ದೇವಾಂಗ ಸಮಾಜದ ಅಭಿವೃದ್ಧಿಗೆ ಹಲವು ಯೋಜನೆ ತಯಾರಿ: ದಯಾನಂದಪುರಿ ಶ್ರೀ

KannadaprabhaNewsNetwork |  
Published : Apr 27, 2026, 01:30 AM IST
ಫೋಟೊ:೨೬ಕೆಪಿಸೊರಬ-೦೩ : ಸೊರಬ ಪಟ್ಟಣದ ಸೊಪ್ಪಿನಕೇರಿಯಲ್ಲಿ ಬಾದಾಮಿ ಬನಶಂಕರಿ ಕ್ಷೇತ್ರದಲ್ಲಿ ನಡೆಯುವ ಅಖಿಲ ಭಾರತ ದೇವಾಂಗ ಜಾಗೃತಿ ಸಮಾವೇಶ ಹಾಗೂ ಶ್ರೀ ದೇವಾಂಗ ದಯಾನಂದಪುರಿ ಸ್ವಾಮೀಜಿ ಅವರ ೩೬ನೇ ಪಟ್ಟಾಭಿಷೇಕ ವಾರ್ಷಿಕೋತ್ಸವ ಮತ್ತು ತುಲಾಭಾರ ಸಮಾರಂಭದ ಪೂರ್ವಭಾವಿ ಸಭೆ ನಡೆಯಿತು. | Kannada Prabha

ಸಾರಾಂಶ

ದೇವಾಂಗ ಸಮಾಜದ ಅಭಿವೃದ್ಧಿಗಾಗಿ ಹಾಗೂ ಸಂಘಟನೆಗಾಗಿ ಹಲವಾರು ಯೋಜನೆಗಳನ್ನು ರೂಪಿಸಿ ಅವುಗಳನ್ನು ಕಾರ್ಯರೂಪಕ್ಕೆ ತರಲಾಗುತ್ತಿದೆ ಎಂದು ಹಂಪಿ ಹೇಮಕೂಟದ ದಯಾನಂದಪುರಿ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಸೊರಬ

ದೇವಾಂಗ ಸಮಾಜದ ಅಭಿವೃದ್ಧಿಗಾಗಿ ಹಾಗೂ ಸಂಘಟನೆಗಾಗಿ ಹಲವಾರು ಯೋಜನೆಗಳನ್ನು ರೂಪಿಸಿ ಅವುಗಳನ್ನು ಕಾರ್ಯರೂಪಕ್ಕೆ ತರಲಾಗುತ್ತಿದೆ ಎಂದು ಹಂಪಿ ಹೇಮಕೂಟದ ದಯಾನಂದಪುರಿ ಸ್ವಾಮೀಜಿ ಹೇಳಿದರು.

ಬಾದಾಮಿ ಬನಶಂಕರಿ ಕ್ಷೇತ್ರದಲ್ಲಿ ಮೇ ೮ ಮತ್ತು ೯ ರಂದು ನಡೆಯುವ ಅಖಿಲ ಭಾರತ ದೇವಾಂಗ ಜಾಗೃತಿ ಸಮಾವೇಶ ಹಾಗೂ ದೇವಾಂಗ ದಯಾನಂದಪುರಿ ಸ್ವಾಮೀಜಿ ಅವರ ೩೬ನೇ ಪಟ್ಟಾಭಿಷೇಕ ವಾರ್ಷಿಕೋತ್ಸವ ಮತ್ತು ತುಲಾಭಾರ ಸಮಾರಂಭದ ಅಂಗವಾಗಿ ಪಟ್ಟಣದ ಸೊಪ್ಪಿನಕೇರಿಯ ಶ್ರೀ ದುರ್ಗಾಂಬ ದೇವಸ್ಥಾನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಮೇ ೮ ಮತ್ತು ೯ರಂದು ನಡೆಯಲಿರುವ ಸಮಾರಂಭದಲ್ಲಿ ೧ಲಕ್ಷಕ್ಕೂ ಅಧಿಕ ಜನ ಸೇರುವ ನಿರೀಕ್ಷೆಯಿದೆ. ಹಂಪಿ ಹೇಮಕೂಟ ಶ್ರೀ ಗಾಯತ್ರಿ ಪೀಠ ಮಹಾಸಂಸ್ಥಾನ ಟ್ರಸ್ಟ್ ಸ್ಥಾಪಿಸಿ ಮಠದ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ಜವಾಬ್ದಾರಿ ನೀಡಲಾಗಿದೆ. ಟ್ರಸ್ಟ್‌ ವತಿಯಿಂದ ಕೆಂಪಲಿಣಗನಹಳ್ಳಿ ಶಾಖಾಮಠದ ಆವರಣದಲ್ಲಿ ಒಂದು ಶಾಲಾ ಕಟ್ಟಡ ಮತ್ತು ಬೃಹತ್ತಾದ ಕಲ್ಯಾಣ ಮಂಟಪವನ್ನು ನಿರ್ಮಿಸಿ ಸಮಾಜ ಬಾಂಧವರಿಗೆ ಅನುಕೂಲ ಮಾಡಲಾಗಿದೆ. ಕಳೆದ ೨೦ ವರ್ಷಗಳಿಂದ ರಾಜ್ಯ ದೇವಾಂಗ ಸಂಘವನ್ನು ಸ್ಥಾಪಿಸಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ಕಾರ್ಯವನ್ನು ಸಹ ಮಾಡಲಾಗುತ್ತಿದೆ ಎಂದರು.

