ತುಮಕೂರು: ಸಿಗದ ವಾಹನ ಸೌಲಭ್ಯ- ತಂದೆಯ ಮೃತದೇಹವನ್ನು ಬೈಕ್‌ನಲ್ಲಿ ಸಾಗಿಸಿದ ಮಕ್ಕಳು!

Published : Sep 19, 2024, 12:18 PM IST
Dead Body Of Husband Wife

ಸಾರಾಂಶ

ಪಾವಗಡ ತಾಲೂಕಿನಲ್ಲಿ ಆ್ಯಂಬುಲೆನ್ಸ್ ಸಿಗದ ಕಾರಣ ಮಕ್ಕಳು ತಮ್ಮ ತಂದೆಯ ಮೃತದೇಹವನ್ನು ಬೈಕ್‌ನಲ್ಲಿ ಸ್ವಗ್ರಾಮಕ್ಕೆ ಕೊಂಡೊಯ್ಯುವ ಹೃದಯ ವಿದ್ರಾವಕ ಘಟನೆ ನಡೆದಿದೆ. ವೃದ್ಧರ ಮೃತದೇಹ ಸಾಗಿಸಲು ಆಸ್ಪತ್ರೆಯಲ್ಲಿ ಆ್ಯಂಬುಲೆನ್ಸ್ ಸೇವೆ ಲಭ್ಯವಿಲ್ಲದೆ ಪರದಾಡಿದ ಘಟನೆ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಪಾವಗಡ :  ಎಷ್ಟೇ ಪರದಾಟ ನಡೆಸಿದರೂ ಶವ ಸಾಗಿ ಸಲು ಆ್ಯಂಬುಲೆನ್ಸ್ ಹಾಗೂ ಯಾವುದೇ ವಾಹನ ಸಿಗದ ಕಾರಣ ಮಕ್ಕಳು ತಮ್ಮ ದ್ವಿಚಕ್ರ ವಾಹನದಲ್ಲಿಯೇ ಮೃತಪಟ್ಟಿರುವ ವೃದ್ಧ ತಂದೆಯ ಮೃತದೇಹವನ್ನು ಕರೆದೊಯ್ದ ಹೃದಯ ವಿದ್ರಾವಕ ಘಟನೆ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ವೈ.ಎನ್. ಹೊಸಕೋಟೆ ಸಮುದಾಯ ಆರೋಗ್ಯ ಕೇಂದ್ರದ ಬಳಿ ನಡೆದಿದೆ. 

ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ತಾಲೂಕಿನ ದಳವಾಯಿಹಳ್ಳಿ ಗ್ರಾಮದ ವೃದ್ಧ ಗುಡುಗುಲ್ಲ ಹೊನ್ನೂರಪ್ಪ (80) ಎಂಬುವರನ್ನು ಕಳೆದ ಮಂಗಳವಾರ ತಾಲೂಕಿನ ವೈ.ಎನ್ ಹೋಸಕೋಟೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಚಿಕಿತ ಪಾವಗಡದಲ್ಲಿ ಆ್ಯಂಬುಲೆನ್ಸ್‌ ಸಿಗದ ಪರಿಣಾಮ ಸರ್ಕಾರಿ ಆಸ್ಪತ್ರೆಯಿಂದ ತಂದೆಯ ಮೃತ ದೇಹವನ್ನು ಸ್ವಗ್ರಾಮ ದಳವಾಯಿ ಹಳ್ಳಿಗೆ ಬೈಕಿನಲ್ಲಿ ಸಾಗಿಸುತ್ತಿರುವ ಮಕ್ಕಳು ಫಲಕಾರಿಯಾಗದೇಬುಧವಾರಮಧ್ಯಾಹ್ನ ನಡೆಸಿದರೂ ಶವ ಸಾಗಿಸಲು ಯಾವುದೇ ಅವರು ಮೃತಪಟ್ಟರು. ಎಷ್ಟೇ ಪರದಾಟ ವಾಹನ ಹಾಗೂ ಆ್ಯಂಬುಲೆನ್ಸ್ ಸಿಗಲಿಲ್ಲ.  

ಕೊನೆಗೆ ವಿಧಿಯಿಲ್ಲದೇ ಹಿರಿಯ ಪುತ್ರ ಚಂದ್ರಣ್ಣ ಮತ್ತು ಕಿರಿಯ ಪುತ್ರ ಗೋಪಾಲಪ್ಪ ಅವರು ಮೃತ ಹೊನ್ನೂರಪ್ಪ ಅವರ ಶವವನ್ನು ತಮ್ಮ ಬೈಕ್‌ನಲ್ಲಿಯೇ ತಮ್ಮೂರಿಗೆ ಹೋಗಿದ್ದಾರೆ. ತೆಗೆದುಕೊಂಡು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಾವಗಡ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಕಿರಣ್, ಸರ್ಕಾರದ ಅನುಮತಿ ಇಲ್ಲದ ಕಾರಣ ಶವ ಸಾಗಿಸಲು ಸರ್ಕಾರಿ ಆ್ಯಂಬುಲೆನ್ಸ್ ಕಳುಹಿಸಲು ಸಾಧ್ಯವಾಗಿಲ್ಲ. 

ರೋಗಿಗಳನ್ನು ಕರೆ ತರಲು ಮಾತ್ರ ಆ್ಯಂಬುಲೆನ್ಸ್ ಕಳುಹಿಸಲಾಗುತ್ತದೆ. ಯಾರಾದರೂ ಮೃತರಾದರೆ ಅವರ ಮನೆಯವರು ತಮ್ಮ ಸ್ವಂತ ಖರ್ಚಿನಲ್ಲಿ ಬೇರೆ ವಾಹನ ಮಾಡಿಕೊಂಡು ತಮ ಗ್ರಾಮಗಳಿಗೆ ಶವ ಸಾಗಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

PREV
Get the latest news and developments from Mandya district (ಮಂಡ್ಯ ಸುದ್ದಿ) — covering local politics, agriculture, civic issues, water conservation, tourism, community affairs and more on Kannada Prabha News.

Recommended Stories

ವಿದ್ಯಾರ್ಥಿಗಳೇ ವಿಜ್ಞಾನವನ್ನು ಸ್ಪಷ್ಟವಾಗಿ ಅರಿಯಿರಿ: ಶ್ವೇತಾ ರಾಘವನ್‌
ಕನಸುಗಳು ಸಾಧನೆಗೆ ಪ್ರೇರಣೆ: ಪ್ರಭುದೇವ