ಶ್ರೀನಿವಾಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ ಪ್ರತಿಷ್ಠಿತ AAA ರೇಟಿಂಗ್

KannadaprabhaNewsNetwork |  
Published : Jul 03, 2026, 02:45 AM IST
ಮಂಗಳೂರಿನ ಶ್ರೀನಿವಾಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ | Kannada Prabha

ಸಾರಾಂಶ

ಮಂಗಳೂರಿನ ಶ್ರೀನಿವಾಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (SIT) ದೇಶದ ಪ್ರತಿಷ್ಠಿತ ಉನ್ನತ ಶಿಕ್ಷಣ ಹಾಗೂ ವೃತ್ತಿ ಮಾರ್ಗದರ್ಶನ ಸಂಸ್ಥೆಯಾದ Careers 360 ನಡೆಸಿದ India Best Engineering Institutes 2026 ಮೌಲ್ಯಮಾಪನದಲ್ಲಿ AAA ರೇಟಿಂಗ್ ಪಡೆದು ಮತ್ತೊಂದು ಮಹತ್ವದ ಸಾಧನೆ ಮಾಡಿದೆ.ವಿದ್ಯಾರ್ಥಿಗಳ ಗುಣಮಟ್ಟ, ಬೋಧಕ ವೃಂದದ ಸಾಮರ್ಥ್ಯ, ಕಲಿಕಾ ವಾತಾವರಣ, ಮೂಲಸೌಕರ್ಯ, ಪದವೀಧರರ ಸಾಧನೆ, ಉದ್ಯೋಗಾವಕಾಶಗಳು, ವೈವಿಧ್ಯತೆ ಹಾಗೂ ಸಂಶೋಧನಾ ಸಾಧನೆ ಸೇರಿದಂತೆ ವಿವಿಧ ಮಾನದಂಡಗಳನ್ನು ಸಮಗ್ರವಾಗಿ ಪರಿಶೀಲಿಸಿ ಈ ರೇಟಿಂಗ್ ನೀಡಲಾಗಿದೆ.