ರಾಜ್ಯ ಮತ್ತು ದೇಶದ ವಿವಿಧಡೆ ನೆಲೆಸಿರುವ ದೇವಾಂಗ ಸಮಾಜದವರನ್ನು ಒಂದೆಡೆ ಸೇರಿಸಿ ಸಂಘಟನೆಯ ಶಕ್ತಿ ಪ್ರದರ್ಶನದ ಸದುದ್ದೇಶದ ಜೊತೆಗೆ ರಾಜಕೀಯ, ಆರ್ಥಿಕ, ಶೈಕ್ಷಣಿಕ ಹಾಗೂ ಇನ್ನೂ ಹಲವು ಕ್ಷೇತ್ರಗಳಲ್ಲಿ ಹಿಂದುಳಿದಿರುವ ನಮ್ಮ ಸಮಾಜಕ್ಕೆ ನೇಕಾರಿಕೆ ವೃತ್ತಿಯನ್ನೇ ಅವಲಂಭಿಸಿ ಬದುಕು ಕಟ್ಟಿಕೊಂಡವರಿಗೆ ಆಧುನಿಕ ತಂತ್ರಜ್ಞಾನದಿAದ ಆಗುತ್ತಿರುವ ತೊಂದರೆಗಳಿಗೆ ಪರಿಹಾರ ಪಡೆಯುವ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯುವಂತೆ ಮಾಡುವ ಉದ್ದೇಶದಿಂದ ಸಮಾವೇಶ ನಡೆಯಲಿದೆ ಎಂದರು.

ತಾಲೂಕು ದೇವಾಂಗ ಸಮಾಜದ ಅಧ್ಯಕ್ಷ ಡಿ.ಮಹಾಬಲಪ್ಪ ಮಾತನಾಡಿ, ಬಾದಾಮಿಯಲ್ಲಿ ನಡೆಯುವ ಸಮಾವೇಶದಲ್ಲಿ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು. ತಾಲೂಕಿನಲ್ಲಿ ಸುಮಾರು ೧೫ ಸಾವಿರ ದೇವಾಂಗ ಸಮಾಜದವರಿದ್ದಾರೆ. ಎಲ್ಲರೂ ಪಕ್ಷಾತೀತವಾಗಿ ಸಮಾಜದ ಹಿತಕ್ಕಾಗಿ ಮತ್ತು ಮುಂದಿನ ತಲೆಮಾರಿನ ಭವಿಷ್ಯಕ್ಕಾಗಿ ಒಗ್ಗಟ್ಟಾಗಬೇಕು ಎಂದರು.

ಹಂಪಿ ಹೇಮಕೂಟ ಶ್ರೀ ಗಾಯತ್ರಿಪೀಠ ಮಹಾಸಂಸ್ಥಾನ ಟ್ರಸ್ಟ್ ಅಧ್ಯಕ್ಷ ಪಿ.ಆರ್. ಗಿರಿಯಪ್ಪ, ಕಾರ್ಯಕ್ರಮದ ಸ್ವಾಗತ ಸಮಿತಿ ಮಹಾ ಕಾರ್ಯದರ್ಶಿ ಟಿ. ರಾಜೇಶ್, ಕಾರ್ಯದರ್ಶಿ ಕೆ.ಸಿ.ತಿಮ್ಮಶೆಟ್ಟಿ, ದೇವಾಂಗ ಸಮಾಜದ ತಾಲೂಕು ಉಪಾಧ್ಯಕ್ಷ ಸುರೇಶ್ ಪಿ.ಅಂಗಡಿ, ಖಜಾಂಚಿ ಬಸವಂತಪ್ಪ ಮಾಸ್ತರ್, ನಿರ್ದೇಶಕ ಎಂ.ಎಸ್.ಸತೀಶ್, ಪ್ರಮುಖರಾದ ಅರುಣ್ ಆಟೋ, ಎ.ಪಿ.ರಂಗನಾಥ್, ಮಲ್ಲಿಕಾರ್ಜುನ, ಎ.ರಂಗನಾಥ್, ಎ.ಪಿ.ಕೃಷ್ಣಮೂರ್ತಿ, ಪರಸಪ್ಪ, ಹೇಮಪ್ಪ ಶಾಂತಗೇರಿ, ಶಶಿಧರ ಉರುಗನಹಳ್ಳಿ, ಓಂಕಾರಪ್ಪ, ಬಸವರಾಜ್, ಸಂತೋಷ್ ಸೊಪ್ಪಿನಕೇರಿ, ಇ.ವಿನೋಧ, ಎಂ.ಎಸ್. ಗೀತಾ, ಎಂ.ಸೀತಮ್ಮ, ಶಾರದಮ್ಮ, ದೇವಾಂಗ ಸಮಾಜದವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮನೆಮನೆಗಳಲ್ಲಿ ಶ್ರೀ ಶಂಕರ ಜಯಂತಿ ಆಚರಣೆ
ಹಣಕ್ಕಿಂತ ಆರೋಗ್ಯವೇ ಅಮೂಲ್ಯ ಎಂದ ಶಾಸಕ ಸ್ವರೂಪ್‌