ಝೆಫೈರ್-2026’ ರಾಷ್ಟ್ರೀಯ ಮಟ್ಟದ ಫೆಸ್ಟ್ ಉದ್ಘಾಟನೆ

KannadaprabhaNewsNetwork |  
Published : May 09, 2026, 02:45 AM IST
‘ಝೆಫೈರ್-2026’ ರಾಷ್ಟ್ರೀಯ ಮಟ್ಟದ ಫೆಸ್ಟ್‌ಗೆ ಚಾಲನೆ ನೀಡಲಾಯಿತು | Kannada Prabha

ಸಾರಾಂಶ

ಮಂಗಳೂರು ವಾಮಂಜೂರಿನ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ (ಎಸ್‌ಜೆಇಸಿ) ವ್ಯವಹಾರ ನಿರ್ವಹಣಾ ವಿಭಾಗದ ವತಿಯಿಂದ ‘ಗೇಮ್ ಒಫ್ ಥ್ರೋನ್ಸ್-ಲೀಡ್, ಕಾನ್ಕಾರ್ ಆ್ಯಂಡ್‌ ರೂಲ್’ ಎಂಬ ಥೀಮ್‌ನೊಂದಿಗೆ ‘ಝೆಫೈರ್-2026’ ರಾಷ್ಟ್ರೀಯ ಮಟ್ಟದ ಯುಜಿ ಮತ್ತು ಪಿಜಿ ಮ್ಯಾನೇಜ್‌ಮೆಂಟ್ ಫೆಸ್ಟ್

ಮಂಗಳೂರು: ಮಂಗಳೂರು ವಾಮಂಜೂರಿನ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ (ಎಸ್‌ಜೆಇಸಿ) ವ್ಯವಹಾರ ನಿರ್ವಹಣಾ ವಿಭಾಗದ ವತಿಯಿಂದ ‘ಗೇಮ್ ಒಫ್ ಥ್ರೋನ್ಸ್-ಲೀಡ್, ಕಾನ್ಕಾರ್ ಆ್ಯಂಡ್‌ ರೂಲ್’ ಎಂಬ ಥೀಮ್‌ನೊಂದಿಗೆ ‘ಝೆಫೈರ್-2026’ ರಾಷ್ಟ್ರೀಯ ಮಟ್ಟದ ಯುಜಿ ಮತ್ತು ಪಿಜಿ ಮ್ಯಾನೇಜ್‌ಮೆಂಟ್ ಫೆಸ್ಟ್ ಬುಧವಾರ ಕಲಾಂ ಸಭಾಂಗಣದಲ್ಲಿ ನಡೆಯಿತು.

ಪ್ರೋವಿಟ್ ಫುಡ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿನ್ಸೆಂಟ್ ಕುಟಿಂಹೋ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಯಶಸ್ಸು ಒಂದು ಪ್ರಯಾಣವಾಗಿದ್ದು, ಪುನಃ ಪುನಃ ವಿಫಲತೆಯ ಮೂಲಕ ಬರುತ್ತದೆ. ಸವಾಲಿನ ನಿರ್ಧಾರಗಳನ್ನು ತೆಗೆದುಕೊಳ್ಳಲು ಧೈರ್ಯ ಇರಬೇಕು. ನಾಯಕತ್ವ ಗುಣಗಳನ್ನು ಮೈಗೂಡಿಸಿಕೊಳ್ಳಿ ಎಂದರು.

ಎಸ್‌ಜೆಇಸಿ ನಿರ್ದೇಶಕ ಫಾ.ವಿಲ್ಫ್ರೆಡ್ ಪ್ರಕಾಶ್ ಡಿಸೋಜಾ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಡಾ.ರಿಯೋ ಡಿಸೋಜಾ, ಸಹ ನಿರ್ದೇಶಕ ಫಾ.ಕೆನೆತ್ ರೇನರ್ ಕ್ರಾಸ್ಟಾ, ಎಂಬಿಎ ಡೀನ್ ಡಾ.ಪ್ರಕಾಶ್ ಪಿಂಟೋ, ಫ್ಯಾಕಲ್ಟಿ ಸಂಯೋಜಕ ನೆಲ್ಸನ್ ಮಾರ್ವಿನ್ ಫೆರ್ನಾಂಡಿಸ್, ವಿದ್ಯಾರ್ಥಿ ಸಂಯೋಜಕ ರಾಹುಲ್ ಪುತ್ರನ್, ವೈಷ್ಣವಿ ಶೆಟ್ಟಿ ಇದ್ದರು.

ವಿದ್ಯಾರ್ಥಿ ಸಂಯೋಜಕಿ ವೈಷ್ಣವಿ ಶೆಟ್ಟಿ ಸ್ವಾಗತಿಸಿದರು. ರಾಹುಲ್ ಪುತ್ರನ್ ವಂದಿಸಿದರು. ಲೀಷಾ ರೊಡ್ರಿಗಸ್ ಮತ್ತು ಲೆರಿನಾ ಡಿಸೋಜಾ ನಿರೂಪಿಸಿದರು.

ಉದ್ಘಾಟನೆಯ ನಂತರ ಬಿಸಿನೆಸ್ ಕ್ವಿಜ್, ಬೆಸ್ಟ್ ಮ್ಯಾನೇಜರ್, ಎಚ್.ಆರ್, ಫೈನಾನ್ಸ್, ಮಾರ್ಕೆಟಿಂಗ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಕಾರ್ಯಕ್ರಮ ನಡೆಯಿತು. ಮಂಗಳೂರು ಹಾಗೂ ಸುತ್ತಮುತ್ತಲಿನ ಒಟ್ಟು 15 ಕಾಲೇಜುಗಳು ಭಾಗವಹಿಸಿದ್ದವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯುವಕರು ಧರ್ಮದ ಹಾದಿಯಲ್ಲಿ ನಡೆಯಲಿ: ಅಭಿನವ ಸಿದ್ಧಲಿಂಗ ಶ್ರೀ
ದಾನಮ್ಮ ಉತ್ಸವ ದೇಸಿ ಸಂಸ್ಕೃತಿಗೆ ಹಿಡಿದ ಕನ್ನಡಿ: ಎಂ.ಎ.ಮೋರೆ