)
ಮಂಗಳೂರು: ಮಂಗಳೂರು ವಿವಿಯು ಯುಐ ಗ್ರೀನ್‌ಮೆಟ್ರಿಕ್ ಶ್ರೇಯಾಂಕದಲ್ಲಿ (2025) ರಾಷ್ಟ್ರ ಮಟ್ಟದಲ್ಲಿ ನಂ.3, ಜಾಗತಿಕವಾಗಿ 127ನೇ ಸ್ಥಾನ ಪಡೆದು ಸಾಧನೆ ಮಾಡಿದೆ. ಆರ್ಥಿಕ ಕೊರತೆಗಳ ನ ಡುವೆಯೂ ಮಂಗಳೂರು ವಿವಿಯ ಈ ವಿಭಿನ್ನ ಸಾಧನೆ ಇದೀಗ ಗಮನ ಸೆಳೆದಿದೆ.
ಇದರಲ್ಲಿ ಭಾರತದ 100 ವಿಶ್ವವಿದ್ಯಾನಿಲಯಗಳು ಭಾಗವಹಿಸಿದ್ದು, ವಿಶ್ವಾದ್ಯಂತ 105 ದೇಶಗಳಲ್ಲಿನ 1745 ಸಂಸ್ಥೆಗಳು ಭಾಗವಹಿಸಿದ್ದವು.
ಮಂಗಳೂರು ವಿಶ್ವವಿದ್ಯಾನಿಲಯವು ವ್ಯವಸ್ಥೆ ಮತ್ತು ಮೂಲಸೌಕರ್ಯದಲ್ಲಿ ದೇಶದಲ್ಲಿ 1ನೇ ಸ್ಥಾನದಲ್ಲಿದೆ. ಇಂಧನ ಮತ್ತು ಹವಾಮಾನ ಬದಲಾವಣೆಯಲ್ಲಿ ದೇಶದಲ್ಲಿ 4 ನೇ ಸ್ಥಾನ, ತ್ಯಾಜ್ಯ ನಿರ್ವಹಣೆ ಮತ್ತು ನೀರಿನ ವಿಚಾರದಲ್ಲಿ ದೇಶದಲ್ಲಿ 6ನೇ ಸ್ಥಾನದಲ್ಲಿದೆ. ಶಿಕ್ಷಣ ಮತ್ತು ಸಂಶೋಧನೆಗಾಗಿ 10ನೇ ಸ್ಥಾನದಲ್ಲಿದೆ. ಸಾರಿಗೆ ವ್ಯವಸ್ಥೆಗಾಗಿ ದೇಶದಲ್ಲಿ 11ನೇ ಸ್ಥಾನದಲ್ಲಿದೆ.ಮಂಗಳೂರು ವಿವಿಗೆ ಸಂದ ಈ ಗೌರವವನ್ನು ನಮ್ಮ ಎಲ್ಲ ಅಧ್ಯಾಪಕರು, ಸಿಬ್ಬಂದಿ, ಸಂಶೋಧನಾ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿಗಳಿಗೆ ಅರ್ಪಿಸುತ್ತೇನೆ. ವಿಶ್ವವಿದ್ಯಾನಿಲಯದ ಹತ್ತಿರದ ಹಳ್ಳಿಗಳ ಜನರಿಗೂ ಕೂಡ ಧನ್ಯವಾದಗಳು.- ಪ್ರೊ.ಪಿ.ಎಲ್. ಧರ್ಮ, ಕುಲಪತಿ, ಮಂಗಳೂರು ವಿವಿ