ಮಾವು: ಅಂದಾಜು 60.75 ಕೋಟಿ ಮೌಲ್ಯದ ಬೆಳೆ ಹಾನಿ !

KannadaprabhaNewsNetwork |  
Published : Jun 21, 2025, 12:49 AM IST
20ಕೆಆರ್ ಎಂಎನ್ 2.ಜೆಪಿಜಿಸಂಗ್ರಹ ಚಿತ್ರ | Kannada Prabha

ಸಾರಾಂಶ

ಪ್ರಕೃತಿ ವಿಕೋಪದಡಿ ಮಾವು ಇಳುವರಿ ಹಾನಿಯನ್ನು ಬೆಳೆ ಹಾನಿಯೆಂದು ಪರಿಗಣಿಸಿ ಎನ್‌ಡಿಆರ್‌ಎಫ್‌ನಲ್ಲಿ ಪರಿಹಾರ ದೊರಕಿಸಿಕೊಟ್ಟು ರೈತರ ಹಿತ ಕಾಪಾಡುವಂತೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.

ಎಂ.ಅಫ್ರೋಜ್ ಖಾನ್ಕನ್ನಡಪ್ರಭ ವಾರ್ತೆ ರಾಮನಗರಹವಾಮಾನ ವೈಪರಿತ್ಯದಿಂದಾಗಿ ಈ ಬಾರಿಯೂ ಜಿಲ್ಲೆಯಲ್ಲಿ ಶೇ. 80ರಷ್ಟು ಮಾವು ಬೆಳೆ ಹಾನಿ ಜೊತೆಗೆ ಬೆಲೆಯೂ ಕುಸಿದಿದೆ. ಇದರಿಂದ ಅಂದಾಜು 60 ಕೋಟಿ 75 ಲಕ್ಷ ರುಪಾಯಿ ನಷ್ಟ ಉಂಟಾಗಿದೆ.ಪ್ರಸಕ್ತ ಸಾಲಿನಲ್ಲಿ ಹವಾಮಾನ ವೈಪರೀತ್ಯದಿಂದ ಮಾವು ಬೆಳೆಯುವ ಎಲ್ಲಾ ಜಿಲ್ಲೆಗಳಲ್ಲಿ ಫಸಲು ಒಂದೇ ಬಾರಿ ಆವಕವಾಗುತ್ತಿರುವ ಹಿನ್ನೆಲೆಯಲ್ಲಿ ಬೇರೆ ರಾಜ್ಯಗಳ ಖರೀದಿದಾರರು ಮಾವು ಖರೀದಿಗೆ ಬರುತ್ತಿಲ್ಲ. ಇದು ಧಾರಣೆ ಕುಸಿಯಲು ಪ್ರಮುಖ ಕಾರಣವಾಗಿದೆ.ಪ್ರಕೃತಿ ವಿಕೋಪದಡಿ ಮಾವು ಇಳುವರಿ ಹಾನಿಯನ್ನು ಬೆಳೆ ಹಾನಿಯೆಂದು ಪರಿಗಣಿಸಿ ಎನ್‌ಡಿಆರ್‌ಎಫ್‌ನಲ್ಲಿ ಪರಿಹಾರ ದೊರಕಿಸಿಕೊಟ್ಟು ರೈತರ ಹಿತ ಕಾಪಾಡುವಂತೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.2.68 ಲಕ್ಷ ಮೆಟ್ರಿಕ್ ಟನ್ ಮಾವು:ತೋಟಗಾರಿಕೆ ಇಲಾಖೆ ವರದಿ ಪ್ರಕಾರ ಜಿಲ್ಲೆಯಲ್ಲಿ ಕಳೆದ ವರ್ಷ 27,723 ಹೆಕ್ಟೇರ್ ಪ್ರದೇಶದ ಮಾವು ಬೆಳೆಯಲ್ಲಿ 8.90 ಲಕ್ಷ ಮೆಟ್ರಿಕ್ ಟನ್ ಸರಾಸರಿ ಇತ್ತು. ಈ ಬಾರಿ ಒಟ್ಟಾರೆ 27,640.45 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆ ಬೆಳೆಯಲಾಗುತ್ತಿದ್ದು, ಈ ವರ್ಷ ಸರಾಸರಿ 2.68 ಲಕ್ಷ ಮೆಟ್ರಿಕ್ ಟನ್ ಮಾವು ಉತ್ಪಾದನೆಯಾಗಿದೆ.ಹೂ ಬಿಡುವ ಹಾಗೂ ಕಾಯಿ ಕಚ್ಚುವ ಹಂತದಲ್ಲಿ ಬಿದ್ದಂತ ಮಳೆ, ಗಾಳಿ ಮತ್ತು ಆಲಿಕಲ್ಲು ಮಳೆಯಿಂದಾಗಿ ಇಳುವರಿ ಕುಂಠಿತವಾಗಿದೆ. ಜಿಲ್ಲೆಯಲ್ಲಿ ಸರಾಸರಿ ಇಳುವರಿ 2.68 ಟನ್ ಪ್ರತಿ ಹೆಕ್ಟೇರ್ ಆಗಿದ್ದು, ಮಾವಿನ ಕಾಯಿಯ ಗುಣಮಟ್ಟ ಕಳಪೆಯಾಗಿರುವುದರಿಂದ ಮಾವಿನ ಧಾರಣೆ ಸಹ ಕುಂಠಿತವಾಗಿದೆ.ಜಿಲ್ಲೆಯಲ್ಲಿ ಅಂದಾಜು 28 ಸಾವಿರ ಕುಟುಂಬಗಳು ಮಾವು ಬೆಳೆಯನ್ನು ನಂಬಿ ಜೀವನ ನಡೆಸುತ್ತಿವೆ. ಬಹುತೇಕ ಮಳೆಯಾಶ್ರಿತ ಪ್ರದೇಶದಲ್ಲಿ ಮಾವು ಬೆಳೆಯುತ್ತಿದ್ದು, ಮಾವು ಸಂಪೂರ್ಣ ನಷ್ಟವಾಗಿದೆ. ಜೀವನೋಪಾಯಕ್ಕಾಗಿ ಮಾವನ್ನು ಅವಲಂಬಿಸಿರುವ ಬೆಳೆಗಾರರು ಆರ್ಥಿಕ ನಷ್ಟ ಅನುಭವಿಸಿದ್ದಾರೆ. ಆದ್ದರಿಂದ ರೈತರಿಗೆ ಎನ್‌ಡಿರ್‌ಎಫ್ - ಎಸ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ಪ್ರತಿ ಹೆಕ್ಟೇರ್‌ಗೆ 22,500 ರು.ನಂತೆ ಬೆಂಬಲ ಬೆಲೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ತೋಟಗಾರಿಕೆ ಇಲಾಖೆ ಕೋರಿದೆ.ಮಾರುಕಟ್ಟೆಗೆ ಬಾರದ ಖರೀದಿದಾರರು:ಜಿಲ್ಲೆಯಲ್ಲಿ ಮಾವು ಪ್ರಮುಖ ಬೆಳೆಯಾಗಿದ್ದು, ಎಲ್ಲ ತಾಲೂಕುಗಳಲ್ಲಿಯೂ ಮಾವಿನ ಬೆಳೆಯನ್ನು ರೈತರು ಹೆಚ್ಚಾಗಿ ಬೆಳೆಯುತ್ತಾರೆ. ರಾಮನಗರ, ಚನ್ನಪಟ್ಟಣ ಹಾಗೂ ಕನಕಪುರ ತಾಲೂಕಿನಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಯು ಪ್ರಮುಖ ಮಾರುಕಟ್ಟೆಯಾಗಿದೆ. ಅಲ್ಲದೆ, ರೈತರು ಸ್ಥಳೀಯವಾಗಿ ಖಾಸಗಿ ಮಂಡಿಗಳಲ್ಲಿಯೂ ಮಾವು ಮಾರಾಟ ಮಾಡುತ್ತಾರೆ.ಈ ಮಾರುಕಟ್ಟೆಗಳಿಗೆ ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಹಾಗೂ ಇತರೆ ಉತ್ತರ ಭಾರತದ ವ್ಯಾಪಾರಸ್ಥರೇ ಪ್ರಮುಖ ಖರೀದಿದಾರರಾಗಿದ್ದಾರೆ. ಎಲ್ಲ ಜಿಲ್ಲೆಗಳ ಮಾವು ಒಂದೇ ಬಾರಿಗೆ ಆವಕವಾದ ಹಿನ್ನೆಲೆಯಲ್ಲಿ ಖರೀದಿದಾರರು ಇಲ್ಲಿಗೆ ಬಾರದ ಕಾರಣ ಧಾರಣೆ ಕುಸಿದಿದೆ.ಜಿಲ್ಲೆಯಲ್ಲಿ ಪ್ರಮುಖವಾಗಿ ಶೇ. 80ರಷ್ಟು ಬಾದಾಮಿ ತಳಿ ಬೆಳೆಯಾಗಿದೆ. ಹೊರ ರಾಜ್ಯವಾದ ಆಂಧ್ರ ಪ್ರದೇಶದಲ್ಲಿ ಮಾವು ಸಂಸ್ಕರಣಾ ಘಟಕಗಳಿಗೆ ರಾಜ್ಯದ ಮಾವಿನ ಹಣ್ಣನ್ನು ನಿರ್ಬಂಧ ಹೇರಿದ ಹಿನ್ನೆಲೆಯಲ್ಲಿ ಮಾವಿನ ಬೆಳೆಗೆ ಬೆಲೆ ಕುಸಿತ ಕಂಡು ಬಂದಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕನ್ನಡಪ್ರಭಕ್ಕೆ ಪ್ರತಿಕ್ರಿಯೆ ನೀಡಿದರು....ಬಾಕ್ಸ್ ....

