ರಾಮನಗರ: ಗ್ರಾಮೀಣ ಪ್ರದೇಶಗಳಲ್ಲಿ ಆಸ್ತಿ ತೆರಿಗೆ ಸಂಗ್ರಹದಲ್ಲಿ ಕಳೆದ ಎರಡು ವರ್ಷಗಳಿಗೆ ಹೋಲಿಕೆ ಮಾಡಿದಲ್ಲಿ ಈ ವರ್ಷ (2024 -25) ರಾಮನಗರ ಜಿಲ್ಲಾ ಪಂಚಾಯಿತಿ ಅತಿ ಹೆಚ್ಚು 56.71 ಕೋಟಿ ರು. ತೆರಿಗೆ ವಸೂಲಿ ಮಾಡಿದೆ.
ದಾಖಲೆ ಮಟ್ಟದಲ್ಲಿ ತೆರಿಗೆ ಸಂಗ್ರಹ:
ಜಿಲ್ಲಾ ವ್ಯಾಪ್ತಿಯ 126 ಗ್ರಾಮ ಪಂಚಾಯಿತಿಗಳಿಂದ 2022-23ನೇ ಸಾಲಿನಲ್ಲಿ 41.57 ಕೋಟಿ ರು. ತೆರಿಗೆ ಸಂಗ್ರಹದ ಗುರಿಯಲ್ಲಿ 33.03 ಕೋಟಿ ರು ಸಂಗ್ರಹಿಸಲಾಗಿದ್ದರೆ, 2023-24ನೇ ಸಾಲಿನಲ್ಲಿ 50.62 ಕೋಟಿ ರು ಗುರಿಯಲ್ಲಿ 41.82 ಕೋಟಿ ರು. ವಸೂಲಿಯಾಗಿತ್ತು. ಇನ್ನು 2024-25ನೇ ಸಾಲಿನಲ್ಲಿ 61.40 ಕೋಟಿ ರು ಗುರಿ ಪೈಕಿ 56.71ಕೋಟಿ ರು ತೆರಿಗೆ ಸಂಗ್ರಹಿಸಲಾಗಿದೆ.ಜಿಲ್ಲೆಯ 5 ತಾಲೂಕುಗಳ ಪೈಕಿ ಅತಿ ಹೆಚ್ಚು ಹಾರೋಹಳ್ಳಿ ತಾಲೂಕಿನ 11 ಗ್ರಾಮ ಪಂಚಾಯಿತಿಗಳು 8.16 ಕೋಟಿ ರು. ಗುರಿ ಪೈಕಿ 8.11 ಕೋಟಿ ರು. ತೆರಿಗೆ ಸಂಗ್ರಹಿಸಿ ಶೇ. 99.36ರಷ್ಟು ಪ್ರಗತಿ ಸಾಧಿಸಿದ್ದರೆ, ಅತಿ ಕಡಿಮೆ ಚನ್ನಪಟ್ಟಣ ತಾಲೂಕಿನ 32 ಗ್ರಾಪಂಗಳು 8.11 ಕೋಟಿ ರು. ಗುರಿ ಪೈಕಿ 6.34 ಕೋಟಿ 34 ಲಕ್ಷ ರು. ಮಾತ್ರ ತೆರಿಗೆ ವಸೂಲಿ ಮಾಡಿವೆ.
ಜಿಲ್ಲೆಯ 126 ಗ್ರಾಪಂಗಳ ಪೈಕಿ 29 ಗ್ರಾಪಂಗಳು ತೆರಿಗೆ ವಸೂಲಿಯಲ್ಲಿ ಶೇ.100ಕ್ಕಿಂತಲೂ ಹೆಚ್ಚಿನ ಗುರಿ ಸಾಧನೆ ಮಾಡಿವೆ.
ತೆರಿಗೆ ವಸೂಲಿ ಮಾಡಿ ಆರ್ಥಿಕ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಗ್ರಾಪಂಗಳು ಅಸಡ್ಡೆ ತೋರುತ್ತಿರುವ ಆರೋಪ ಕೇಳಿ ಬರುತ್ತಿರುವಾಗಲೇ ರಾಮನಗರ ಜಿಲ್ಲೆಯ ಗ್ರಾಪಂಗಳು ದಾಖಲೆ ಮಟ್ಟದಲ್ಲಿ ತೆರಿಗೆ ಸಂಗ್ರಹ ಮಾಡಿರುವುದು ವಿಶೇಷ.
ಶೇ.100ಕ್ಕಿಂತಲೂ ಹೆಚ್ಚು ತೆರಿಗೆ ಸಂಗ್ರಹಿಸಿದ ಗ್ರಾಪಂಗಳು:
ಮಾಗಡಿ ತಾಲೂಕಿನ ಆಗಲಕೋಟೆ, ಹುಳ್ಳೇನಹಳ್ಳಿ , ಅದರಂಗಿ, ಸೋಲೂರು, ಕುದೂರು, ಸಾತನೂರು, ಮಾಡ್ ಬಾಳ್ , ಕಲ್ಯಾ, ರಾಮನಗರ ತಾಲೂಕಿನ ದೊಡ್ಡಗಂಗವಾಡಿ, ಲಕ್ಷ್ಮೀಪುರ, ಅಕ್ಕೂರು, ಬನ್ನಿಕುಪ್ಪೆ (ಕೆ) ಗ್ರಾಮ ಪಂಚಾಯಿತಿಗಳು
ಗ್ರಾಪಂಗಳ ತೆರಿಗೆ ಸಂಗ್ರಹ ವಿವರ
ಚನ್ನಪಟ್ಟಣ328,11,20,684.726,34,53,765.9078.22
ಕನಕಪುರ317,66,79,078.827,28,00,479.5894.92ಮಾಗಡಿ327,99,13,211.347,08,41,463.7488.64
ರಾಮನಗರ2029,47,43,265.9627,89,20,777.4694.63ಹಾರೋಹಳ್ಳಿ118,16,35,781.868,11,20,171.2099.36
---------------------------------------------------------------------------------------------------------ಒಟ್ಟು12661,40,92,022.7056,71,36,657.8892.35
----------------------------------------------------------------------------------------------------------ಕೋಟ್ ....................
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ, ಕರ ವಸೂಲಿಗಾರರು ಮತ್ತು ಕಂಪ್ಯೂಟರ್ ಆಪರೇಟರ್ ಗಳು ಕರ ವಸೂಲಾತಿ ಬಗ್ಗೆ ಸಾರ್ವಜನಿಕರಲ್ಲಿ ತೆರಿಗೆ ಅಭಿಯಾನದ ಮೂಲಕ ಜಾಗೃತಿ ಮೂಡಿಸಲಾಯಿತು. ವಿಶೇಷ ಶ್ರಮ ವಹಿಸಿದ ಕಾರಣ ಉತ್ತಮ ಪ್ರಗತಿ ಸಾಧಿಸಲು ಸಾಧ್ಯವಾಗಿದೆ.-ಅನ್ಮೋಲ್ ಜೈನ್ , ಸಿಇಒ, ಜಿಪಂ, ರಾಮನಗರ
24ಕೆಆರ್ ಎಂಎನ್ 2,3.ಜೆಪಿಜಿ2.ರಾಮನಗರ ಜಿಲ್ಲಾ ಪಂಚಾಯಿತಿ ಕಚೇರಿ
3.ಜಿಪಂ ಸಿಇಒ ಅನ್ಮೋಲ್ ಜೈನ್