ಮಂಗಳೂರು: ಮಂಗಳೂರಿನ ಶ್ರೀನಿವಾಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (SIT) ದೇಶದ ಪ್ರತಿಷ್ಠಿತ ಉನ್ನತ ಶಿಕ್ಷಣ ಹಾಗೂ ವೃತ್ತಿ ಮಾರ್ಗದರ್ಶನ ಸಂಸ್ಥೆಯಾದ Careers 360 ನಡೆಸಿದ India Best Engineering Institutes 2026 ಮೌಲ್ಯಮಾಪನದಲ್ಲಿ AAA ರೇಟಿಂಗ್ ಪಡೆದು ಮತ್ತೊಂದು ಮಹತ್ವದ ಸಾಧನೆ ಮಾಡಿದೆ.ವಿದ್ಯಾರ್ಥಿಗಳ ಗುಣಮಟ್ಟ, ಬೋಧಕ ವೃಂದದ ಸಾಮರ್ಥ್ಯ, ಕಲಿಕಾ ವಾತಾವರಣ, ಮೂಲಸೌಕರ್ಯ, ಪದವೀಧರರ ಸಾಧನೆ, ಉದ್ಯೋಗಾವಕಾಶಗಳು, ವೈವಿಧ್ಯತೆ ಹಾಗೂ ಸಂಶೋಧನಾ ಸಾಧನೆ ಸೇರಿದಂತೆ ವಿವಿಧ ಮಾನದಂಡಗಳನ್ನು ಸಮಗ್ರವಾಗಿ ಪರಿಶೀಲಿಸಿ ಈ ರೇಟಿಂಗ್ ನೀಡಲಾಗಿದೆ.ಈ ಗೌರವ ಗುಣಮಟ್ಟದ ತಾಂತ್ರಿಕ ಶಿಕ್ಷಣ, ಸಂಶೋಧನೆ, ನವೋದ್ಯಮ, ಉದ್ಯಮ-ಶೈಕ್ಷಣಿಕ ಸಹಯೋಗ ಹಾಗೂ ವಿದ್ಯಾರ್ಥಿಗಳ ಉದ್ಯೋಗಾರ್ಹತೆಯನ್ನು ಹೆಚ್ಚಿಸುವಲ್ಲಿ ಶ್ರೀನಿವಾಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ನಿರಂತರ ಬದ್ಧತೆಯ ಪ್ರತೀಕವಾಗಿದೆ. ಈ ಸಂಸ್ಥೆ ಕಳೆದ ಹಲವು ವರ್ಷಗಳಿಂದ ಫಲಿತಾಂಶ ಆಧಾರಿತ ಶಿಕ್ಷಣ, ಕೈಗಾರಿಕಾ ತರಬೇತಿ, ಸಂಶೋಧನೆ, ನವೀನತೆ, ಉದ್ಯಮಶೀಲತೆ ಹಾಗೂ ಕೌಶಲ್ಯಾಭಿವೃದ್ಧಿಗೆ ವಿಶೇಷ ಒತ್ತು ನೀಡುತ್ತಿದೆ. ದೇಶದ ವಿವಿಧ ಪ್ರತಿಷ್ಠಿತ ಸಂಸ್ಥೆಗಳೊಂದಿಗೆ ಸಹಭಾಗಿತ್ವದ ಮೂಲಕ ವಿದ್ಯಾರ್ಥಿಗಳಿಗೆ ಅತ್ಯುತ್ತಮ ತರಬೇತಿ ಹಾಗೂ ಉದ್ಯೋಗಾವಕಾಶಗಳನ್ನು ಒದಗಿಸುತ್ತಿದೆ. ಪ್ರಾಂಶುಪಾಲ ಡಾ. ಶ್ರೀನಿವಾಸ ಮಯ್ಯ ಡಿ. ಅವರು ಈ ಸಾಧನೆಯನ್ನು ವಿದ್ಯಾರ್ಥಿಗಳು, ಪೋಷಕರು, ಹಳೆಯ ವಿದ್ಯಾರ್ಥಿಗಳು, ನೇಮಕಾತಿ ಸಂಸ್ಥೆಗಳು ಹಾಗೂ ಸಂಸ್ಥೆಯ ಎಲ್ಲ ಹಿತೈಷಿಗಳಿಗೆ ಸಮರ್ಪಿಸುತ್ತಾ, ಅವರ ನಿರಂತರ ಸಹಕಾರವೇ ಈ ಯಶಸ್ಸಿನ ಹಿಂದಿನ ಪ್ರಮುಖ ಶಕ್ತಿಯಾಗಿದೆ ಎಂದು ತಿಳಿಸಿದರು ಶ್ರೀನಿವಾಸ್ ವಿಶ್ವವಿದ್ಯಾಲಯ ಕುಲಾಧಿಪತಿಗಳಾದ ಡಾ. ಶ್ರೀನಿವಾಸ್ ರಾವ್ ಅವರು ಈ ಸಾಧನೆ ಕುರಿತು ಸಂತಸ ವ್ಯಕ್ತಪಡಿಸಿ, ಪ್ರಾಂಶುಪಾಲರು, ಬೋಧಕ ವೃಂದ, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ, ಈ ಮಾನ್ಯತೆ ಸಂಸ್ಥೆಗೆ ಮತ್ತಷ್ಟು ಉತ್ಸಾಹ ತುಂಬಿದ್ದು, ಭವಿಷ್ಯದಲ್ಲಿಯೂ ಅತ್ಯುನ್ನತ ಗುಣಮಟ್ಟದ ಎಂಜಿನಿಯರಿಂಗ್ ಶಿಕ್ಷಣವನ್ನು ನೀಡುವ ಮೂಲಕ ಸಮಾಜಕ್ಕೆ ಸಮರ್ಥ ಹಾಗೂ ಜವಾಬ್ದಾರಿಯುತ ಎಂಜಿನಿಯರ್‌ಗಳನ್ನು ರೂಪಿಸುವ ಕಾರ್ಯವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮುಂದುವರಿಸಲಾಗುವುದು ಎಂದರು.

--------------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಡಗಿನಾದ್ಯಂತ ಬಿರುಸು ಪಡೆದ ಮಳೆ
ಮಾದಕ ವಸ್ತು ವಿರೋಧಿ ದಿನ ಆಚರಣೆ