ಮಂಗಳೂರು ಹಲಸು ಹಬ್ಬ: ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ

KannadaprabhaNewsNetwork |  
Published : May 26, 2025, 12:01 AM IST
ಹಲಸು ಹಬ್ಬದ ಮೊದಲ ದಿನವೇ ನೂರಾರು ಗ್ರಾಹಕರು ಆಗಮಿಸಿದ್ದರು. | Kannada Prabha

ಸಾರಾಂಶ

ವಿವಿಧ ಬಗೆಯ ಹಲಸುಗಳ ಪ್ರದರ್ಶನ ಮತ್ತು ಮಾರಾಟದ ಜತೆಗೆ ಹಲಸಿನ ವೈವಿಧ್ಯಮಯ ಖಾದ್ಯಗಳನ್ನು ಜನರು ಮುಗಿಬಿದ್ದು ಖರೀದಿಸಿದರು. ಹಲಸಿನಿಂದ ತಯಾರಿಸಿದ ಕೇಕ್‌, ಶೀರ, ಕಬಾಬ್‌, ಮುಳ್ಕ, ಗಾರಿಗೆ, ಪೋಡಿ ಹಾಗೂ ಹಲಸಿನ ಹೋಳಿಗೆ ಗಮನ ಸೆಳೆಯಿತು. ಮೇಳದಲ್ಲಿ ಎಲ್ಲೆಲ್ಲೂ ಹಲಸಿನದೇ ಕಂಪು..!

ಕನ್ನಡಪ್ರಭ ವಾರ್ತೆ ಮಂಗಳೂರುಸಾವಯವ ಕೃಷಿಕ ಬಳಗ ಮಂಗಳೂರು ವತಿಯಿಂದ ನಗರದ ಬಾಳಂಭಟ್‌ ಹಾಲ್‌ನಲ್ಲಿ 2 ದಿನಗಳ ‘ಹಲಸು ಹಬ್ಬ’ ಶನಿವಾರ ಆರಂಭಗೊಂಡಿದ್ದು, ಮೊದಲ ದಿನವೇ ಗ್ರಾಹಕರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಹಲಸು ಹಬ್ಬ ಭಾನುವಾರವೂ ಮುಂದುವರಿಯಲಿದೆ.ವಿವಿಧ ಬಗೆಯ ಹಲಸುಗಳ ಪ್ರದರ್ಶನ ಮತ್ತು ಮಾರಾಟದ ಜತೆಗೆ ಹಲಸಿನ ವೈವಿಧ್ಯಮಯ ಖಾದ್ಯಗಳನ್ನು ಜನರು ಮುಗಿಬಿದ್ದು ಖರೀದಿಸಿದರು. ಹಲಸಿನಿಂದ ತಯಾರಿಸಿದ ಕೇಕ್‌, ಶೀರ, ಕಬಾಬ್‌, ಮುಳ್ಕ, ಗಾರಿಗೆ, ಪೋಡಿ ಹಾಗೂ ಹಲಸಿನ ಹೋಳಿಗೆ ಗಮನ ಸೆಳೆಯಿತು. ಮೇಳದಲ್ಲಿ ಎಲ್ಲೆಲ್ಲೂ ಹಲಸಿನದೇ ಕಂಪು..!42 ಮಳಿಗೆಗಳು:ಒಟ್ಟು 42 ಮಳಿಗೆಗಳಲ್ಲಿ ಹಲಸಿನ ಹಣ್ಣುಗಳು, ಅವುಗಳ ಉತ್ಪನ್ನಗಳ ಜತೆಗೆ ಸೊಪ್ಪು, ಗೆಡ್ಡೆ ಗೆಣಸು, ತರಕಾರಿಗಳು, ಇನ್ನಿತರ ವಸ್ತುಗಳ ಮಾರಾಟವೂ ಇತ್ತು.ಮಂಗಳೂರಲ್ಲಿ ಚಂದ್ರಹಲಸು ಫೇಮಸ್‌: ಮಂಗಳೂರಿನ ಜನರಿಗೆ ಚಂದ್ರ ಹಲಸು ಎಂದರೆ ತುಂಬ ಇಷ್ಟ, ಅದನ್ನೇ ವಿಚಾರಿಸಿಕೊಂಡು ಬರುವವರಿದ್ದಾರೆ. ಕಳೆದ ವರ್ಷ 1.5 ಟನ್‌ ಹಲಸು ತಂದಿದ್ದೆ. ಒಂದೇ ದಿನದಲ್ಲಿ ಖಾಲಿಯಾಗಿತ್ತು. ಈಗ 2 ಟನ್‌ ತಂದಿದ್ದೇನೆ. ಬಿಡಿಸಿದ ಹಣ್ಣು ಕೆಜಿಗೆ 400 ರು., ಕತ್ತರಿಸಿದ ಹಣ್ಣು ಕೆಜಿಗೆ 200 ರು., ಇಡೀ ಹಲಸು ಕೆಜಿಗೆ 100 ರು.ನಂತೆ ಮಾರಾಟ ಮಾಡುತ್ತಿದ್ದೇವೆ ಎಂದು ತಿಪಟೂರಿನ ರೈತ ಮೋಹನ್‌ ಕುಮಾರ್‌ ಹೇಳಿದರು.ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ನಟ ಸ್ವರಾಜ್‌ ಶೆಟ್ಟಿ ಹಾಗೂ ದೇಸಿ ಬತ್ತದ ತಳಿಯ ಸಂರಕ್ಷಕಿ ಆಸ್ಮ ಬಾನು ಭಾಗವಹಿಸಿದ್ದರು. ಬಳಗದ ಅಧ್ಯಕ್ಷ ಜಿ.ಆರ್‌. ಪ್ರಸಾದ್‌ ಅಧ್ಯಕ್ಷತೆ ವಹಿಸಿದ್ದರು. ಬಳಗದ ಗೌರವ ಮಾರ್ಗದರ್ಶಕ ಪ್ರದೀಪ ಕುಮಾರ ಕಲ್ಕೂರ ಮತ್ತು ಗೌರವಾಧ್ಯಕ್ಷ ಅಡ್ಡೂರು ಕೃಷ್ಣ ರಾವ್‌ ಇದ್ದರು.ಹಲಸು ತಳಿ ಸಂಶೋಧಕ, ನಿವೃತ್ತ ಅರಣ್ಯಾಧಿಕಾರಿ ಗ್ಯಾಬ್ರಿಯಲ್‌ ಸ್ಟ್ಯಾನಿ ವೇಗಸ್‌ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.ಈ ಬಾರಿ ವಿಶೇಷವಾಗಿ ಸಾರ್ವಜನಿಕರಿಗೆ ಹಲಸಿನ ತೊಳೆ ಬಿಡಿಸುವುದು ಸೇರಿದಂತೆ ಹಲವು ಹಲವು ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

PREV

Recommended Stories

ಭಕ್ತರ ಸಹಕಾರದಿಂದ ದೇವಸ್ಥಾನದಲ್ಲಿ ಹೊಸತನ
ಪತ್ನಿ ಮೇಲೆ ಹಲ್ಲೆಗೈದು ಅರ್ಧ ತಲೆ ಬೋಳಿಸಿದ ಪತಿ