)
ಮಾನ್ವಿ: ಅನಾರೋಗ್ಯದಿಂದ ಬೆಂಗಳೂರಿನ ಎಂ.ಎಸ್.ರಾಮಯ್ಯ ವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿ ರುವ ಶಾಸಕ ಹಂಪಯ್ಯ ನಾಯಕ ಅವರನ್ನು ಸಣ್ಣ ನೀರಾವರಿ ತಂತ್ರಜ್ಞಾನ ಸಚಿವ ಬೋಸರಾಜು ಅವರು ಆಸ್ಪತ್ರೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದರು. ಕಳೆದ ಜ. 21 ರಂದ ಶಾಸಕ ಹಂಪಯ್ಯ ನಾಯಕ ಅವರು ಉಸಿರಾಟದ ತೊಂದರೆ, ಕಫ, ನೆಗಡಿ, ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾ ಗುತ್ತಿದ್ದು, ಸದ್ಯ ಅವರ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.