ಕನ್ನಡಪ್ರಭ ವಾರ್ತೆ ಕಮಲಾಪುರ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೖಜುನಾಧ ತಡಕಲ, ಮಾಜಿ ಸಚಿವ ರೇವುನಾಯಕ ಬೆಳ್ಳಮಗಿ, ಮಹೇಶ್ ಕುಂಬಾರ, ಶರಣಬಸಪ್ಪ ಪೂಜಾರಿ, ಸಿರಗಾಪುರ, ಚೆನ್ನಮ್ಮ ಹೇರಾಳೆ, ಸಿದ್ದಮ್ಮ ಸಿರಗಾಪುರ, ಜಗದೇವಿ ಬಾಬುರಾವ, ರಮೇಶ ಸಿರಗಾಪುರ, ಹನುಮಂತ ಮಡಿವಾಳ, ಗುಂಡರಾವ, ಸವಿತಾ ಮಾಂತಪ್ಪ, ಮುಖಂಡ ಸತೀಶ್ ಸಾವು ಕಾಂಗ್ರೆಸ್ ಧ್ವಜ ನಿಡಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈಜನಾ ತಡಕಲ ಮಾತನಾಡಿ, ಇವತ್ತಿನ ದಿವಸ ಕಲಬುರ್ಗಿ ಗ್ರಾಮೀಣ ಮತ ಕ್ಷೇತ್ರದಲ್ಲಿ ಶಾಸಕರು, ಸಂಸದರು, ಗ್ರಾಮೀಣ ಕ್ಷೇತ್ರದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ ಮತ ಕೇಳಲು ಯಾವ ನೈತಿಕತೆಯನ್ನು ಇವರಿಗಿಲ್ಲ. ಪಕ್ಷದ ಕಾರ್ಯಕರ್ತರಿಗೆ ನಿರ್ಲಕ್ಷ ತೋರುವುದರಿಂದ ಬೇಸತ್ತು ಜನ ಬಿಜೆಪಿ ತೊರೆದು ಕಾಂಗ್ರೆಸ್ ಜೊತೆ ಕೈಜೋಡಿಸಿದ್ದಾರೆ ಎಂದರು.ಇನ್ನು ಮುಂಬರುವ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿಕೊಳ್ಳಲಿದ್ದಾರೆ ಎಂದರು. ಬಿಜೆಪಿ ದುರಾಡಳಿತ ಸಹಿಸಲಾಗದೆ ಕಾಂಗ್ರೆಸ್ ಸೇರಿಕೊಂಡಿದ್ದಾರೆ ಎಂದು ತಡಕಲ್ ತಿಳಿಸಿದರು.