ಜೀವಿಸಲು ಕಲೆಯನ್ನೇ ಉಸಿರಾಗಿಸಿಕೊಂಡ ಮಂಜು ಮಟ್ಟನವಿಲೆ

KannadaprabhaNewsNetwork |  
Published : May 27, 2026, 02:15 AM IST
25ಎಚ್ಎಸ್ಎನ್6ಎ :  | Kannada Prabha

ಸಾರಾಂಶ

ಗೀತೆಯ ಪ್ರಶಸ್ತಿಯಿಂದ ಜಾನಪದ ಗಾಯನ ಕಲೆ ಬಗ್ಗೆ ಆಸಕ್ತಿ ಮೂಡಿಸಿತು. ಗೂರಮಾರನಹಳ್ಳಿ ಮೊರಾರ್ಜಿ ದೇಸಾಯಿ ಶಾಲೆಯ ವಿದ್ಯಾರ್ಥಿಗಳಿಗೆ ಮಾರಿ ಕುಣಿತ ಜಾನಪದ ನೃತ್ಯ ಸಂಯೋಜನೆ ವರ್ಣಾಲಂಕಾರ, ವಸ್ತ್ರಾಲಂಕಾರ ತಯಾರಿಕೆ ಮಾಡಿದ್ದರು. ಈ ಜಾನಪದ ನೃತ್ಯ ಹಾಸನ ಜಿಲ್ಲೆಯಿಂದ ರಾಜ್ಯಮಟ್ಟಕ್ಕೆ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆಯಿತು. ೨೦೧೪ನೇ ಸಾಲಿನಲ್ಲಿ ನಡೆದ ಸ್ಪರ್ಧೆ ಹಾಗೆ ಚನ್ನರಾಯಪಟ್ಟಣದ ಜೈ ಜಾನಪದ ಮಹಿಳಾ ಕಲಾವಿದರಿಗೆ ಪ್ರಥಮ ಬಾರಿ ಅನಾವರಣವಾಗಿದೆ. ಕುರುಕ್ಷೇತ್ರ ಪೌರಾಣಿಕ ನಾಟಕದ ಅಭಿಮನ್ಯು ಪಾತ್ರದಲ್ಲಿ ೨೦ ಬಾರಿ ಅಭಿನಯಿಸಿದ್ದ ಕಲಾವಿದ ಮಂಜು ಅವರು ಭೀಷ್ಮನಾಗಿ ೧೨ ಬಾರಿ ಬಣ್ಣ ಹಚ್ಚಿದ್ದಾರೆ.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಜನಪದ ಗಾಯಕರಾಗಿ ತಾಲೂಕಿನ ನೂರಾರು ಜನರಿಗೆ ರಂಗಕಲೆಯನ್ನು ಕಲಿಸಿಕೊಟ್ಟ ರಂಗ ಕಲಾವಿದ ಮಟ್ಟನವಿಲೆ ಗ್ರಾಮದ ವಾಸಿ ಮಂಜು ಮಟ್ಟನವಿಲೆ ಅವರು ತಮ್ಮ ಕಲೆಯನ್ನೇ ಜೀವನವನ್ನಾಗಿ ನಡೆಸಿಕೊಂಡು ಎಲೆಮರೆ ಕಾಯಿಯಂತೆ ತಮ್ಮ ಕಲಾ ಸೇವೆಯನ್ನು ಮುಂದುವರಿಸುತ್ತಾ ಬಂದಿದ್ದಾರೆ. ಮಂಜು ಅವರ ತಂದೆ ಮರಿಯಣ್ಣ ತಾಯಿ ನಂಜಮ್ಮ ಆಗಿದ್ದು, ಅತೀ ಕಡು ಬಡತನದ ಕುಟುಂಬದಲ್ಲಿ ಬೆಳೆದ ಅವರು ತಮ್ಮ ವಿದ್ಯಾಭ್ಯಾಸವನ್ನು ಮಾತ್ರ ಮರೆಯದೆ ಬಿ. ಎ. ಜಾನಪದ ಡಿಪ್ಲೋಮೋದಲ್ಲಿ ಉತ್ತೀರ್ಣರಾಗಿದ್ದು ಜೊತೆಗೆ ಸುಗಮ ಸಂಗೀತ ಅಭ್ಯಾಸ ಮಾಡಿದ್ದಾರೆ. ೬ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿರುವಾಗಲೇ ಹುಟ್ಟೂರಿನಲ್ಲಿ ತಂದೆ ಮರಿಯಣ್ಣ ಅವರು ‘ಕೃಷ್ಣಲೀಲೆ’ ನಾಟಕದಲ್ಲಿ ರಾಧೆ ಪಾತ್ರದಲ್ಲಿ ಅಭಿನಯಿಸುತ್ತಿದ್ದರು. ಈ ನಾಟಕದಿಂದ ಪ್ರೇರಣೆಯಾಗಿ ಮಂಜು ಅವರು ಪ್ರಥಮ ಬಾರಿಗೆ ವಾಲ ಮಕರಂದ ಪಾತ್ರವನ್ನು ನಿಭಾಯಿಸಿ ಪೌರಾಣಿಕ ನಾಟಕಕ್ಕೆ ಪಾದಾರ್ಪಣೆ ಮಾಡಿದರು. ಹಾಗೇ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಲಾವಿದರು, ಕುರುಕ್ಷೇತ್ರ ಪೌರಾಣಿಕ ನಾಟಕವನ್ನು ಅಭಿನಯಿಸುತ್ತಿದ್ದರು. ಆ ನಾಟಕಗಳನ್ನು ವೀಕ್ಷಣೆ ಮಾಡಲು ಹೋಗುತ್ತಿದ್ದ ಅವರು ಎಂಟನೇ ತರಗತಿ ಓದುತ್ತಿದ್ದಾಗ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಜಾನಪದ ಗೀತೆ ಸ್ಪರ್ಧೆಯಲ್ಲಿ ‘ಚೆಲ್ಲಿದರು ಮಲ್ಲಿಗೆಯ’ ಹಾಡಿಗೆ ಪ್ರಥಮ ಬಹುಮಾನ ಪಡೆಯುವ ಮೂಲಕ ವೇದಿಕೆ ಹಂಚಿಕೊಂಡರು.ಗೀತೆಯ ಪ್ರಶಸ್ತಿಯಿಂದ ಜಾನಪದ ಗಾಯನ ಕಲೆ ಬಗ್ಗೆ ಆಸಕ್ತಿ ಮೂಡಿಸಿತು. ಗೂರಮಾರನಹಳ್ಳಿ ಮೊರಾರ್ಜಿ ದೇಸಾಯಿ ಶಾಲೆಯ ವಿದ್ಯಾರ್ಥಿಗಳಿಗೆ ಮಾರಿ ಕುಣಿತ ಜಾನಪದ ನೃತ್ಯ ಸಂಯೋಜನೆ ವರ್ಣಾಲಂಕಾರ, ವಸ್ತ್ರಾಲಂಕಾರ ತಯಾರಿಕೆ ಮಾಡಿದ್ದರು. ಈ ಜಾನಪದ ನೃತ್ಯ ಹಾಸನ ಜಿಲ್ಲೆಯಿಂದ ರಾಜ್ಯಮಟ್ಟಕ್ಕೆ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆಯಿತು. ೨೦೧೪ನೇ ಸಾಲಿನಲ್ಲಿ ನಡೆದ ಸ್ಪರ್ಧೆ ಹಾಗೆ ಚನ್ನರಾಯಪಟ್ಟಣದ ಜೈ ಜಾನಪದ ಮಹಿಳಾ ಕಲಾವಿದರಿಗೆ ಪ್ರಥಮ ಬಾರಿ ಅನಾವರಣವಾಗಿದೆ. ಕುರುಕ್ಷೇತ್ರ ಪೌರಾಣಿಕ ನಾಟಕದ ಅಭಿಮನ್ಯು ಪಾತ್ರದಲ್ಲಿ ೨೦ ಬಾರಿ ಅಭಿನಯಿಸಿದ್ದ ಕಲಾವಿದ ಮಂಜು ಅವರು ಭೀಷ್ಮನಾಗಿ ೧೨ ಬಾರಿ, ‘ರಕ್ತರಾತ್ರಿ’ ನಾಟಕದಲ್ಲಿ ದುರ್ಜಯನ ಪಾತ್ರ, ದಕ್ಷಯಜ್ಞದಲ್ಲಿ ವಸುಂಧರನ ಪಾತ್ರ ನಿರ್ವಹಿಸಿ ಕಲೆಯಲ್ಲಿ ಪ್ರೇಕ್ಷಕರಿಂದ ಸೈ ಎನಿಸಿಕೊಂಡಿದ್ದು ಹವ್ಯಾಸಿ ನಾಟಕಗಳು ‘ಸಂಭವಾಮಿ ಯುಗೇ ಯುಗೇ, ಅಶ್ವಪರ್ವ, ಕಿಂದರ ಜೋಗಿ’ಯಂತಹ ಪಾತ್ರಗಳನ್ನು ಮಾಡಿದ್ದು ಇವರು ನಾಟಕಗಳಲ್ಲಿ ಬಣ್ಣಹಚ್ಚುತ್ತಾರೆ ಎಂದರೆ ಅವರ ನಾಟಕವನ್ನು ನೋಡುವ ಒಂದು ವರ್ಗವೇ ವೇದಿಕೆಯ ಮುಂಭಾಗ ಜಮಾಯಿಸುತ್ತಾರೆ.ಇವರ ಕಲಾ ಸಾಧನೆಗೆ ಜಿಲ್ಲಾ ರಾಜ್ಯೋತ್ಸವ ಮತ್ತು ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದ್ದು, ಡೊಳ್ಳು ಕುಣಿತ ತರಬೇತಿಯನ್ನು ಸಹ ನೀಡುತ್ತಾರೆ. ಹಲವು ಸಂಘಸಂಸ್ಥೆಗಳಿಂದ ರಂಗ ಕಲಾರತ್ನ, ಕರುನಾಡ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಸುಗಮ ಗಾನಕೋಗಿಲೆ, ಸಂಗೀತ ರತ್ನ, ಕಲಾ ಸಂಗೀತ, ಜಾನಪದ ತರಬೇತಿ ನೀಡುತ್ತಾ ಸೇವಾ ರತ್ನ ಪ್ರಶಸ್ತಿಗಳು ಲಭಿಸಿವೆ.ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ವಿವಿಧ ಪ್ರಕಾರದಲ್ಲಿ ಗೊರವ ನೃತ್ಯ, ಕಾಡುಜನರ ನೃತ್ಯ ತರಬೇತಿ ನೀಡಿ ಆ ಮಕ್ಕಳ ಪ್ರತಿಭೆ ಹಲವು ವೇದಿಕೆಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸನ್ಮಾನಿಸಿದೆ. ೨೦೧೯ರಲ್ಲಿ ಸುರಾಗ ಟ್ರಸ್ಟ್ ಸಂಸ್ಥೆ ಮಾಡಿ ಇದರ ಅಡ್ಡವಾಗಿ ಶಾಲಾ ಕಾಲೇಜುಗಳಲ್ಲಿ ಜಾನಪದ ನೃತ್ಯ, ಜಾನಪದ ಗೀತೆ, ಸುಗಮ ಸಂಗೀತ, ಶಿವಗೀತೆ, ಮಹಿಳೆಯರಿಗೆ ಸೋಬಾನೆ ಪದಗಳ ತರಬೇತಿಯನ್ನು ನೀಡುತ್ತಾ ಬಂದಿರುವ ಒಬ್ಬ ಅದ್ಭುತ ಕಲಾವಿದನಿಗೆ ಸರ್ಕಾರದ ವತಿಯಿಂದ ರಾಜ್ಯಮಟ್ಟದ ಗೌರವ ಹಾಗೂ ಸನ್ಮಾನಗಳು ದೊರೆಯಲಿ ಎಂಬುದು ತಾಲೂಕು ಕಲಾವಿದರ ಆಶಯವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರತ್ಯೇಕ ಹೋರಾಟ ವೇದಿಕೆಯಲ್ಲಿ ಕ್ರೆಡಿಟ್‌ ವಾರ್‌
ಷರತ್ತುಗಳೊಂದಿಗೆ ಪ್ರತ್ಯೇಕ ಪಾಲಿಕೆಗೆ ರಾಜ್ಯಪಾಲರ ಮುದ್ರೆ