- ಲಿಂ. ಸಿದ್ಧಲಿಂಗ ಜಗದ್ಗುರು ಪುಣ್ಯಾರಾಧನೆ ಧರ್ಮ ಸಮಾರಂಭದಲ್ಲಿ ಶಾಸಕ ಹರೀಶ್ - - - ಕನ್ನಡಪ್ರಭ ವಾರ್ತೆ ಹರಿಹರ ಭಾರತದ ದೇಶದ ಸಂಸ್ಕೃತಿ ಮತ್ತು ಪರಂಪರೆಯಿಂದ ಮಾತ್ರ ಮಾನವ ಕುಲಕ್ಕೆ ಶಕ್ತಿ ತುಂಬಲು ಸಾಧ್ಯ ಎನ್ನುವುದನ್ನು ಇಂದು ಇಡೀ ಜಗತ್ತೇ ಒಪ್ಪಿಕೊಳ್ಳುತ್ತಿದೆ ಎಂದು ಶಾಸಕ ಬಿ.ಪಿ.ಹರೀಶ್ ಅಭಿಪ್ರಾಯಪಟ್ಟರು.
ಭಾರತವನ್ನು ಹಾವಾಡಿಗರ ಮತ್ತು ಭಿಕ್ಷುಕರ ದೇಶವೆಂದು ಆನೇಕ ಮುಂದುವರಿದ ದೇಶಗಳು ವ್ಯಾಖ್ಯಾನ ಮಾತನಾಡುತ್ತಿದ್ದ ಕಾಲವೊಂದಿತ್ತು. ಆದರೆ, ಇಂದು ಅದೇ ದೇಶದವರು ಹಿಂದೂ ಧರ್ಮ ಒಪ್ಪಿ ಆಚರಣೆ ಮಾಡುತ್ತಿದ್ದಾರೆ. ಇದು ನಮ್ಮ ಧರ್ಮದ ಶಕ್ತಿ ಮತ್ತೊಮ್ಮೆ ಭಾರತ ವಿಶ್ವಗುರುವಾಗುವ ಕಾಲ ದೂರವಿಲ್ಲ ಎಂದರು.
ಕವಿರಾಜ ಗುರೂಜಿಯವರ ತಪಸ್ಸಿನ ಶಕ್ತಿಯ ಪರಿಣಾಮ ಇಂದು ಹರಿಹರ ನಗರಕ್ಕೆ ದೇಶದ ವಿವಿಧ ಭಾಗಗಳಿದ ಭಕ್ತರು ಆಗಮಿಸಿರುವುದೇ ಸಾಕ್ಷಿ ಬರುವಂತಹ ದಿನಗಳಲ್ಲಿ ಮಹಾತಪಸ್ವಿ ಫೌಂಡೇಷನ್ ವತಿಯಿಂದ ದೇಶದ ಧರ್ಮ ಮತ್ತು ಸಂಸ್ಕೃತಿ ಉಳಿಸುವಂತಹ ಕಾರ್ಯಗಳು ಹೆಚ್ಚಾಗಲಿ ಎಂದು ಹಾರೈಸಿದರು.ನಿವೃತ್ತ ಪ್ರಾಚಾರ್ಯರಾದ ಶಕುಂತಲಮ್ಮ ಗುರುಸಿದ್ದಯ್ಯ ಮಾತನಾಡಿ, ಭವಿಷ್ಯದ ಭಾರತ ನಿರ್ಮಾಣಕ್ಕಾಗಿ ಇಂದಿನ ಯುವಜನತೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ನಮ್ಮ ಸಂಸ್ಕೃತಿಯ ರಕ್ಷಣೆಗೆ ಮುಂದಾಗಬೇಕು ಎಂದರು.
ಅವದೂತ ಕವಿರಾಜ ಗುರೂಜಿ ಮಾತನಾಡಿ, ಸೇವೆಯೇ ಧರ್ಮದ ಮೂಲ ಎನ್ನುವ ದೃಷ್ಟಿಯಲ್ಲಿ ನಮ್ಮ ಸಂಸ್ಥೆ 9 ವರ್ಷಗಳಿಂದ ರಾಜ್ಯ ಸೇರಿದಂತೆ ದೇಶ ಹಾಗೂ ವಿದೇಶಗಳಲ್ಲಿ ಶಾಖೆಗಳನ್ನು ತೆರೆದು ಧಾರ್ಮಿಕ ಕಾರ್ಯಕ್ರಗಳನ್ನು ಮಾಡುತ್ತಿದೆ ಎಂದು ತಿಳಿಸಿದರು.ವಿಶೇಷ ಉಪನ್ಯಾಸ ನೀಡಿದ ಪ್ರೊ. ಎಚ್.ಎ. ಭಿಕ್ಷಾವರ್ತಿ ಮಠ, ಭಾರತ ದೇಶದ ದೊಡ್ಡ ಶಕ್ತಿ ಎಂದರೆ ಧರ್ಮ, ಅದು ಮಾನವೀಯ ಧರ್ಮ. ನೊಂದ ಜೀವಿಗಳಿಗೆ ಸಾಂತ್ವನ ಹೇಳುವುದೇ ನಿಜವಾದ ಧರ್ಮ ಎನ್ನುವ ಪರಿಕಲ್ಪನೆಯಲ್ಲಿ ನಾವು ಬದುಕಬೇಕಿದೆ. ಆದರೆ, ಇಂದು ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಳ ಆಗುತ್ತಿರುವುದು ನೋವಿನ ಸಂಗತಿ ಎಂದರು.
ತಾಲೂಕಿನ ಹಿರಿಯ ಸಮಾಜ ಸೇವಕ ಎನ್.ಜಿ. ನಾಗನಗೌಡ ಅವರಿಗೆ ವರ್ಷದ ವಿಶೇಷ ಪ್ರಶಸಿ ನೀಡಿ ಗೌರವಿಸಲಾಯಿತು. ನಗರಸಭೆ ಉಪಾಧ್ಯಕ್ಷ ಎಂ.ಜಂಬಣ್ಣ, ಸದಸ್ಯ ಎ.ಬಿ.ಎಂ. ವಿಜಯಕುಮಾರ್, ಮಹಾತಪಸ್ವಿ ಫೌಂಡೇಶನ್‍ನ ಉಪಾಧ್ಯಕ್ಷ ಪ್ರೊ. ಸಿ.ವಿ. ಪಾಟೀಲ್, ಎನ್.ಇ. ಸುರೇಶ್ ಸ್ವಾಮಿ, ನಾಗರಾಜ್ ಕೋಡಿಹಳ್ಳಿ, ವೀರೇಶ್ ಅಜ್ಜಣ್ಣನವರ್, ಭರತ್, ವಿನಯ್, ಧನರಾಜ್ ಚೇತನ್, ಅಂಬುಜಾ ರಾಜೋಳ್ಳಿ, ಸುನೀತಾ, ಶಾಂತಕುಮಾರಿ, ಐಶ್ವರ್ಯ, ಎನ್.ಎಸ್. ವೀರೇಶ್ ಅಂಚಿನಾಳ್ ಇತರರಿದ್ದರು.- - - -17ಎಚ್‍ಆರ್‍ಆರ್ 04.ಜೆಪಿಜಿ:
ಸಮಾರಂಭವನ್ನು ಶಾಸಕ ಬಿ.ಪಿ.ಹರೀಶ್ ಉದ್ಘಾಟಿಸಿದರು. ಕವಿರಾಜ ಗುರೂಜಿ, ಜಂಬಣ್ಣ, ಎನ್.ಜಿ.ನಾಗನಗೌಡ ಇತರರಿದ್ದರು.