ಮಂಟೇಸ್ವಾಮಿ, ರಾಚಪ್ಪಾಜಿ, ಸಿದ್ದಪ್ಪಾಜಿ ಪ್ರಾಧಿಕಾರ ರಚನೆಗೆ ವಿರೋದ

KannadaprabhaNewsNetwork |  
Published : Sep 07, 2025, 01:00 AM IST
ಶ್ರೀ ಮಂಟೇಸ್ವಾಮಿ, ಶ್ರೀ ರಾಚಪ್ಪಾಜಿ ಮತ್ತು ಶ್ರೀ ಸಿದ್ದಪಾಜಿ ಪ್ರಾಧಿಕಾರ ರಚನೆ ವಿರೋಧಿಸಿ ಪ್ರತಿಭಟನಾ | Kannada Prabha

ಸಾರಾಂಶ

ಶ್ರೀ ಮಂಟೇಸ್ವಾಮಿ, ಶ್ರೀ ರಾಚಪ್ಪಾಜಿ ಮತ್ತು ಶ್ರೀ ಸಿದ್ದಪಾಜಿ ಪ್ರಾಧಿಕಾರ ರಚನೆ ವಿರೋಧಿಸಿ ಪ್ರತಿಭಟನಾ ಶಾಂತಿ ಸಭೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ, ಕೊಳ್ಳೇಗಾಲ

ಶ್ರೀ ಮಂಟೇಸ್ವಾಮಿ, ಶ್ರೀ ರಾಚಪ್ಪಾಜಿ ಮತ್ತು ಶ್ರೀ ಸಿದ್ದಪಾಜಿ ಪ್ರಾಧಿಕಾರ ರಚನೆ ವಿರೋಧಿಸಿ ಪ್ರತಿಭಟನಾ ಶಾಂತಿ ಸಭೆ ನಡೆಸಲಾಯಿತು.

ಶ್ರೀ ಚಿಕ್ಕಲ್ಲೂರಿನಲ್ಲಿ ಸುತ್ತೇಳು ಗ್ರಾಮದ ಯಜಮಾನರುಗಳ, ನೀಲಗಾರರ ಹಾಗೂ ಮಠದ ಆಡಳಿತ ಅಧಿಕಾರಿ ಶ್ರೀ ಭರತ ರಾಜೇಅರಸ್ ಸಮ್ಮುಖದಲ್ಲಿ ಶನಿವಾರ ರಾಜ್ಯಸರ್ಕಾರ ಜಾರಿ ಮಾಡಿರುವ ಶ್ರೀ ಮಂಟೇಸ್ವಾಮಿ, ಶ್ರೀ ರಾಚಪ್ಪಾಜಿ ಮತ್ತು ಶ್ರೀ ಸಿದ್ದಪಾಜಿ ಪ್ರಾಧಿಕಾರ ರಚನೆ ವಿರೋಧಿಸಿ ಪ್ರತಿಭಟನಾ ಶಾಂತಿ ಸಭೆಯನ್ನು ನಡೆಸಲಾಯಿತು. ಸಭೆಯಲ್ಲಿ ತುಂಬಾ ಭಕ್ತ ಸಮೂಹ ಹಾಗೂ ನೀಲಗಾರರು ಸೇರಿ ಆಡಳಿತದಲ್ಲಿರುವ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಅಸಮಾಧಾನವನ್ನು ಹೊರಹಾಕಿ ನಮ್ಮ ಸಂಸ್ಕೃತಿಗೆ ಧಕ್ಕೆಯಾಗುವ ಪ್ರಾಧಿಕಾರದ ವಿರುದ್ಧ ಧಿಕ್ಕಾರ ಕೂಗಿದರು.

ಸುಮಾರು 900 ವರ್ಷಗಳ ಇತಿಹಾಸವಿರುವ ನಮ್ಮ ಮಠಕ್ಕೆ ಪ್ರಾಧಿಕಾರದ ಅವಶ್ಯಕತೆ ಇಲ್ಲವೆಂದು ಚಿಕ್ಕಲೂರಿನ ವಿವಿಧ ಸೇವೆಗಳನ್ನು ನಡೆಸಿಕೊಡುವ ಸುತ್ತೆಳು ಗ್ರಾಮದ ಶಾಗ್ಯ ಬಾಣೂರು ಸುಂಡರಲ್ಲಿ ಬಾಳಾಗುಣಸೆ ತೇಲ್ಲೂರು ಕೊತನೂರು ಬಾಪೂಜಿ ನಗರ ಶ್ರೀ ಸಿದ್ದಪ್ಪಾಜಿ ನೀಲಗಾರ ಸಂಘದವರು ಮಣಗಳ್ಳಿ ಬಂಡಳ್ಳಿ ಸುತ್ತೆಳು ವಿವಿಧ ಗ್ರಾಮದ ಯಜಮಾನರು ಸರ್ಕಾರದ ವಿರುದ್ಧ ಅಸಮಾಧಾನ ಹೊರ ಹಾಕಿದರು. ಸಭೆಯನು ಉದ್ದೇಶೀಸಿ ಮಾತಾಡಿದ ಭರತ್ ರಾಜೇ ಅರಸ್ ಅವರು ಮಠದ ಗಮನಕ್ಕೆ ಪ್ರಾಧಿಕಾರ ರಚಿಸುವ ಬಗ್ಗೆ ಯಾವುದೇ ಮುನ್ಸೂಚನೆ ನೀಡಿಲ್ಲ. ಭಕ್ತಾದಿಗಳ ಅಭಿಪ್ರಾಯವನ್ನು ಸಂಗ್ರಹಣೆ ಮಾಡದೇ ಈ ಸರ್ಕಾರ ಈ ಪ್ರಾಧಿಕಾರದ ರಚನೆಯನ್ನ ಮಾಡಿದೆ ಎಂದು ಅಸಮಾಧಾನ ಹೊರಹಾಕಿದರು.

ಮುಂದಿನ ದಿನಗಳಲ್ಲಿ ಈ ಕ್ಷೇತ್ರಕ್ಕೆ ರಚನೆಯಾಗಿರುವ ಪ್ರಾಧಿಕಾರವನ್ನು ಹಿಂಪಡೆಯಬೇಕೆಂದು ಒಂದುವೇಳೆ ಆಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಇನ್ನು ಬಹು ಸಂಖ್ಯೆಯಲ್ಲಿ ಭಕ್ತರು ನೀಲಗಾರರ ಜೊತೆ ಸೇರಿ ಪ್ರತಿಭಟನೆ ಮಾಡುವುದಾಗಿ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು