ಥಲಸ್ಸೇಮಿಯಾ, ಏಡ್ಸ್‌ಗೆ ತುತ್ತಾದವರಿಗೆ, ಅಪಘಾತಕ್ಕೀಡಾದವರಿಗೆ, ರಕ್ತಹೀನಕ್ಕೆ ಒಳಗಾದವರಿಗೆ ರಕ್ತದಾನ ಮಾಡುವ ಮೂಲಕ ಜೀವ ಉಳಿಸಬಹುದು ಎಂದು ರಕ್ತನಿಧಿ ವೈದ್ಯಾಧಿಕಾರಿ ಡಾ. ಬಸವರಾಜ ತಳವಾರ ಹೇಳಿದರು.
ಶಿಗ್ಗಾಂವಿ: ಥಲಸ್ಸೇಮಿಯಾ, ಏಡ್ಸ್‌ಗೆ ತುತ್ತಾದವರಿಗೆ, ಅಪಘಾತಕ್ಕೀಡಾದವರಿಗೆ, ರಕ್ತಹೀನಕ್ಕೆ ಒಳಗಾದವರಿಗೆ ರಕ್ತದಾನ ಮಾಡುವ ಮೂಲಕ ಜೀವ ಉಳಿಸಬಹುದು ಎಂದು ರಕ್ತನಿಧಿ ವೈದ್ಯಾಧಿಕಾರಿ ಡಾ. ಬಸವರಾಜ ತಳವಾರ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿಯ ಐಕ್ಯೂಎಸಿ, ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು, ಯುವ ರೆಡ್‌ಕ್ರಾಸ್, ಕನ್ನಡ ನುಡಿ ವೇದಿಕೆ, ರೋವರ್ಸ್ ಮತ್ತು ರೇಂಜರ್ಸ್, ಜಿಲ್ಲಾ ರಕ್ತ ನಿಧಿ ಕೇಂದ್ರ ಜಿಲ್ಲಾಸ್ಪತ್ರೆ ಹಾವೇರಿ, ಶಿಗ್ಗಾಂವಿಯ ರಕ್ತ ಶೇಖರಣಾ ಘಟಕದ ಸಹಯೋಗದಲ್ಲಿ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ತಾವು ರಕ್ತದಾನ ಮಾಡುವುದರಿಂದ ಸಂತೃಪ್ತಿ, ಹೃದಯದ ಆರೋಗ್ಯ, ಸಾಮಾಜಿಕ ಮನೋಭಾವ, ಹೊಸ ರಕ್ತಕಣಗಳ ಉತ್ಪತ್ತಿ ಇಂತಹ ಪ್ರಯೋಜನಗಳನ್ನು ಪಡೆಯುತ್ತೀರಿ ಎಂದರು.
ಹಾವೇರಿ ರಕ್ತನಿಧಿ ಕೇಂದ್ರದ ಆಪ್ತ ಸಮಾಲೋಚಕ ರೇವಣ್ಣ ತೆಂಬದ ಮಾತನಾಡಿ, ರಕ್ತದಾನದ ಜತೆಗೆ ದೇಹದಾನ, ಅಂಗಾಂಗ ದಾನಗಳನ್ನು ಮಾಡುವುದು ಒಳ್ಳೆಯದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಎ.ಸಿ. ವಾಲಿ ಮಾತನಾಡಿ, ಹತ್ತು ವರ್ಷಗಳಿಂದ ಈ ಕಾಲೇಜು ನಾಲ್ಕು ಸಾವಿರ ಜೀವಗಳನ್ನು ಉಳಿಸುವ ಕೆಲಸ ಮಾಡಿದೆ. ಇಂದು ಒಟ್ಟು ೫೫ ವಿದ್ಯಾರ್ಥಿಗಳು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದ್ದಾರೆ. ಅದರಲ್ಲಿ ಹನ್ನೆರಡು ವಿದ್ಯಾರ್ಥಿನಿಯರು ರಕ್ತದಾನ ಮಾಡಿದ್ದು ಇಂದಿನ ವಿಶೇಷವಾಗಿತ್ತು ಎಂದರು.
ಡಾ. ಆನಂದ ಇಂದೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಆರ್.ಪಿ. ನದಾಫ ಸ್ವಾಗತಿಸಿದರು. ಪ್ರೊ. ಮಹಾಂತೇಶ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ವಿನಯ ಕುಲಕರ್ಣಿ ವಂದಿಸಿದರು.
ಪ್ರೊ. ಡಿ.ಎಸ್. ಭಟ್, ಪ್ರೊ. ಡಿ.ಎಸ್. ಸೊಗಲದ, ಪ್ರೊ. ಮೇಘ ಚಲವಾದಿ, ಡಾ. ಅಂಬಿಳಿ ಪಿಳ್ಳೆ, ಡಾ. ಮುತ್ತು ಸುಣಗಾರ, ಪ್ರೊ. ಆರ್.ಪಿ. ನದಾಫ್, ಡಾ. ಪ್ರಬಲ ರೋಡ್ಡಣನವರ್, ಸೌಭಾಗ್ಯ ದೊಡ್ಮನಿ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.