ಫಾ. ಮುಲ್ಲರ್ ಆಸ್ಪತ್ರೆ ಹೊಸ ಪ್ರವೇಶದ್ವಾರ ಉದ್ಘಾಟನೆ

KannadaprabhaNewsNetwork |  
Published : Jul 30, 2026, 03:00 AM IST
ಫಾದರ್ ಮುಲ್ಲರ್ ಆಸ್ಪತ್ರೆಯ ಹೊಸ ಪ್ರವೇಶದ್ವಾರ, ವೈದ್ಯಕೀಯ ಸೌಲಭ್ಯಗಳ ಉದ್ಘಾಟನೆ | Kannada Prabha

ಸಾರಾಂಶ

ಮಂಗಳೂರಿನ ಫಾದರ್ ಮುಲ್ಲ‌ರ್ ಚಾರಿಟೇಬಲ್ ಸಂಸ್ಥೆ ತನ್ನ ಪೋಷಕರಾದ ಸಂತ ಜೋಕಿಂ ಮತ್ತು ಸಂತ ಅನ್ನಾ ಅವರ ಹಬ್ಬವನ್ನು ಶ್ರದ್ಧೆ ಮತ್ತು ಸಂಭ್ರಮದಿಂದ ಆಚರಿಸಿತು. ಈ ಸಂದರ್ಭ ವಿಶೇಷ ಪ್ರಾರ್ಥನೆ ಹಾಗೂ ಹೊಸ ಮೂಲಸೌಕರ್ಯ ಮತ್ತು ಸುಧಾರಿತ ವೈದ್ಯಕೀಯ ಸೌಲಭ್ಯಗಳ ಉದ್ಘಾಟನೆ ನೆರವೇರಿತು. ಮಂಗಳೂರು ಧರ್ಮಪ್ರಾಂತ್ಯದ ಚಾನ್ಸಲರ್ ಫಾ. ವಿಕ್ಟರ್ ಜಾರ್ಜ್ ಡಿಸೋಜಾ ನೇತೃತ್ವದಲ್ಲಿ ಸೈಂಟ್ ಜೋಸೆಫ್ ಚಾಪೆಲ್ ನಲ್ಲಿ ದಿವ್ಯಬಲಿಪೂಜೆ ನೆರವೇರಿತು.

ಮಂಗಳೂರು: ಮಂಗಳೂರಿನ ಫಾದರ್ ಮುಲ್ಲ‌ರ್ ಚಾರಿಟೇಬಲ್ ಸಂಸ್ಥೆ ತನ್ನ ಪೋಷಕರಾದ ಸಂತ ಜೋಕಿಂ ಮತ್ತು ಸಂತ ಅನ್ನಾ ಅವರ ಹಬ್ಬವನ್ನು ಶ್ರದ್ಧೆ ಮತ್ತು ಸಂಭ್ರಮದಿಂದ ಆಚರಿಸಿತು. ಈ ಸಂದರ್ಭ ವಿಶೇಷ ಪ್ರಾರ್ಥನೆ ಹಾಗೂ ಹೊಸ ಮೂಲಸೌಕರ್ಯ ಮತ್ತು ಸುಧಾರಿತ ವೈದ್ಯಕೀಯ ಸೌಲಭ್ಯಗಳ ಉದ್ಘಾಟನೆ ನೆರವೇರಿತು.ಮಂಗಳೂರು ಧರ್ಮಪ್ರಾಂತ್ಯದ ಚಾನ್ಸಲರ್ ಫಾ. ವಿಕ್ಟರ್ ಜಾರ್ಜ್ ಡಿ''''''''ಸೋಜಾ ನೇತೃತ್ವದಲ್ಲಿ ಸೈಂಟ್ ಜೋಸೆಫ್ ಚಾಪೆಲ್ ನಲ್ಲಿ ದಿವ್ಯಬಲಿಪೂಜೆ ನೆರವೇರಿತು.

