ಮಂಗಳೂರಿನ ಪ್ರಥಮ ಟೆಲಿಸರ್ಜರಿ: ಯೆನೆಪೋಯ ಆಸ್ಪತ್ರೆ ಸಾಧನೆ

KannadaprabhaNewsNetwork |  
Published : Feb 22, 2026, 02:45 AM IST
ಯೆನೆಪೋಯ ಆಸ್ಪತ್ರೆ ವೈದ್ಯರ ತಂಡ. | Kannada Prabha

ಸಾರಾಂಶ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮ ರೊಬೋಟಿಕ್ ಟೆಲಿಸರ್ಜರಿಯನ್ನು ಯಶಸ್ವಿಯಾಗಿ ನಡೆಸುವ ಮೂಲಕ ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಯು ಸುಧಾರಿತ ಆರೋಗ್ಯ ಕ್ಷೇತ್ರದಲ್ಲಿ ಐತಿಹಾಸಿಕ ಮೈಲುಗಲ್ಲು ಸಾಧಿಸಿದೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮ ರೊಬೋಟಿಕ್ ಟೆಲಿಸರ್ಜರಿಯನ್ನು ಯಶಸ್ವಿಯಾಗಿ ನಡೆಸುವ ಮೂಲಕ ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಯು ಸುಧಾರಿತ ಆರೋಗ್ಯ ಕ್ಷೇತ್ರದಲ್ಲಿ ಐತಿಹಾಸಿಕ ಮೈಲುಗಲ್ಲು ಸಾಧಿಸಿದೆ.

ಯೆನೆಪೋಯ ನೆಫ್ರೋ ಯುರೋಲಜಿ ಸಂಸ್ಥೆಯ ಮೂತ್ರಶಾಸ್ತ್ರ ವಿಭಾಗವು ಮೂತ್ರಾಶಯದ ಕ್ಯಾನ್ಸರ್‌ನಿಂದ ಬಳಲುತ್ತಿರುವ 64 ವಯಸ್ಸಿನ ರೋಗಿಯ ಮೇಲೆ ರಿಮೊಟ್ ರೊಬೋಟ್ ಟೆಲಿಸರ್ಜರಿಯನ್ನು ನಡೆಸಿತು. ಶಸ್ತ್ರಚಿಕಿತ್ಸಕರಿಂದ ಸುಮಾರು 2 ಸಾವಿರ ಕಿ.ಮೀ.ಗೂ ಅಧಿಕ ದೂರದಲ್ಲಿರುವ ರೋಗಿಗೆ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಇದು ತಂತ್ರಜ್ಞಾನ ಶಕ್ತಗೊಂಡ ರೊಬೋಟಿಕ್ ಶಸ್ತ್ರಚಿಕಿತ್ಸೆಯ ಗಮನಾರ್ಹ ನಿಖರತೆ ಮತ್ತು ವಿಶ್ವಾಸಾರ್ಹತೆ ಪ್ರದರ್ಶಿಸಿದೆ.

