ಹೆದ್ದಾರಿಯಲ್ಲಿ ಸಿಲುಕಿದ ಬೃಹತ್‌ ಟ್ರಕ್‌: ಟ್ರಾಫಿಕ್‌ ಜಾಮ್‌

KannadaprabhaNewsNetwork |  
Published : Jul 06, 2026, 03:00 AM IST
ಪಣಂಬೂರು ಬಳಿ ಹೆದ್ದಾರಿಯಲ್ಲಿ ಸಿಲುಕಿಕೊಂಡ ಬೃಹತ್‌ ಟ್ರಕ್‌ | Kannada Prabha

ಸಾರಾಂಶ

: ಬೃಹತ್‌ ಟ್ರಕ್‌ ವೊಂದು ಹೆದ್ದಾರಿಯಲ್ಲಿ ಸಿಲುಕಿ ಗಂಟೆಗಟ್ಟಲೆ ಟ್ರಾಫಿಕ್‌ ಜಾಮ್‌ ಉಂಟಾದ ಘಟನೆ ಮಂಗಳೂರು-ಉಡುಪಿ ಹೆದ್ದಾರಿಯ ಪಣಂಬೂರು ಬಳಿ ಶನಿವಾರ ಸಂಜೆ ಸಂಭವಿಸಿದೆ.

ಮಂಗಳೂರು: ಬೃಹತ್‌ ಟ್ರಕ್‌ ವೊಂದು ಹೆದ್ದಾರಿಯಲ್ಲಿ ಸಿಲುಕಿ ಗಂಟೆಗಟ್ಟಲೆ ಟ್ರಾಫಿಕ್‌ ಜಾಮ್‌ ಉಂಟಾದ ಘಟನೆ ಮಂಗಳೂರು-ಉಡುಪಿ ಹೆದ್ದಾರಿಯ ಪಣಂಬೂರು ಬಳಿ ಶನಿವಾರ ಸಂಜೆ ಸಂಭವಿಸಿದೆ.ಪಣಂಬೂರು ಬಂದರಿನಲ್ಲಿ ಸರಕು ಅನ್‌ಲೋಡ್‌ ಮಾಡಿ ಹಿಂತಿರುಗುವ ವೇಳೆ ಪಡುಬಿದ್ರೆಯ ಸಂಸ್ಥೆಗೆ ಸೇರಿದ 144 ಚಕ್ರದ ಬೃಹತ್‌ ಟ್ರಕ್‌ ಹೆದ್ದಾರಿಗೆ ಪ್ರವೇಶಿಸುತ್ತಲೇ, ಟ್ರಕ್‌ ಹೆದ್ದಾರಿ ಡಿವೈಡರ್‌ ಏರಿ ನಿಂತು ಹೆದ್ದಾರಿಗೆ ಅಡ್ಡಲಾಗಿ ಸಿಲುಕಿಕೊಂಡಿತ್ತು. ಪರಿಣಾಮ ಮಂಗಳೂರಿನಿಂದ ಸುರತ್ಕಲ್‌ ಕಡೆಗೆ ಹೋಗುವ ರಸ್ತೆ ಬಂದ್‌ ಆಗಿತ್ತು. ಎರಡೂ ಕಡೆಯಲ್ಲೂ ವಾಹನಗಳು ಕಿ.ಮೀ. ದೂರದವರೆಗೂ ಸಾಲುಗಟ್ಟಿ ನಿಂತಿದ್ದವು. ಕೊನೆಗೆ ಟ್ರಕ್‌ನ ಮುಂಭಾಗದ ಎಂಜಿನ್‌ ತೆರವು ಮಾಡಿ, ಹಿಂಭಾಗದಿಂದ ಕಟ್ಟಿ ಹಿಂದಕ್ಕೆ ಎಳೆದು, ಟ್ರಕ್‌ನ್ನು ಹೆದ್ದಾರಿ ಬದಿಗೆ ತರಲಾಯಿತು.

ಸುಮಾರು ಎರಡು ಗಂಟೆಗಳ ಕಾಲ ಹೆದ್ದಾರಿಯಲ್ಲಿ ಸಂಚಾರ ವ್ಯತ್ಯಯ ಉಂಟಾಯಿತು. ನಗರ ಸಂಚಾರಿ ಪೊಲೀಸರು ಕಾರ್ಯಾಚರಣೆ ನಡೆಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಟ್ರಕ್‌ ಸಂಸ್ಥೆಯ ಅಧಿಕಾರಿಗಳನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆಯಿತು. ಟ್ರಕ್‌ ವಾಹನ ಹೆದ್ದಾರಿ ತಂದು ನಿರ್ಲಕ್ಷ್ಯ ವಹಿಸಿದ ಬಗ್ಗೆ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಳೆಗೆ ರೈತ ಸಂತಸ, ನಗರದಲ್ಲಿ ಅವಾಂತರ
ಮತದಾರರ ಪಟ್ಟಿವಿಶೇಷ ಸಮಗ್ರ ಪರಿಷ್ಕರಣೆ ಜಾಗೃತಿ ಜಾಥಾ