ಡಿಜಿಟಲ್‌ ಪಾವತಿಗೆ ಕರ್ಣಾಟಕ ಬ್ಯಾಂಕ್‌ ತಂತ್ರಜ್ಞಾನ ಸಹಭಾಗಿತ್ವ

KannadaprabhaNewsNetwork |  
Published : Apr 23, 2026, 02:45 AM IST
ಕೆಬಿಎಲ್‌ ಲೋಗೋ | Kannada Prabha

ಸಾರಾಂಶ

ದೇಶದ ಪ್ರಮುಖ ಖಾಸಗಿ ವಲಯದ ಬ್ಯಾಂಕ್‌ಗಳಲ್ಲೊಂದು ಆಗಿರುವ ಕರ್ಣಾಟಕ ಬ್ಯಾಂಕ್‌ ಡಿಜಿಟಲ್ ಪಾವತಿ ಸೇವೆಗಳನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ Pine Labs Ltd ಸಂಸ್ಥೆಯೊಂದಿಗೆ ತಂತ್ರಜ್ಞಾನ ಸಹಭಾಗಿತ್ವಕ್ಕೆ ಕೈಜೋಡಿಸಿದೆ. ಈ ಒಪ್ಪಂದದ ಮೂಲಕ ಬ್ಯಾಂಕ್ ತನ್ನ ಗ್ರಾಹಕರಿಗೆ ಅತ್ಯಾಧುನಿಕ ಪಾಯಿಂಟ್ ಆಫ್ ಸೇಲ್ (PoS) ಸೇವೆಗಳನ್ನು ಒದಗಿಸಲು ಮುಂದಾಗಿದೆ.

ಮಂಗಳೂರು: ದೇಶದ ಪ್ರಮುಖ ಖಾಸಗಿ ವಲಯದ ಬ್ಯಾಂಕ್‌ಗಳಲ್ಲೊಂದು ಆಗಿರುವ ಕರ್ಣಾಟಕ ಬ್ಯಾಂಕ್‌ ಡಿಜಿಟಲ್ ಪಾವತಿ ಸೇವೆಗಳನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ Pine Labs Ltd ಸಂಸ್ಥೆಯೊಂದಿಗೆ ತಂತ್ರಜ್ಞಾನ ಸಹಭಾಗಿತ್ವಕ್ಕೆ ಕೈಜೋಡಿಸಿದೆ. ಈ ಒಪ್ಪಂದದ ಮೂಲಕ ಬ್ಯಾಂಕ್ ತನ್ನ ಗ್ರಾಹಕರಿಗೆ ಅತ್ಯಾಧುನಿಕ ಪಾಯಿಂಟ್ ಆಫ್ ಸೇಲ್ (PoS) ಸೇವೆಗಳನ್ನು ಒದಗಿಸಲು ಮುಂದಾಗಿದೆ.

ಮಂಗಳವಾರ ಬ್ಯಾಂಕಿನ ಪ್ರಧಾನ ಕಚೇರಿ ಮಂಗಳೂರಿನಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ರಾಘವೇಂದ್ರ ಎಸ್‌.ಭಟ್‌, ಡಿಜಿಟಲ್ ಬ್ಯಾಂಕ್ ಆಫ್ ದ ಫ್ಯೂಚರ್ ಆಗುವ ನಮ್ಮ ದೃಷ್ಟಿಗೆ ಈ ಸಹಭಾಗಿತ್ವ ಪೂರಕವಾಗಿದೆ. Pine Labs ಒದಗಿಸುವ ಬಳಕೆದಾರ ಸ್ನೇಹಿ ಮತ್ತು ವಿಶ್ವಾಸಾರ್ಹ ಸೇವೆಗಳು ಇಂದಿನ ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಈ ಸಹಯೋಗದ ಮೂಲಕ ನಮ್ಮ ರೀಟೈಲ್ ಮತ್ತು MSME ಗ್ರಾಹಕರು ಸುಲಭವಾಗಿ ಆಧುನಿಕ PoS ಟರ್ಮಿನಲ್‌ಗಳನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಾ ಬಿ.ಎಸ್‌. ಅವರು, ಗ್ರಾಹಕರ ಅಗತ್ಯಗಳನ್ನು ಪೂರೈಸುವುದು ಕರ್ಣಾಟಕ ಬ್ಯಾಂಕಿನ ಮುಖ್ಯ ಗುರಿಯಾಗಿದೆ. ಈ ಹೊಸ ಒಪ್ಪಂದದ ಮೂಲಕ ಮುಂದಿನ ತಲೆಮಾರಿನ ಡಿಜಿಟಲ್ ಪಾವತಿ ಪರಿಹಾರಗಳನ್ನು ನೀಡಲು ಸಾಧ್ಯವಾಗುತ್ತದೆ. ದೇಶದಾದ್ಯಂತ ನಮ್ಮ ಎಲ್ಲಾ ಶಾಖೆಗಳಲ್ಲಿ ಈ ಸೇವೆ ಲಭ್ಯವಿರಲಿದ್ದು, ಗ್ರಾಹಕರು ಇದರ ಸದುಪಯೋಗ ಪಡೆಯಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಬ್ಯಾಂಕಿನ ಜನರಲ್ ಮ್ಯಾನೇಜರ್‌ಗಳಾದ ರಘುರಾಮ ಎಚ್‌.ಎಸ್‌, ವೆಂಕಟೇಶ್ವರಲು ಮಲ್ಲಿನೇನಿ, Pine Labs‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಮಿತ್‌ ಚೋಪ್ರಾ, ಇವಿಪಿ ಬ್ಯಾಂಕ್ ಅಲೈಯನ್ಸ್‌ನ ಸ್ವಪನ್‌ ಘೋಷ್‌ ಸೇರಿದಂತೆ ಹಿರಿಯ ಅಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೆದ್ದಾರಿ ಅತಿಕ್ರಮಣ ವಿರುದ್ಧ ಕ್ರಮಕ್ಕೆ ಸಂಸದ ಕ್ಯಾ.ಬ್ರಿಜೇಶ್ ಚೌಟ ಸೂಚನೆ
ಮಂಜನಾಡಿ ಗುಡ್ಡ ಕುಸಿತ ಮಾನವ ನಿರ್ಲಕ್ಷ್ಯ: ಎನ್‌ಐಟಿಕೆ ವರದಿ ಬಹಿರಂಗ