ಮೇಲುಕೋಟೆ ಗ್ರಾಪಂ ಅಧ್ಯಕ್ಷರಾಗಿ ಮಣಿ, ಉಪಾಧ್ಯಕ್ಷರಾಗಿ ಕುಮಾರ್ ಆಯ್ಕೆ

KannadaprabhaNewsNetwork |  
Published : Jul 16, 2024, 12:32 AM IST
15ಕೆಎಂಎನ್ ಡಿ15 | Kannada Prabha

ಸಾರಾಂಶ

ಹಿಂದಿನ ಅಧ್ಯಕ್ಷ ಸೋಮಶೇಖರ್ ಮತ್ತು ಉಪಾಧ್ಯಕ್ಷ ಎನ್.ತಿರುಮಲೈ ಅವಧಿ ಮುಕ್ತಾಯವಾಗಿ ತೆರವಾದ ಸ್ಥಾನಗಳಿಗೆ ಸೋಮವಾರ ಚುನಾವಣೆ ನಡೆದು 9 ಮಂದಿ ಸದಸ್ಯ ಬಲದ ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ಮಣಿ ಮುರುಗನ್, ರೈತಸಂಘ ಬೆಂಬಲಿತ ಭಾಗ್ಯಮ್ಮ ಸ್ಪರ್ಧಿಸಿದ್ದರು.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಮೇಲುಕೋಟೆ ಗ್ರಾಪಂ ನೂತನ ಅಧ್ಯಕ್ಷರಾಗಿ ಜೆಡಿಎಸ್‌ ಬೆಂಬಲಿತ ಮಣಿ ಮುರುಗನ್ ಬಹುಮತದಿಂದ ಆಯ್ಕೆಯಾದರೆ, ಉಪಾಧ್ಯಕ್ಷರಾಗಿ ಜಿ.ಕೆ.ಕುಮಾರ್ ಅವಿರೋಧವಾಗಿ ಆಯ್ಕೆಯಾದರು.

ಹಿಂದಿನ ಅಧ್ಯಕ್ಷ ಸೋಮಶೇಖರ್ ಮತ್ತು ಉಪಾಧ್ಯಕ್ಷ ಎನ್.ತಿರುಮಲೈ ಅವಧಿ ಮುಕ್ತಾಯವಾಗಿ ತೆರವಾದ ಸ್ಥಾನಗಳಿಗೆ ಸೋಮವಾರ ಚುನಾವಣೆ ನಡೆದು 9 ಮಂದಿ ಸದಸ್ಯ ಬಲದ ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ಮಣಿ ಮುರುಗನ್, ರೈತಸಂಘ ಬೆಂಬಲಿತ ಭಾಗ್ಯಮ್ಮ ಸ್ಪರ್ಧಿಸಿದ್ದರು.

ಮಣಿ ಮುರುಗನ್ 7 ಮತ ಪಡೆದರೆ, ಭಾಗ್ಯಮ್ಮ 2 ಮತ ಪಡೆದರು. ನೂತನ ಅಧ್ಯಕ್ಷರಾಗಿ ಎರಡನೇ ಬಾರಿ ಮಣಿಮುರುಗನ್ ಬಹುಮತದಿಂದ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ಜಿ.ಕೆ.ಕುಮಾರ್ ಹೊರತುಪಡಿಸಿ ಯಾರೂ ನಾಮಪತ್ರಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯಾದರು.

ಪಾಂಡವಪುರ ತಾಲೂಕು ನರೇಗಾ ಸಹಾಯಕ ನಿರ್ದೇಶಕ ಸುರೇಂದ್ರ ಚುನಾವಣಾಧಿಕಾರಿಯಾಗಿ ಭಾಗವಹಿಸಿದ್ದರು. ಅಧ್ಯಕ್ಷ ಉಪಾಧ್ಯಕ್ಷ ಆಕಾಂಕ್ಷಿಗಳು ಹಾಗೂ ಸದಸ್ಯರಾದ ವಾದ್ಯಾರ್ ತಿರುಮಲೈ, ಸೋಮಶೇಖರ್, ಹೊಸಹಳ್ಳಿ ಜಯರಾಮೇಗೌಡ, ಲಕ್ಷ್ಮಮ್ಮ, ಭವಾನಿ, ರಾಜೇಶ್ವರಿ ಚುನಾವಣೆಯಲ್ಲಿ ಪಾಲ್ಗೊಂಡು ಮತದಾನ ಮಾಡಿದರು.

ಮಾಜಿ ಸಚಿವ ಸಿಎಸ್‌ಪುಟ್ಟರಾಜು ಮಾರ್ಗದರ್ಶನದಲ್ಲಿ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಜೆಡಿಎಸ್ ಬೆಂಬಲಿತ ಸದಸ್ಯರು ಶಾಂತಿಯುತ ಚುನಾವಣೆ ನಡೆಯಲು ಸಹಕರಿಸಿದ್ದರು. ನೂತನ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರನ್ನು ಸಿ.ಎಸ್. ಪುಟ್ಟರಾಜು ಅಭಿನಂದಿಸಿದರು.

