ಮೂಲ್ಕಿ: ಮಂಗಳೂರು ಕ್ರೈಸ್ತ ಧರ್ಮಕ್ಷೇತ್ರ ವ್ಯಾಪ್ತಿಯ ಮಂಗಳೂರು ಉತ್ತರ ವಲಯದ ನೂತನ ಪದಾಧಿಕಾರಿಗಳನ್ನು ಆರಿಸುವ ಚುನಾವಣಾ ಪ್ರಕ್ರಿಯೆಯು ದಾಮಸ್ ಕಟ್ಟೆಯ ಕಿರೆಂ ಚರ್ಚ್ ಶಾಲೊಮ್ ಸಭಾಂಗಣದಲ್ಲಿ ನಡೆದು ಚುನಾವಣೆಯಲ್ಲಿ ವಲಯದ ಕಾರ್ಯದರ್ಶಿಯಾಗಿ ಸಂತ ಪೌಲರ ದೇವಾಲಯ, ಬಳಕುಂಜೆ ಚರ್ಚ್ ಸರ್ವ ಆಯೋಗಗಳ ಸಂಯೋಜಕಿ ಡಾ.ಫ್ರೀಡಾ ರೊಡ್ರೀಗಸ್ ಹಾಗೂ ಪ್ರತಿನಿಧಿಯಾಗಿ ಸಂತ ರೋಕ್ ದೇವಾಲಯ, ನೀರುಡೆ ಚರ್ಚ್ ಉಪಾಧ್ಯಕ್ಷ ಸ್ಟ್ಯಾನಿ ಮಿರಾಂದಾ ಆಯ್ಕೆಯಾದರು. ಮಂಗಳೂರು ಉತ್ತರ ವಲಯದ ಪ್ರಧಾನ ಧರ್ಮಗುರು ವಂ. ಓಸ್ವಲ್ಡ್ ಮೊಂತೆರೊ ಹಾಗೂ ಕಟೀಲು ಚರ್ಚ್ ಧರ್ಮಗುರು ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.