ಶ್ರೀರಂಗಪಟ್ಟಣ: ಆಸ್ತಿಗಾಗಿ ಜನ್ಮ ನೀಡಿದ ತಂದೆಯನ್ನೇ ಮನೆಯಿಂದ ಹೊರಹಾಕಿರುವ ಮಗ: ದಯಾಮರಣಕ್ಕೆ ಅರ್ಜಿ

ಸಾರಾಂಶ

ಆಸ್ತಿಗಾಗಿ ಜನ್ಮ ನೀಡಿದ ತಂದೆಯನ್ನೇ ಮನೆಯಿಂದ ಹೊರಹಾಕಿರುವ ಘಟನೆ ತಾಲೂಕಿನ ಬೆಳಗೊಳ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಶ್ರೀರಂಗಪಟ್ಟಣ: ಆಸ್ತಿಗಾಗಿ ಜನ್ಮ ನೀಡಿದ ತಂದೆಯನ್ನೇ ಮನೆಯಿಂದ ಹೊರಹಾಕಿರುವ ಘಟನೆ ತಾಲೂಕಿನ ಬೆಳಗೊಳ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಬೆಳಗೊಳ ಗ್ರಾಮದ 70 ವರ್ಷದ ವಯೋವೃದ್ಧ ಶಿವರಾಮು, ತನ್ನ ಮಗಳು ಲಾವಣ್ಯರೊಂದಿಗೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಸಂಬಂಧ ಅಳಲು ತೋಡಿಕೊಂಡರು. ಪುತ್ರ ಹಾಗೂ ಇಬ್ಬರು ಪುತ್ರಿಯರು ಸೇರಿ ಒಟ್ಟು ಮೂವರು ಮಕ್ಕಳಿದ್ದಾರೆ. 

ಕಾಲು ಗ್ಯಾಂಗ್ರೀನ್, ಮೂರ್ಛೆ ರೋಗ ಸಹ ಇದೆ. 9 ವರ್ಷಗಳ ಹಿಂದೆ ಪತ್ನಿ ತೀರಿಕೊಂಡಿದ್ದಾರೆ. 5 ಎಕರೆ ಜಮೀನಿದೆ. ಜೊತೆಗೆ ಬೆಳಗೊಳ ಗ್ರಾಮದಲ್ಲಿ ಮನೆ ಇದೆ. ನನ್ನ ಮಗ ಹರಿಪ್ರಸಾದ, ಸೊಸೆ ರೂಪಿಣಿ, ನಾನು ಒಂದೇ ಮನೆಯಲ್ಲಿದ್ದೇವು. ಈಗ ಮಗ-ಸೊಸೆ ಮನೆಯ ಬೀಗ ಒಡೆದು, ಮನೆಗೆ ನುಗ್ಗಿ ಚಿನ್ನ ಹಾಗೂ ಹಣ ಕದ್ದಿದ್ದಾರೆ. ನನ್ನ ಮೇಲೆ ಹಲ್ಲೆ ಮಾಡಿ ಮನೆಯಿಂದ ಹೊರಹಾಕಿದ್ದಾರೆ. ನಮಗೆ ನ್ಯಾಯ ಸಿಗದಿದ್ದಲ್ಲಿ ಜಿಲ್ಲಾಧಿಕಾರಿಗಳಿಂದ ದಯಾಮರಣ ಕೋರಿ ಅರ್ಜಿ ಸಲ್ಲಿಸಲಿದ್ದೇನೆ ಎಂದು ತಿಳಿಸಿದರು.

Share this article