ಹಾವೇರಿ: ರಾಜ್ಯದಲ್ಲಿ ವಸತಿ ಇಲಾಖೆಯಲ್ಲಿ ಲಂಚ, ಭ್ರಷ್ಟಾಚಾರದ ಗುಲ್ಲೆದ್ದಿರುವ ಸಂದರ್ಭದಲ್ಲಿ ನೆರೆ ಸಂತ್ರಸ್ತರ ವಸತಿ ಯೋಜನೆಯಡಿ ಬಿಲ್ ಮಂಜೂರಾತಿಗಾಗಿ ಸಂತ್ರಸ್ತರೊಬ್ಬರು ಪತ್ನಿಯ ಮಾಂಗಲ್ಯ ಸರ ಒತ್ತೆ ಇಟ್ಟು ಸರ್ಕಾರಿ ನೌಕರನಿಗೆ ₹20 ಸಾವಿರ ಲಂಚ ನೀಡಿರುವ ಆರೋಪ ಕೇಳಿ ಬಂದಿದೆ.
ಹಣ ಮಂಜೂರು ಮಾಡಲು ₹20 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು. ಕಚೇರಿ ಬಳಿ ಕ್ಯಾಂಟೀನ್‌ನಲ್ಲಿ ನೌಕರನಿಗೆ ₹20 ಸಾವಿರ ಲಂಚ ನೀಡಿದ್ದೇನೆ. ಲಂಚ ನೀಡುವ ಕುರಿತು ಪತ್ನಿಯ ಮಾಂಗಲ್ಯ ಒತ್ತೆ ಇಟ್ಟಿದ್ದೆ. ಆದರೂ ಈವರೆಗೆ ಬಿಲ್ ಮಂಜೂರು ಮಾಡಿಲ್ಲ ಎಂದು ಸಂತ್ರಸ್ತ ತಹಸೀಲ್ದಾರ್ ಶರಣಮ್ಮ ಅವರ ಬಳಿ ಆರೋಪಿಸಿದ್ದಾರೆ. ಲಂಚದ ಆರೋಪದ ಬಗ್ಗೆ ತನಿಖೆ ನಡೆಸಲಾಗುವುದು. ಆರೋಪ ಸಾಬೀತಾದರೆ ಕ್ರಮ ಜರುಗಿಸಲಾಗುವುದು ಎಂದು ತಹಸೀಲ್ದಾರ್ ಶರಣಮ್ಮ ತಿಳಿಸಿದ್ದಾರೆ.
ಕ್ರಮಕ್ಕೆ ಕೆಆರ್‌ಎಸ್ ಆಗ್ರಹ: ಸಂತ್ರಸ್ತನ ಜತೆಗೆ ಮಂಗಳವಾರ ತಹಸೀಲ್ದಾರ್ ಕಚೇರಿಗೆ ತೆರಳಿದ ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ಲಂಚ ಪಡೆದ ಆರೋಪಿ ನೌಕರರನ್ನು ಅಮಾನತು ಮಾಡುವಂತೆ ಆಗ್ರಹಿಸಿದ್ದಾರೆ. ಸಂತ್ರಸ್ತ ಮಹಾಂತೇಶ ಈ ವೇಳೆ ಕಣ್ಣೀರಿಟ್ಟರು. ಮಹಾಂತೇಶ ಹಾಗೂ ಇತರರಿಂದ ನೌಕರರು ಲಂಚ ಪಡೆದಿರುವ ಆರೋಪದ ಕುರಿತು ತನಿಖೆ ನಡೆಸಲು ಕೆಆರ್‌ಎಸ್ ಕಾರ್ಯಕರ್ತರು ಆಗ್ರಹಿಸಿದ್ದಾರೆ.ಡಾ. ಶಾಮಪ್ರಸಾದ್ ಮುಖರ್ಜಿ ಸ್ಮೃತಿ ದಿನಹಿರೇಕೆರೂರು: ಮಾಜಿ ಸಚಿವ ಬಿ.ಸಿ. ಪಾಟೀಲ ಅವರ ಪಟ್ಟಣದ ಗೃಹ ಕಚೇರಿಯಲ್ಲಿ ಬಿಜೆಪಿ ಹಿರೇಕೆರೂರಉ ಮಂಡಲದ ವತಿಯಿಂದ ಡಾ. ಶಾಮಪ್ರಸಾದ್ ಮುಖರ್ಜಿ ಅವರ ಸ್ಮೃತಿ ದಿನ ಆಚರಿಸಲಾಯಿತು.
ಮಾಜಿ ಸಚಿವ ಬಿ.ಸಿ. ಪಾಟೀಲ, ಬಿಜೆಪಿ ಮಂಡಲ ಅಧ್ಯಕ್ಷ ಸಂಜೀವಯ್ಯ ಕಬ್ಬಿಣಕಂಥಿಮಠ, ಪ್ರಧಾನ ಕಾಯದರ್ಶಿ ನಿಂಗಾಚಾರಿ ಮಾಯಾಚಾರಿ, ಪಾಲಾಕ್ಷಗೌಡ ಪಾಟೀಲ, ಗುರುಶಾಂತ ಎತ್ತಿನಹಳ್ಳಿ, ಜಗದೀಶ್ ದೊಡ್ಡಗೌಡ್ರ, ಶಿವಕುಮಾರ ತಿಪ್ಪಶೆಟ್ಟಿ, ಜಿ.ಪಿ. ಪ್ರಕಾಶ್, ಬಿ.ಟಿ. ಚಿಂದಿ, ಉಮೇಶ್ ಬಣಕಾರ, ರುದ್ರಗೌಡ ಪಾಟೀಲ, ಪರಮೇಶಪ್ಪ ಹಲಗೇರಿ, ಸಂಜೀವ್ ಹಕ್ಕಳ್ಳಿ, ಹೂವನಗೌಡ ಮಳವಳ್ಳಿ, ಜಿತೇಂದ್ರ ಅಂಗಡಿ, ವೀರಣ್ಣ ಚಿಟ್ಟೂರ, ಪುಟ್ಟಣ್ಣ, ಮಹಮ್ಮದ್ ಹುಸೇನ್ ವಡ್ಡಿನಕಟ್ಟಿ, ಹೊನ್ನಪ್ಪ ಸಾಲಿ, ಜಯಪ್ಪ ಕಾರ್ಯಕರ್ತರಿದ್ದರು.