ಗ್ಯಾರಂಟಿ ಯೋಜನೆಗೆ ಸಮ್ಮೇಳನಾಧ್ಯಕ್ಷ ಗೊರುಚ ಉಘೇ ಉಘೇ - ಬಡತನ ಎಂಬುದೇನು ಎಂಬುದು ನನಗೆ ಗೊತ್ತು

Published : Dec 21, 2024, 09:57 AM IST
goru  channabasappa

ಸಾರಾಂಶ

ಸಮ್ಮೇಳನಾಧ್ಯಕ್ಷರ ಭಾಷಣದಲ್ಲಿ ಸರ್ಕಾದ ಗ್ಯಾರಂಟಿ ಯೋಜನೆಯನ್ನು ಗೊರುಚ ಮುಕ್ತಕಂಠದಿಂದ ಹೊಗಳಿದರು.

ಮಂಡ್ಯ :  ಸಮ್ಮೇಳನಾಧ್ಯಕ್ಷರ ಭಾಷಣದಲ್ಲಿ ಸರ್ಕಾದ ಗ್ಯಾರಂಟಿ ಯೋಜನೆಯನ್ನು ಗೊರುಚ ಮುಕ್ತಕಂಠದಿಂದ ಹೊಗಳಿದರು.

`ನಮ್ಮದು ಸಮೃದ್ಧ ಆರ್ಥಿಕತೆಯಾದರೂ, ರಾಜ್ಯದಲ್ಲಿ ಜನರ ಜೀವನ ಸಮೃದ್ಧವಾಗಿದೆಯೇ ಎನ್ನುವ ಪ್ರಶ್ನೆಗೆ ಧನಾತ್ಮಕ ಉತ್ತರ ಕೊಡಲು ಸಾಧ್ಯವಿಲ್ಲ. ಹಸಿವು, ಬಡತನ, ನಿರುದ್ಯೋಗ, ಅಪೌಷ್ಟಿಕತೆ, ಅಸಮಾನತೆ, ಆಹಾರ ಅಭದ್ರತೆ ಮುಂತಾದ ಸಮಸ್ಯೆಗಳು ಕೃಷಿಕರನ್ನು, ಕಾರ್ಮಿಕ ವರ್ಗವನ್ನು, ದಿನಗೂಲಿಗಳನ್ನು, ಬೀದಿಬದಿ ಮಾರಾಟಗಾರರನ್ನು, ಮಹಿಳೆಯರನ್ನು ಕಾಡುತ್ತಿವೆ. ಕರ್ನಾಟಕದ ಸರ್ಕಾರ 2023 ರಲ್ಲಿ ಘೋಷಿಸಿರುವ "ಭರವಸೆ ಕಾರ್ಯಕ್ರಮಗಳು" ದುಡಿಯುವ ವರ್ಗಕ್ಕೆ ಅಷ್ಟೋ ಇಷ್ಟು ಬದುಕನ್ನು ನೀಡಿವೆ. 

''ಭರವಸೆ ಕಾರ್ಯಕ್ರಮ'' ಅಪ್ರತ್ಯಕ್ಷವಾಗಿ ದುಡಿಮೆಗೆ ಗೌರವ ನೀಡುವ ಕ್ರಮ ಮತ್ತು ಇದು ಆರ್ಥಿಕ ಸಮೃದ್ಧತೆಯನ್ನು ಜನರಿಗೆ ಹಂಚುವ ಒಂದು ಕಾರ್ಯಯೋಜನೆ. ಭರವಸೆ ಕಾರ್ಯಕ್ರಮಗಳ ಅನುಷ್ಠಾನದಲ್ಲಿನ ಕುಂದು-ಕೊರತೆಗಳನ್ನು ಸರಿಪಡಿಸಿಕೊಂಡು ಅವುಗಳ ಯಶಸ್ಸಿಗೆ ನಾವೆಲ್ಲರೂ ಪ್ರಯತ್ನಿಸಬೇಕು ಎಂಬುದು ನನ್ನ ಪ್ರಾಮಾಣಿಕ ಅಭಿಪ್ರಾಯ. ನಾನೂ ಇಂತಹ ಬಡತನದ - ಹಸಿವಿನ ನೆಲೆಯಿಂದಲೇ ಬಂದವನು. ಬಡತನ ಎಂದರೇನು ಎಂಬುದು ನನಗೆ ಗೊತ್ತಿದೆ'' ಎಂದು ಗೊರುಚ ಹೇಳಿದರು.

PREV

Recommended Stories

ಯುಪಿಐ ಬಳಸಿ ರೈತನ ₹ 1.60 ಕೋಟಿ ವಂಚನೆ
ವಿದ್ಯಾರ್ಥಿಗಳಿಗೆ ಪದವಿಯಷ್ಟೆ ವೃತ್ತಿ ಕೌಶಲ್ಯತೆಯ ತರಬೇತಿ ಅಗತ್ಯ: ಡಾ.ಸಿ.ಎನ್.ಮಂಜುನಾಥ್