ಕನ್ನಡಪ್ರಭ ವಾರ್ತೆ ಸಾಗರ
ಸಾಗರ ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದ ನೇತೃತ್ವದಲ್ಲಿ ಹೊಸಬಾಳೆ ಎಚ್.ಎಸ್.ಮಂಜಪ್ಪ ಅಭಿನಂದನಾ ಸಮಿತಿ ಪಟ್ಟಣದ ಎಲ್.ಬಿ.ಕಾಲೇಜಿನ ದೇವರಾಜ ಅರಸು ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೊಸಬಾಳೆ ಕುಟುಂಬ, ಸಮಾಜದ ಹಿತಕ್ಕಾಗಿಯೇ ಬದುಕಬೇಕು ಎನ್ನುವ ಏಕೈಕ ಧ್ಯೇಯವನ್ನು ಹಲವು ದಶಕದಿಂದ ಸಮಾಜಕ್ಕೆ ತೋರಿಸಿಕೊಟ್ಟಿದೆ. ಇದಕ್ಕೆ ದತ್ತಾತ್ರೆಯ ಹೊಸಬಾಳೆ ಅವರೇ ಉದಾಹರಣೆ ಎಂದು ಹೇಳಿದರು.
ಮಂಜಪ್ಪನವರದ್ದು ತಪಸ್ಸಿನ ರೀತಿಯ ಜೀವನ. ಪ್ರಾಮಾಣಿಕ ಜೀವನ ಅಳವಡಿಸಿಕೊಳ್ಳಬೇಕು ಎನ್ನುವ ಸಂಘದ ತತ್ವಾದರ್ಶವನ್ನು ರೂಢಿಸಿಕೊಂಡವರು. ಎಲ್ಲರನ್ನೂ ಆತ್ಮೀಯವಾಗಿ ಕಾಣುವ ಮಂಜಪ್ಪನವರು ನಿಸ್ಪೃಹ ಜೀವನ ನಡೆಸಿದ್ದಾರೆ. ಅದನ್ನು ಬೇರೆಯವರಿಗೂ ತೋರಿಸಿಕೊಟ್ಟಿದ್ದಾರೆ. ರಾಜ್ಯದಿಂದ ದೆಹಲಿಗೆ ಬರುವ ಎಲ್ಲರನ್ನೂ ಭೇಟಿ ಮಾಡುತ್ತೇನೆ. ಆದರೆ ಒಮ್ಮೆಯೂ ಮಂಜಪ್ಪನವರು ನಮಗೆ ಏನಾದರೂ ಮಾಡಿಕೊಡಿ ಅಂತ ಕೇಳಿಲ್ಲ. ನಾನು ೨೨ ವರ್ಷ ಸಂಸದನಾಗಿದ್ದಾಗಿನಿಂದಲೂ ಅವರೊಂದಿಗೆ ಒಡನಾಟ ಹೊಂದಿದ್ದು, ಅವರ ಈ ನಡವಳಿಕೆಯನ್ನು ಗಮನಿಸಿದ್ದೇನೆ ಎಂದು ಹೇಳಿದರು.ಮಂಜಪ್ಪನವರಿಗೂ ಅಡಕೆ ಬೆಳೆಗಾರರಿಗೂ ಇರುವ ಸಂಬಂಧ ಇಂದು ಗೋಚರವಾಗಿದೆ. ಅಡಕೆ ಬೆಳೆಗಾರರಿಗೆ ಸಂಕಷ್ಟ ಬಂದಾಗಲ್ಲೆಲ್ಲ ಮಂಜಪ್ಪನವರು ದೆಹಲಿವರೆಗೆ ಬಂದು ಸಂಕಷ್ಟ ಪರಿಹಾರಕ್ಕೆ ಶ್ರಮಿಸುತ್ತಿದ್ದದನ್ನು ನೋಡಿದ್ದೇನೆ.
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಮಲೆನಾಡು ಭಾಗದ ಅಡಕೆ ಬೆಳೆಗಾರರ ಹಿತರಕ್ಷಣೆಗಾಗಿ, ಸಹಕಾರಿ ರಂಗದ ಏಳಿಗೆಗಾಗಿ ಹಾಗೂ ಸಾರ್ವಜನಿಕ ಜೀವನದಲ್ಲಿ ದಶಕಗಳ ಕಾಲ ಎಚ್.ಎಸ್. ಮಂಜಪ್ಪನವರು ಸಲ್ಲಿಸಿರುವ ನಿಸ್ವಾರ್ಥ ಸೇವೆ ಶ್ಲಾಘನೀಯ. ಅವರ ಈ ಸುದೀರ್ಘ ಸಾಧನೆ ಹಾಗೂ ಸಮಾಜಮುಖಿ ಚಿಂತನೆಗಳನ್ನು ಗೌರವಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿದ್ದ ಈ ಸಮಾರಂಭವು ಅತ್ಯಂತ ಅರ್ಥಪೂರ್ಣ ಎಂದರು.
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಸಚಿವ, ಹಾಲಿ ಶಾಸಕ ಆರಗ ಜ್ಞಾನೇಂದ್ರ, ಎಚ್.ಹಾಲಪ್ಪ, ಪರಿಷತ್ ಸದಸ್ಯ ಡಿ ಎಸ್ ಅರುಣ್, ಕೇಂದ್ರ ಸಂಬಾರು ಮಂಡಳಿ ಸದಸ್ಯ ಪ್ರಸನ್ನ ಕೆರೆಕೈ, ಎಚ್ ಎಸ್ ಮಂಜಪ್ಪನವರ ಅಭಿನಂದನಾ ಸಮಿತಿ ಅಧ್ಯಕ್ಷ ಕೆ.ಎಂ.ಸೂರ್ಯನಾರಾಯಣ ಖಂಡಿಕಾ, ಪ್ರಾಂತ್ಯದ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ವಿ ಎಸ್ ರಾಮಚಂದ್ರ ಭಟ್, ಬಿ.ಎ.ಇಂದೂದರ ಬೇಸೂರು ಸೇರಿದಂತೆ ರೈತ ಮುಖಂಡರು, ರೈತ ಬಾಂಧವರು ಉಪಸ್ಥಿತರಿದ್ದರು.