ಮೇಲುಕೋಟೆಯ ಸರ್ವಾಂಗೀಣ ಅಭಿವೃದ್ಧಿಗೆ ನೂತನ ವರಿಷ್ಠರು ಹಾಗೂ ಸದಸ್ಯರು ಶ್ರಮಿಸಬೇಕು. ಜನಪರವಾಗಿ ಆಡಳಿತ ನಡೆಸಬೇಕು ಎಂದರು.

ಈ ವೇಳೆ ಜೆಡಿಎಸ್ ತಾಲೂಕು ಅಧ್ಯಕ್ಷ ಬೆಳ್ಳಾಳೆ ಮಲ್ಲೇಶ್, ಜಿಪಂ ಮಾಜಿ ಸದಸ್ಯ ಎಚ್.ಮಂಜುನಾಥ್, ಮುಖಂಡರಾದ ಜಕ್ಕನಹಳ್ಳಿ ಶಂಕರ್, ಶಂಬೂನಹಳ್ಳಿ ಆನಂದ್ ದೇವರಹಳ್ಳಿ ತಮ್ಮಣ್ಣಗೌಡ, ಬಳಿಘಟ್ಟ ಗ್ರಾಪಂ ಮಾಜಿ ಅಧ್ಯಕ್ಷ ವಿಜಯಕುಮಾರ್, ಮೇಲುಕೋಟೆ ಜೆಡಿಎಸ್ ಮುಖಂಡರು ಭಾಗಿಯಾಗಿದ್ದರು.

ಜುಲೈ 20 ರಂದು ಉಚಿತ ಕಾರ್ಯಾಗಾರಮಂಡ್ಯ: ಜಿಲ್ಲಾ ಕೌಶಲ್ಯಾಭಿವೃದ್ಧಿ ನಿಗಮ, ಪದವಿ ಪೂರ್ವ ಶಿಕ್ಷಣ ಇಲಾಖೆ, ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜು ಇವರ ಸಹಯೋಗದಲ್ಲಿ 2024 ನೇ ಸಾಲಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಶೇ.70% ಕ್ಕಿಂತ ಹೆಚ್ಚು ಅಂಕಗಳಿಸಿರುವ ವಾಣಿಜ್ಯ, ಕಲಾ, ವಿಜ್ಞಾನ ವಿದ್ಯಾರ್ಥಿಗಳಿಗೆ ಭಾರತ ದೇಶದ ದೊಡ್ಡ 3ನೇ ಸಾಪ್ಟ್ ವೇ ಕಂಪನಿಯಾದ HCL Tech ಸ್ಟೈಫೇಂಡ್ ಸಹಿತ ತರಬೇತಿ, ಖಾಯಂ ಉದ್ಯೋಗದ ಜೊತೆಗೆ HCL Tech ನಿಂದ ಹಣಕಾಸಿನ ಸಹಾಯದೊಂದಿಗೆ ಉನ್ನತ (ಪದವಿ) ಶಿಕ್ಷಣ ಪಡೆಯಲು ಜುಲೈ 20 ರಂದು ಬೆಳಗ್ಗೆ 10 ಗಂಟೆಗೆ ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜು ಕಲ್ಲು ಕಟ್ಟಡದಲ್ಲಿ ಉಚಿತ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತ ವಿದ್ಯಾರ್ಥಿಗಳು ಸ್ಮಾಟ್ ಫೋನ್, ಎಸ್ಸೆಸ್ಸೆಲ್ಸಿ ಮಾರ್ಕ್ಸ್ ಕಾರ್ಡ್ (ಫೋಟೋ), ಪಿಯುಸಿ ಮಾರ್ಕ್ಸ್ ಕಾರ್ಡ್ (ಫೋಟೋ) ಮತ್ತು ಆಧಾರ್ ಕಾರ್ಡ್ ನೊಂದಿಗೆ ಕಾರ್ಯಗಾರಕ್ಕೆ ಹಾಜರಾಗುವುದು. ಇಂದಿನಿಂದಲೇ https://bit.ly/TechBeeKSDC ವೆಬ್ ಸೈಟ್ ನಲ್ಲಿ ನೊಂದಣಿಗೆ ಅವಕಾಶ ಕಲ್ಫಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ-8722790340 ಹಾಗೂ 9845454471 ಅನ್ನು ಸಂಪರ್ಕಿಸಬಹುದು ಎಂದು ಮಂಡ್ಯ ಜಿಲ್ಲಾ ಕೌಶಲ್ಯಾಭಿವೃದ್ಧಿ ಕಚೇರಿ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಲವು ಜಿಲ್ಲೆಗಳಲ್ಲಿ ಶೀತಗಾಳಿ ತಾಪಮಾನ 5-7 ಡಿಗ್ರಿ ಇಳಿಕೆ
‘ಬಾಡಿಗೆ ತಾಯ್ತನ’ದಿಂದ ಮಗು : ವೃದ್ಧ ದಂಪತಿಯಿಂದ ಕೋರ್ಟ್‌ ಮೊರೆ