-ಶರಣಬಸವ ವಿವಿ ನೂತನ ಕುಲಸಚಿವೆ ಡಾ. ಲಕ್ಷ್ಮಿ, ಡೀನ್ ಡಾ. ಜವಳಗಿಗೆ ಸನ್ಮಾನ
ಕನ್ನಡಪ್ರಭ ವಾರ್ತೆ ಕಲಬುರಗಿ
ಶರಣಬಸವ ವಿವಿ ನೂತನ ಕುಲಸಚಿವೆ ಡಾ. ಲಕ್ಷ್ಮಿ ಪಾಟೀಲ್ ಮಾಕಾ ಮತ್ತು ಡೀನ್ ಡಾ. ಶಿವಕುಮಾರ ಜವಳಿಗಿ ಮತ್ತು ವಿವಿ ವಿಶೇಷ ಅಧಿಕಾರಿ ಡಾ. ಸುಜಾತಾ ಮಲ್ಲಾಪುರ ಅವರನ್ನು ವಿವಿಯ ದೊಡ್ಡಪ್ಪ ಅಪ್ಪ ಸಭಾಮಂಟಪದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ವಿವಿ ಅಧಿಕಾರಿಗಳು ಸನ್ಮಾನಿಸಿದರು.ಡಾ. ಲಕ್ಷ್ಮಿ ಪಾಟೀಲ್ ಮಾಕಾ, ಡಾ. ಜವಳಿಗಿ ಮತ್ತು ಡಾ. ಸುಜಾತಾ ಮಲ್ಲಾಪುರ ಅವರ ಕಠಿಣ ಶ್ರಮ ಪಟ್ಟಿದ್ದಾರೆ. ಅವರೆಲ್ಲರ ಪರಿಶ್ರಮವು ಅವರಿಗೆ ಉತ್ತಮ ಪ್ರತಿಫಲವನ್ನು ನೀಡಿದೆ ಎಂದು ದೇಶಮುಖ ಹೇಳಿದರು.
ಡಾ. ಅಪ್ಪಾಜಿ ಅವರ ಈ ವಿವಿಯನ್ನು ವಿಶ್ವ ದರ್ಜೆಯ ವಿವಿಯಾಗಿ ಪರಿವರ್ತಿಸುವ ಕನಸನ್ನು ಸಾಧಿಸುವಲ್ಲಿ, ಪ್ರತಿಯೊಬ್ಬ ಅಧ್ಯಾಪಕರು ವಿಶ್ವವಿದ್ಯಾಲಯದ ಅಧಿಕಾರಿಗಳಿಗೆ ತಮ್ಮ ಅತ್ಯುತ್ತಮ ಸೇವೆ ಮತ್ತು ಸಹಕಾರ ನೀಡಬೇಕೆಂದು ದೇಶಮುಖ ಹೇಳಿದರು.
ಕುಲಾಧಿಪತಿಗಳು ಹಾಗೂ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ, ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿ ಶುಭ ಕೋರಿದರು.ಉಪಕುಲಪತಿ ಪ್ರೊ. ಅನಿಲಕುಮಾರ ಬಿಡವೆ, ವಿವಿ ನಿರ್ದೇಶಕ ವಿ. ಡಿ. ಮೈತ್ರಿ ಮಾತನಾಡಿದರು.
ವಿವಿಯ ಕುಲಸಚಿವ (ಮೌಲ್ಯಮಾಪನ) ಡಾ. ಎಸ್. ಎಚ್. ಹೊನ್ನಳ್ಳಿ, ಹಣಕಾಸು ಅಧಿಕಾರಿ ಡಾ. ಕಿರಣ ಮಾಕಾ ಸೇರಿದಂತೆ ಇತರ ಪ್ರಮುಖರು ಉಪಸ್ಥಿತರಿದ್ದರು.ಫೋಟೋ- ಶರಣಬಸವ