ಶಾಸಕ ಶ್ರೀನಿವಾಸ ಮಾನೆ ಸಮ್ಮುಖದಲ್ಲಿ ಹಲವರು ಕಾಂಗ್ರೆಸ್ ಸೇರ್ಪಡೆ

KannadaprabhaNewsNetwork |  
Published : May 03, 2024, 01:07 AM IST
ಫೋಟೊ: ೨ಎಚ್‌ಎನ್‌ಎಲ್೨ | Kannada Prabha

ಸಾರಾಂಶ

ಹಾನಗಲ್ ತಾಲೂಕಿನ ಹಲವು ಗ್ರಾಮಗಳಲ್ಲಿ ತಾಪಂ ಮಾಜಿ ಸದಸ್ಯರು, ಅನೇಕ ಮುಖಂಡರು, ಕಾರ್ಯಕರ್ತರು ಬಿಜೆಪಿ, ಜೆಡಿಎಸ್, ಆಮ್ ಆದ್ಮಿ ಪಾರ್ಟಿ ತೊರೆದು ಶಾಸಕ ಶ್ರೀನಿವಾಸ ಮಾನೆ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಹಾನಗಲ್ಲ: ಹಾನಗಲ್ ತಾಲೂಕಿನ ಹಲವು ಗ್ರಾಮಗಳಲ್ಲಿ ತಾಪಂ ಮಾಜಿ ಸದಸ್ಯರು, ಅನೇಕ ಮುಖಂಡರು, ಕಾರ್ಯಕರ್ತರು ಬಿಜೆಪಿ, ಜೆಡಿಎಸ್, ಆಮ್ ಆದ್ಮಿ ಪಾರ್ಟಿ ತೊರೆದು ಶಾಸಕ ಶ್ರೀನಿವಾಸ ಮಾನೆ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಮಾರನಬೀಡ ಗ್ರಾಮದಲ್ಲಿ ತಾಪಂ ಮಾಜಿ ಸದಸ್ಯ ಸುರೇಶ ನೆರ್ಕಿಮನಿ, ಮುಖಂಡರಾದ ಸಂಜೀವ್ ಹರಿಜನ, ನೀರಲಗಿ ಮ. ಆಡೂರು, ಗ್ರಾಮದ ಶಂಭುಲಿಂಗ ಕಮ್ಮಾರ, ಶೇಕವ್ವ ದೇವಿಹೊಸೂರು, ರವೀಂದ್ರಪ್ಪ ಮೆಳ್ಳಿಹಳ್ಳಿ, ಮಾಸನಕಟ್ಟಿ ಗ್ರಾಮದ ಶಿವನಗೌಡ ಪಾಟೀಲ, ಈರನಗೌಡ ಪಾಟೀಲ, ದ್ಯಾಮನಗೌಡ ಪಾಟೀಲ, ಹುಣಸಿಕಟ್ಟಿ ಗ್ರಾಮದ ರಾಜೂ ದುಂಡಿ, ನಾಗನಗೌಡ ಪಾಟೀಲ, ನಿಂಗಪ್ಪ ಅರಳೇಶ್ವರ, ನರೇಗಲ್ ಗ್ರಾಮದ ಭರಮಪ್ಪ ಉಳಗಿ, ಗುತ್ತೆಪ್ಪ ಸೊಟ್ಟಮ್ಮನವರ, ಗದಿಗೆಪ್ಪ ಕುರುಬರ, ತಿಳವಳ್ಳಿಯ ಹನುಮಂತಪ್ಪ ದುಮ್ಮಿಹಾಳ, ಭರಮಪ್ಪ ಕುರುಬರ, ನಾಗಪ್ಪ ಕಾಳೇರ, ಮೆಹಬೂಬಅಲಿ ರಿತ್ತಿ, ನಾಸೀರಖಾನ ತೋಟಗೇರ ಸೇರಿದಂತೆ ಇನ್ನೂ ಹಲವರು ಬಿಜೆಪಿ, ಜೆಡಿಎಸ್ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಶಾಸಕ ಶ್ರೀನಿವಾಸ ಮಾನೆ ಮಾತನಾಡಿ, ಕೇಂದ್ರದ ಬಿಜೆಪಿ ಸರ್ಕಾರದ ೧೦ ವರ್ಷಗಳ ಆಡಳಿತಕ್ಕೆ ಜನ ಬೇಸತ್ತು ಹೋಗಿದ್ದಾರೆ. ಸುಳ್ಳು ಹೇಳುವ ಮೂಲಕ ಅಧಿಕಾರ ಗಿಟ್ಟಿಸುವುದನ್ನು ರೂಢಿ ಮಾಡಿಕೊಂಡಿರುವ ಬಿಜೆಪಿ ಮತ್ತೆ ಸುಳ್ಳಿನ ಸಾಮ್ರಾಜ್ಯ ಸೃಷ್ಟಿಸುತ್ತಿದೆ. ಮತ್ತೆ ಜನರಿಗೆ ಬಣ್ಣ ಬಣ್ಣದ ಕನಸು ತೋರಿಸುತ್ತಿದೆ. ತಮ್ಮ ಜವಾಬ್ದಾರಿ, ಸ್ಥಾನಮಾನ ಮರೆತು ಬಿಜೆಪಿ ಮುಖಂಡರು ಕುತಂತ್ರದ ರಾಜಕಾರಣ ಮಾಡುತ್ತಿದ್ದಾರೆ. ತಂತ್ರ, ಕುತಂತ್ರಗಳು ಯಾವವೂ ಫಲ ನೀಡುವುದಿಲ್ಲ ಎಂದು ವಾಗ್ದಾಳಿ ನಡೆಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿಜಯಕುಮಾರ ದೊಡ್ಡಮನಿ, ಮಂಜು ಗೊರಣ್ಣನವರ, ಕೆಪಿಸಿಸಿ ಸದಸ್ಯರಾದ ಟಾಕನಗೌಡ ಪಾಟೀಲ, ಖ್ವಾಜಾಮೊಹಿದ್ದೀನ್ ಜಮಾದಾರ ಉಪಸ್ಥಿತರಿದ್ದರು.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