ಶಸ್ತ್ರಚಿಕಿತ್ಸೆಯನ್ನು ಯುರೋಲಜಿ ವಿಭಾಗದ ಮುಖ್ಯಸ್ಥ ಪ್ರೊ.ಡಾ. ಮುಜೀಬು ರಹಿಮಾನ್, ಪ್ರೊ.ಡಾ.ನಿಶ್ಚಿತ್ ಡಿಸೋಜ, ಪ್ರೊ.ಡಾ. ಅಲ್ತಾಫ್ ಖಾನ್, ಡಾ. ರೆಹ್ಮಾನ್‌ ಖಾನ್ ನಿರ್ವಹಿಸಿದರು. ಅರಿವಳಿಕೆ ತಜ್ಞ ಪ್ರೊ.ಡಾ. ತಿಪ್ಪೇಸ್ವಾಮಿ ಮತ್ತು ಅವರ ತಂಡವು ಸುರಕ್ಷಿತ ಅರಿವಳಿಕೆ ನಿರ್ವಹಣೆ ಮತ್ತು ಶಸ್ತ್ರಕ್ರಿಯಗೆ ಬೇಕಾದ ಸಂಪೂರ್ಣ ವ್ಯವಸ್ಥೆಗಳನ್ನು ನಿಭಾಯಿಸಿದರು. ಹೆಚ್ಚುವರಿ ಕಾರ್ಯಾಚರಣೆಯ ಸಮನ್ವಯ ಮತ್ತು ತಾಂತ್ರಿಕ ಬೆಂಬಲವನ್ನು ನೆಫ್ರಾಲಜಿ ವಿಬಾಗದ ಮುಖ್ಯಸ್ಥ ಪ್ರೊ.ಡಾ. ಸಂತೊಷ್ ಪೈ ಮತ್ತು ಆಸ್ಪತ್ರೆಯ ಉಪ ವ್ಯವಸ್ಥಾಪಕ ಮತ್ತು ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ಸಂಯೋಜನೆಯ ಮುಖ್ಯ ಸಂಘಟಕ ನೆಲ್ವಿನ್ ನೆಲ್ಸನ್ ಸಹಕರಿಸಿದರು.ಶಸ್ತ್ರಚಿಕಿತ್ಸೆ ಬಳಿಕ ರೋಗಿಯ ಚೇತರಿಕೆಯು ಹೆಚ್ಚು ತೃಪ್ತಿಕರವಾಗಿರುವುದು ಕಂಡುಬಂದಿದೆ. ಈ ಸಾಧನೆಗಾಗಿ ಕುಲಪತಿ ಡಾ. ಯೆನೆಪೋಯ ಅಬ್ದುಲ್ಲಾ ಕುಂಞಿ, ಪ್ರೊ ಚಾನ್ಸಲರ್ ಫರ್ಹಾದ್ ಯೆನೆಪೋಯ, ಪ್ರೊ ಚಾನ್ಸಲರ್ ಡಾ.ಎಂ. ವಿಜಯ ಕುಮಾರ್, ಉಪಕುಲಪತಿ ಡಾ. ಗಂಗಾಧರ ಸೋಮಯಾಜಿ ಮತ್ತು ವೈದ್ಯಕೀಯ ಅಧೀಕ್ಷಕ ಡಾ. ಹಬೀಬ್ ರಹಮಾನ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯು ಮೂರು ಸಂಪೂರ್ಣ ಕಾರ್ಯಾಚರಣೆಯ ರೊಬೋಟಿಕ್ ಶಸ್ತ್ರಚಿಕಿತ್ಸಾ ವ್ಯವಸ್ಥೆಗಳೊಂದಿಗೆ ಸಜ್ಜುಗೊಂಡ ಕರಾವಳಿ ಕರ್ನಾಟಕದ ಮೊದಲ ಆಸ್ಪತ್ರೆ. ಇದರಲ್ಲಿ ಎರಡು ರೊಬೋಟ್‌ಗಳು ಮತ್ತು ಒಂದು ಸರ್ಜಿಕಲ್ ಸಿಸ್ಟಂ ಇವೆ. ಈ ಅತ್ಯಾಧುನಿಕ ರೋಬೋಟಿಕ್ ತಂತ್ರಜ್ಞಾನವು ಮೂತ್ರಶಾಸ್ತ್ರ, ಕ್ಯಾನ್ಸರ್ ಶಸ್ತ್ರಚಿಕಿತ್ಸೆ ಸೇರಿದಂತೆ ಅನೇಕ ಸ್ಪೆಷಾಲಿಟಿ ಸೇವಾ ವಿಭಾಗಗಳಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತದೆ. ಸ್ರೀರೋಗ ಕ್ಯಾನ್ಸರ್, ಹೃದಯ ಶಸ್ತ್ರಚಿಕಿತ್ಸೆ ಮತ್ತು ಸಾಮಾನ್ಯ ಶಸ್ತ್ರಚಿಕಿತ್ಸೆ ಸೇವಾ ವಿಭಾಗಗಳು ಕೂಡ ವಿಶ್ವದರ್ಜೆಯ ಶಸ್ತ್ರಚಿಕಿತ್ಸಾ ಸೇವೆಗಳನ್ನು ನೀಡಲು ಅನುಕೂಲ ಮಾಡಿಕೊಡುತ್ತದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸವಣೂರು ವಿದ್ಯಾರಶ್ಮಿ ಕಾಲೇಜು: ಆರೋಗ್ಯ ಮಾಹಿತಿ ಕಾರ್ಯಕ್ರಮ
ಜಿ.ಎಂ. ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್‌ನಲ್ಲಿ ನಾಯಕರ ತರಬೇತಿ, ಕಿಟ್‌ ವಿತರಣೆ