ಮಂಗಳೂರು: ಭಾರತದ ಪ್ರಮುಖ ಇಂಜಿನಿಯರಿಂಗ್ ಸಂಸ್ಥೆಗಳಾದ ಐಐಟಿ, ಎನ್‌ಐಟಿ, ಐಐಐಟಿ ಗಳಿಗೆ ಪ್ರವೇಶ ಪಡೆಯಲು ಅಗತ್ಯವಾದ ಸ್ಪರ್ಧಾತ್ಮಕ ತರಬೇತಿ ನೀಡುವ ಮಂಗಳೂರಿನ ಸಿಎಫ್‌ಎಎಲ್ ಸಂಸ್ಥೆಯ 25 ವಿದ್ಯಾರ್ಥಿಗಳು ಜೆಇಇ ಮೈನ್ 2026ರಲ್ಲಿ 99 ಪರ್ಸೆಂಟೈಲ್ ಮೀರಿದ್ದಾರೆ. 4 ಮಂದಿ ಶೇ. 99.9 ಮೇಲ್ಪಟ್ಟು, 13 ಮಂದಿ ಶೇ.99.ಮೇಲ್ಪಟ್ಟು, 25 ಮಂದಿ 99% ಮೇಲ್ಪಟ್ಟು, 52 ಮಂದಿ ಶೇ.97 ಮೇಲ್ಪಟ್ಟು ರಾಷ್ಟ್ರೀಯ ಸರಾಸರಿಗಿಂತ ಸುಮಾರು 10 ಪಟ್ಟು ಹೆಚ್ಚು ಸಾಧನೆ ಮಾಡಿದ್ದಾರೆ.2026ರ ಜೆಇಇ ಮೈನ್ ಪರೀಕ್ಷೆಯಲ್ಲಿ ಸಿಎಫ್‌ಎಎಲ್‌ನ 25 ವಿದ್ಯಾರ್ಥಿಗಳು 99 ಪರ್ಸೆಂಟೈಲ್ ಮೀರಿದ್ದು, ದೇಶದ ಸುಮಾರು 13 ಲಕ್ಷ ವಿದ್ಯಾರ್ಥಿಗಳಲ್ಲಿ ಟಾಪ್ 13,000ರಲ್ಲಿ ಸ್ಥಾನ ಪಡೆದಿದ್ದಾರೆ. ಇವರಲ್ಲಿ 4 ಮಂದಿ 99.9 ಪರ್ಸೆಂಟೈಲ್ ಮೀರಿಸಿ ಟಾಪ್ 1,300ರಲ್ಲಿ ಸ್ಥಾನ ಗಳಿಸಿದ್ದಾರೆ. ಈ ಸಾಧನೆ ಸಂಸ್ಥೆಯನ್ನು ಇನ್ನಷ್ಟು ಉನ್ನತ ಶಿಖರಕ್ಕೆ ಏರಿಸಿದೆ. ಉತ್ತಮ ಕೋಚಿಂಗ್ ಪಡೆಯಲು ಕೋಟಾ, ಹೈದರಾಬಾದ್ ಅಥವಾ ಬೆಂಗಳೂರು ಹೋಗಬೇಕೆಂಬ ಕಲ್ಪನೆ ಈಗ ಅಗತ್ಯವಿಲ್ಲ. ಅದೇ ಮಟ್ಟದ ತರಬೇತಿ ನಮ್ಮ ಮಂಗಳೂರಿನಲ್ಲೇ ಸಿಎಫ್‌ಎಎಲ್ ಮೂಲಕ ಲಭ್ಯವಾಗಿದೆ. ಈ ವಿದ್ಯಾರ್ಥಿಗಳು ತಮ್ಮ ಮನೆಯಲ್ಲೇ ಉಳಿದುಕೊಂಡು ರಾಷ್ಟ್ರಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗಿರುವುದು ವಿಶೇಷ.