ನಗರ ವ್ಯಾಪ್ತಿಯಲ್ಲಿ ಕೆಲವೆಡೆ ಖಾಸಗಿ ಸಿಟಿ ಬಸ್‌ಗಳು ಸೇರಿದಂತೆ ಕೆ.ಎಸ್.ಆರ್.ಟಿ.ಸಿ. ಬಸ್‌ಗಳು ನಿಗದಿತ ಸ್ಥಳಕ್ಕೆ ಹೋಗದಿರುವುದು ಹಾಗೂ ಟ್ರಿಪ್ ಕಡಿತಗೊಳಿಸುತ್ತಿರುವುದರಿಂದ ಸಾರ್ವಜನಿಕರು ತೀವ್ರ ಸಮಸ್ಯೆ ಅನುಭವಿಸುತ್ತಿರುವ ಕುರಿತು ಹಲವು ದೂರುಗಳು ಸ್ವೀಕೃತವಾದ ಹಿನ್ನಲೆಯಲ್ಲಿ ಶಾಸಕ ವೇದವ್ಯಾಸ ಕಾಮತ್ ನಗರದ ಆರ್.ಟಿ.ಒ. ಕಚೇರಿಯಲ್ಲಿ ಗುರುವಾರ ಹಿರಿಯ ಅಧಿಕಾರಿಗಳ, ಬಸ್ ಸಂಘದವರ, ಸಾರ್ವಜನಿಕರ ವಿಶೇಷ ಸಭೆ ನಡೆಸಿ ಮಾತನಾಡಿದರು.
ಮಂಗಳೂರು: ನಗರದ ವಾರ್ಡ್ ಸಂಖ್ಯೆ 51ರ ಸರಿಪಲ್ಲ-ಕನ್ನಗುಡ್ಡೆ, ವಾರ್ಡ್ ಸಂಖ್ಯೆ 53ರ ಬಜಾಲ್ ಪಡ್ಪು ಪಳ್ಳಕೆರೆ, ಸೇರಿದಂತೆ ಶಕ್ತಿನಗರ, ಮರೋಳಿ ಭಾಗದಲ್ಲಿ ಪರ್ಮಿಟ್ ಇದ್ದರೂ ಬಸ್‌ಗಳು ಸರಿಯಾಗಿ ಕಾರ್ಯನಿರ್ವಹಿಸದಿರುವುದರಿಂದ ಸಮಸ್ಯೆಯಾಗುತ್ತಿದ್ದು, ಪರ್ಮಿಟ್ ಇರುವಲ್ಲಿ ಬಸ್ ಸಂಚರಿಸಲು ಕ್ರಮವಹಿಸಬೇಕು ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಸೂಚಿಸಿದರು.
ಮಂಗಳೂರು ನಗರ ವ್ಯಾಪ್ತಿಯಲ್ಲಿ ಕೆಲವೆಡೆ ಖಾಸಗಿ ಸಿಟಿ ಬಸ್‌ಗಳು ಸೇರಿದಂತೆ ಕೆ.ಎಸ್.ಆರ್.ಟಿ.ಸಿ. ಬಸ್‌ಗಳು ನಿಗದಿತ ಸ್ಥಳಕ್ಕೆ ಹೋಗದಿರುವುದು ಹಾಗೂ ಟ್ರಿಪ್ ಕಡಿತಗೊಳಿಸುತ್ತಿರುವುದರಿಂದ ಸಾರ್ವಜನಿಕರು ತೀವ್ರ ಸಮಸ್ಯೆ ಅನುಭವಿಸುತ್ತಿರುವ ಕುರಿತು ಹಲವು ದೂರುಗಳು ಸ್ವೀಕೃತವಾದ ಹಿನ್ನಲೆಯಲ್ಲಿ ಶಾಸಕ ವೇದವ್ಯಾಸ ಕಾಮತ್ ನಗರದ ಆರ್.ಟಿ.ಒ. ಕಚೇರಿಯಲ್ಲಿ ಗುರುವಾರ ಹಿರಿಯ ಅಧಿಕಾರಿಗಳ, ಬಸ್ ಸಂಘದವರ, ಸಾರ್ವಜನಿಕರ ವಿಶೇಷ ಸಭೆ ನಡೆಸಿ ಮಾತನಾಡಿದರು.ಹಲವಾರು ವರ್ಷಗಳಿಂದ ಇಲ್ಲಿನ ಖಾಸಗಿ ಹಾಗೂ ಕೆ.ಎಸ್.ಆರ್.ಟಿ.ಸಿ. ಬಸ್ಸುಗಳು ಉತ್ತಮ ರೀತಿಯಲ್ಲಿ ಸಾರ್ವಜನಿಕ ಸೇವೆ ನೀಡುತ್ತಿವೆ. ಅದರ ನಡುವೆ ವಾರ್ಡ್ ಸಂಖ್ಯೆ 51ರ ಸರಿಪಲ್ಲ-ಕನ್ನಗುಡ್ಡೆ, ವಾರ್ಡ್ ಸಂಖ್ಯೆ 53ರ ಬಜಾಲ್ ಪಡ್ಪು ಪಳ್ಳಕೆರೆ, ಸೇರಿದಂತೆ ಶಕ್ತಿನಗರ, ಮರೋಳಿ ಭಾಗದಲ್ಲಿ ಪರ್ಮಿಟ್ ಇದ್ದರೂ ಬಸ್‌ಗಳು ಸರಿಯಾಗಿ ಕಾರ್ಯನಿರ್ವಹಿಸದಿರುವುದು ಸಮಸ್ಯೆಗೆ ಕಾರಣವಾಗಿದೆ. ಇಲ್ಲಿನ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಶಾಲಾ ಕಾಲೇಜು, ಆಸ್ಪತ್ರೆ, ಕಚೇರಿ, ಸೇರಿದಂತೆ ಅಗತ್ಯ ಸಂದರ್ಭಗಳಲ್ಲಿ ಬಸ್ ಸಂಚಾರವೇ ಆಧಾರವಾಗಿರುವುದರಿಂದ ಬಸ್ ಸಂಘದವರು, ಅಧಿಕಾರಿಗಳು ಅತ್ಯಂತ ಮುತುವರ್ಜಿಯಿಂದ ಕಾರ್ಯ ನಿರ್ವಹಿಸಬೇಕಾದ ಅಗತ್ಯವಿದೆ ಎಂದರು.ಈ ಬಗ್ಗೆ ದ.ಕ. ಬಸ್ ಮಾಲೀಕರ ಸಂಘ, ಆರ್.ಟಿ.ಒ, ಸೇರಿದಂತೆ ಹಾಗೂ ಅಧಿವೇಶನದಲ್ಲಿಯೂ ವಿಷಯ ಪ್ರಸ್ತಾಪಿಸಿದ್ದೆ. ಇದೀಗ ಸಾರಿಗೆ ಸಚಿವ ರಾಮಲಿಂಗ ರೆಡ್ಡಿಯವರೇ ಸ್ಥಳೀಯ ಶಾಸಕರ ನೇತೃತ್ವದಲ್ಲಿ ಸಭೆ ನಡೆಸುವಂತೆ ಆರ್‌ಟಿಒನ ಹಿರಿಯ ಅಧಿಕಾರಿಗಳಿಗೆ ಆದೇಶಿಸಿದ್ದು, ಅದರಂತೆ ಮಹತ್ವದ ಸಭೆ ನಡೆದು ಮುಂದಿನ 15 ದಿನಗಳ ಒಳಗಾಗಿ ಕೆಎಸ್ಆರ್ಟಿಸಿ ಹಾಗೂ ಖಾಸಗಿ ಬಸ್‌ಗಳು ನಿಗದಿಪಡಿಸಿರುವ ರೂಟ್ ಗಳಲ್ಲಿ ಕಡ್ಡಾಯವಾಗಿ ಸಂಚರಿಸುವಂತೆ ಕ್ರಮ ಕೈಗೊಳ್ಳಲಾಗುವುದು, ಇಲ್ಲದಿದ್ದಲ್ಲಿ ಅಂತಹ ಪರ್ಮಿಟ್‌ಗಳನ್ನು ಹಸ್ತಾಂತರ ಮಾಡುವ ಪ್ರಕ್ರಿಯೆ ನಡೆಸಲಾಗುವುದು ಎಂದು ಆರ್‌ಟಿಒ ಅಧಿಕಾರಿಗಳು ತಿಳಿಸಿದರು. ಇದಕ್ಕೆ ಸಾರ್ವಜನಿಕರು ಸಹಮತ ಸೂಚಿಸಲಾಯಿತು.ಮಂಗಳಾದೇವಿ ಸರ್ಕಲ್ ಬಳಿ ಸ್ಮಾರ್ಟ್ ಸಿಟಿ ವತಿಯಿಂದ ನಿರ್ಮಿಸಲಾಗಿರುವ ಬಸ್ ಬೇ ನಲ್ಲೇ ಎಲ್ಲ ಬಸ್‌ಗಳು ನಿಲುಗಡೆ ಮಾಡಬೇಕು, ಆರ್.ಟಿ.ಒ.ದಲ್ಲಿ ಜನಸಾಮಾನ್ಯರು ಅನುಭವಿಸುತ್ತಿರುವ ತೊಂದರೆಗೆ ಮುಕ್ತಿ ನೀಡಬೇಕು ಎಂದು ನಾಗರಿಕ ಹಿತರಕ್ಷಣಾ ಸಮಿತಿಯ ಹನುಮಂತ ಕಾಮತ್ ರವರು ಪ್ರಸ್ತಾಪಿಸಿದ ಜನಪರ ವಿಚಾರಗಳ ಬಗ್ಗೆ ಆದ್ಯತೆಯ ಮೇರೆಗೆಗಮನಹರಿಸಬೇಕೆಂದು ಸಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೆ.ಎಸ್.ಆರ್.ಟಿ.ಸಿ. ಡಿ.ಸಿ ರಾಜೇಶ್, ಆರ್.ಟಿ.ಒ. ಹಿರಿಯ ಅಧಿಕಾರಿಗಳು, ಬಸ್ ಸಂಘದ ಪ್ರಮುಖರಾದ ಅಜೀಜ್ ಪರ್ತಿಪಾಡಿ, ರಾಜೇಂದ್ರ ವರ್ಮ ಬಲ್ಲಾಳ್, ರಾಮಚಂದ್ರ, ನವನೀತ, ಮೊಹಮ್ಮದ್ ವಾಸೀಮ್, ಸಾರ್ವಜನಿಕರ ಪರವಾಗಿ ಪ್ರವೀಣ್ ನಿಡ್ಡೆಲ್, ದೀಪಕ್ ಮರೋಳಿ, ಚಂದ್ರಶೇಖರ ಬಜಾಲ್, ಪ್ರಶಾಂತ್ ಆಳ್ವ, ರವಿಚಂದ್ರ, ಪ್ರಸಾದ್ ಮತ್ತಿತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.