ರೈತರ ಆಗ್ರಹವೇ ಬೇರೆ

ಜಿಲ್ಲಾಡಳಿತ ಎಪಿಎಂಸಿ ಮಾರುಕಟ್ಟೆಗಳಿಗೆ ಆವಕವಾಗಿರುವ ಮಾವಿನ ಪ್ರಮಾಣದ ಮೇಲೆ ಪ್ರತಿ ಹೆಕ್ಟೇರ್ ಗೆ 2250 ರುಪಾಯಿ ಬೆಂಬಲ ಬೆಲೆ ನೀಡಲು ವರದಿ ನೀಡಿದ್ದರೆ, ರೈತರ ಆಗ್ರಹವೇ ಬೇರೆ ಇದೆ. ಪ್ರತಿ ಹೆಕ್ಟೇರ್‌ಗೆ 25 ಸಾವಿರ ರು. ಪರಿಹಾರ ನೀಡಬೇಕು. ಇದರಿಂದ ನಷ್ಟದ ಕನಿಷ್ಟ ಪ್ರಮಾಣವನ್ನು ಭರಿಸಿದಂತೆ ಆಗುತ್ತದೆ ಎಂದು ಮಾವು ಬೆಳೆಗಾರರು ರಾಜ್ಯ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದಾರೆ.....ಕೋಟ್ ...

ಈ ಬಾರಿ ಜಿಲ್ಲೆಯಲ್ಲಿ ಶೇ. 80ರಷ್ಟು ಮಾವು ಬೆಳೆ ನೆಲ ಕಚ್ಚಿದರೆ, ಶೇ. 20ರಷ್ಟು ಮಾವಿನ ಬೆಲೆಯೂ ಕುಸಿದು ರೈತರಿಗೆ ನಷ್ಟ ಉಂಟಾಗಿದೆ. ಈಗಾಗಲೇ ಪ್ರತಿ ಹೆಕ್ಟೇರ್‌ಗೆ 22,500 ರುಪಾಯಿ ಬೆಂಬಲ ಬೆಲೆ ನೀಡುವಂತೆ ಕೋರಿ ಜಿಲ್ಲಾಡಳಿತ ಮೂಲಕ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ.- ಮುನೇಗೌಡ, ಉಪನಿರ್ದೇಶಕ, ತೋಟಗಾರಿಕೆ ಇಲಾಖೆ ರಾಮನಗರ.

----....ಬಾಕ್ಸ್ ....ಜಿಲ್ಲೆಯಲ್ಲಿ ಮಾವಿನ ಬೆಳೆಯ ವಿಸ್ತೀರ್ಣ, ಉತ್ಪಾದನೆ ವಿವರತಾಲೂಕುವಿಸ್ತೀರ್ಣ (ಹೆಕ್ಟೇರ್)ಉತ್ಪನ್ನ (ಟನ್)ಸರಾಸರಿ ಇಳುವರಿ (ಟನ್ / ಹೆಕ್ಟೇರ್)ರಾಮನಗರ10534.3529773.82.82ಚನ್ನಪಟ್ಟಣ4896.9812571.22.56ಮಾಗಡಿ6696.1520355.03.03ಕನಕಪುರ5512.911335.52.05ಒಟ್ಟು27640.4574035.52.6820ಕೆಆರ್ ಎಂಎನ್ 2.ಜೆಪಿಜಿ

ಸಂಗ್ರಹ ಚಿತ್ರ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