ನವೀಕೃತ ಪ್ರವೇಶದ್ವಾರ ಉದ್ಘಾಟನೆ: ಆಧುನಿಕ ವಿನ್ಯಾಸದೊಂದಿಗೆ ನವೀಕರಿಸಲಾದ ಕ್ಯಾಂಪಸ್‌ನ ಪ್ರಮುಖ ಪ್ರವೇಶ ದ್ವಾರವನ್ನು ಫಾದರ್ ಮುಲ್ಲರ್ ಸಂಸ್ಥೆಯ ನಿರ್ದೇಶಕ ರೆ. ಫಾ.ಫೌಸ್ಟಿನ್ ಲೂಕಾಸ್ ಲೋಬೊ ಫಲಕ ಅನಾವರಣಗೊಳಿಸುವ ಮೂಲಕ ಉದ್ಘಾಟಿಸಿದರು. ಆಸ್ಪತ್ರೆಯ ಆಡಳಿತ ಮಂಡಳಿ ಸದಸ್ಯ ಹಾಗೂ ಪ್ರಧಾನ ಜಿಲ್ಲಾ ಸರ್ಕಾರಿ ಅಭಿಯೋಜಕ ಹಾಗೂ ಹಿರಿಯ ವಕೀಲ ಎಂ.ಪಿ. ನೊರೊನ್ಹಾ, ಡಾ. ಎರೊಲ್ ಪಿಂಟೊ, ಲೆಕ್ಕ ಪರಿಶೋಧಕ ಲಯನೆಲ್ ಅರಾನ್ಹಾ ಇದ್ದರು.

ಸಿ.ಟಿ. ಸ್ಕ್ಯಾನರ್ ಉದ್ಘಾಟನೆ: ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ನೂತನ ತಂತ್ರಜ್ಞಾನದ ಜಿಇ ರೆವಲ್ಯೂಷನ್ ಮ್ಯಾಕ್ಸಿಮಾ 2.0 ಸಿ.ಟಿ. ಸ್ಕ್ಯಾನರ್ ಯಂತ್ರ ಉದ್ಘಾಟನೆಗೊಂಡಿತು.

ರೇಡಿಯೋ-ಡಯಾಗೋಸಿಸ್ ವಿಭಾಗದ ಪ್ರಾಧ್ಯಾಪಕ ಡಾ.ಕೃಷ್ಣ ಕಿರಣ್ ಎಸ್. ನೂತನ ಸಿ.ಟಿ. ಸ್ಕ್ಯಾನರ್‌ನ ಪ್ರಯೋಜನಗಳನ್ನು ವಿವರಿಸಿದರು.

ಎರಡು ಸುಧಾರಿತ ಸಿಟಿ ಸ್ಕ್ಯಾನರ್‌ಗಳು, 3 ಟೆಸ್ಲಾ ಎಂಆರ್‌ಐ ಸೇರಿದಂತೆ ಎರಡು ಎಂಆರ್‌ಐ ಯಂತ್ರಗಳು, ಆಂಜಿಯೋಗ್ರಫಿ ಸೂಟ್ ಮತ್ತು ಅತ್ಯಾಧುನಿಕ ಅಲ್ಟ್ರಾ ಸೌಂಡ್ ಸೌಲಭ್ಯ ಹೊಂದಿರುವ ಕರ್ನಾಟಕದ ಕೆಲವೇ ಕೆಲವು ಆಸ್ಪತ್ರೆಗಳಲ್ಲಿ ಫಾದರ್ ಮುಲ್ಲರ್ ಆಸ್ಪತ್ರೆಯೂ ಒಂದಾಗಿದೆ ಎಂದರು ಅವರು ತಿಳಿಸಿದರು. ಅ

ತಪಾಸಣೆಗೆ ರಿಯಾಯಿತಿ: ವಿಶೇಷ ತರಬೇತಿ ಪಡೆದಿರುವ ರೇಡಿಯಾಲಜಿಸ್ಟ್ ಡಾ.ಆನ್‌ಸ್ಟನ್ ವರ್ನನ್ ಬ್ರಾಗ್ಸ್ ನೇತೃತ್ವದಲ್ಲಿ ಹೃದ್ರೋಗ ತಡೆಗಟ್ಟುವಿಕೆ ಮತ್ತು ಮುಂಚಿತ ಪತ್ತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಆ.1 ರಿಂದ ಅನ್ವಯವಾಗುವಂತೆ ಆಸ್ಪತ್ರೆಯಲ್ಲಿ ಎಲ್ಲ ಕಾರ್ಡಿಯಾಕ್ ಸಿಟಿ ಮತ್ತು ಕಾರ್ಡಿಯಾಕ್ ಎಂಆರ್‌ಐ ಪರೀಕ್ಷೆಗಳಿಗೆ ಶೇ. 30ರಷ್ಟು ರಿಯಾಯಿತಿ ನೀಡಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚತುರ್ಮಾಸ: ಜೈನಮುನಿಗಳ ಅದ್ಧೂರಿ ಪುರಪ್ರವೇಶ
ಅಕ್ಕಮಹಾದೇವಿ ವಿವಿ ಮಹಿಳಾ ಶಿಕ್ಷಣದಲ್ಲಿ ರಾಜ್ಯಕ್ಕೆ ಮಾದರಿ