆಕ್ಟೇರ್, ೧೨ ತಿಂಗಳ ಕಬ್ಬನ್ನು ೪೩೫೬ ಹೆಕ್ಟೇರ್‌ನಲ್ಲಿ ರಕ್ಷಣೆ ಮಾಡಬಹುದಾಗಿದೆ.ಸದ್ಯಕ್ಕೆ ನೀರು ಬಿಡುಗಡೆ ಇಲ್ಲಜಿಲ್ಲೆಯಲ್ಲಿ ೩೭,೩೧೭ ಹೆಕ್ಟೇರ್‌ನಲ್ಲಿ ಬೆಳೆದು ನಿಂತಿರುವ ಕಬ್ಬು ಬೆಳೆಯನ್ನು ರಕ್ಷಿಸಬೇಕಾದರೆ ವರುಣ ಕೃಪೆ ತೋರಲೇ ಬೇಕು. ಏಕೆಂದರೆ, ಜಲಾಶಯದಲ್ಲಿ ಅಷ್ಟೊಂದು ಪ್ರಮಾಣದ ನೀರಿನ ಸಂಗ್ರಹವಿಲ್ಲ. ಉತ್ತಮ ಮಳೆಯಾಗಿ ಕೃಷ್ಣರಾಜಸಾಗರ ಜಲಾಶಯದ ಒಳಹರಿವು ಹೆಚ್ಚಾಗಿ ೧೦೦ ಅಡಿ ತಲುಪುವವರೆಗೆ ಬೆಳೆಗಳಿಗೆ ನೀರು ಹರಿಸುವ ಸಾಧ್ಯತೆಗಳಿಲ್ಲ. ೯ ರಿಂದ ೧೨ ತಿಂಗಳವರೆಗಿನ ಕಬ್ಬು ೨೪,೪೭೬ ಹೆಕ್ಟೇರ್, ಹಾಗೂ ೧೨ ತಿಂಗಳ ಕಬ್ಬು ೩೫೮೦ ಹೆಕ್ಟೇರ್‌ನಲ್ಲಿದೆ. ಈಗ ನೀರಿನ ಕೊರತೆಯಾದರೆ ಕಬ್ಬಿನ ಇಳುವರಿ ಕುಂಠಿತಗೊಳ್ಳುವ ಆತಂಕ ರೈತರನ್ನು ಕಾಡುತ್ತಿದೆ. ಅದಕ್ಕಾಗಿ ೨೮೦೫೬ ಹೆಕ್ಟೇರ್‌ನಲ್ಲಿರುವ ಕಬ್ಬು ಬೆಳೆ ರಕ್ಷಣೆಗೆ ತಕ್ಷಣವೇ ನಾಲೆಗಳಿಗೆ ನೀರು ಹರಿಸಬೇಕೆಂಬ ಕೂಗು ರೈತ ಸಮುದಾಯದಲ್ಲಿ ಹೆಚ್ಚಾಗಿದೆ.---------------------------------------ವಿವಿಧ ಹಂತಗಳ ಕಬ್ಬಿನ ಬೆಳೆಯ ವಿಸ್ತೀರ್ಣ (ಹೆಕ್ಟೇರ್‌ಗಳಲ್ಲಿ)--------------------------------------------------- ೦-೩ ೩-೬ ೬-೯ ೯-೧೨ ೧೨ತಾಲೂಕು ತಿಂಗಳು ತಿಂಗಳು ತಿಂಗಳು ತಿಂಗಳು ತಿಂಗಳು ಒಟ್ಟು---------------------------------------------------ಮಂಡ್ಯ ೩೧೮ ೧೫೭ ೬೧೦ ೭೧೦೦ ೬೭೦ ೮೮೫೫ಮದ್ದೂರು ೧೦೬೩ ೦೦ ೫೮೦ ೮೦೫೦ ೫೫೦ ೧೦೨೪೩ಮಳವಳ್ಳಿ ೪೦ ೨೦೦ ೩೦೦ ೨೫೦೦ ೨೫೦ ೩೨೯೦ಶ್ರೀರಂಗಪಟ್ಟಣ ೧೧೦ ೮೦ ೭೯೦ ೧೭೮೦ ೨೧೦ ೨೯೭೦ಪಾಂಡವಪುರ ೩೧೦ ೮೫೦ ೯೦೫ ೨೯೨೦ ೧೯೦೦ ೬೮೮೫ಕೆ.ಆರ್.ಪೇಟೆ ೪೫೨ ೯೨೧ ೧೫೩೫ ೨೦೫೬ ೦೦ ೪೯೬೪ನಾಗಮಂಗಲ ೦೦ ೦೦ ೪೦ ೭೦ ೦೦ ೧೧೦---------------------------------------------------ಒಟ್ಟು ೨೨೯೩ ೨೨೦೮ ೪೭೬೦ ೨೪೪೭೬ ೩೫೮೦ ೩೭೩೧೭(೩೩೭೨೭ ಹೆಕ್ಟೇರ್‌ನಲ್ಲಿರುವ ಕಬ್ಬು ನೀರಿನ ಅಲಭ್ಯತೆಯಿಂದ ನಷ್ಟಕ್ಕೊಳಗಾಗಬಹುದೆಂದು ಅಂದಾಜು)