ವೆಂಗಯ್ಯನ ಕೆರೆಗೆ ಹೆಚ್ಚುವರಿ ನೀರು

KannadaprabhaNewsNetwork |  
Published : Apr 27, 2026, 01:30 AM IST
ಫೋಟೋ: 26 ಹೆಚಎಸ್‌ಕೆ 1ಹೊಸಕೋಟೆ ತಾಲ್ಲೂಕಿನ ಸೋಲೂರು ಗ್ರಾಮದಲ್ಲಿ ನೂತನ ಅಂಬೇಡ್ಕರ್ ಭವನವನ್ನು ಶಾಸಕ ಶರತ್ ಬಚ್ಚೇಗೌಡ ಸೇರಿದಂತೆ ಹಲವಾರು ಗಣ್ಯರು ಉದ್ಘಾಟಿಸಿದರು. | Kannada Prabha

ಸಾರಾಂಶ

ಹೊಸಕೋಟೆ: ವೆಂಗಯ್ಯನ ಕೆರೆ ಏತ ನಿರಾವರಿ ಯೋಜನೆಯಡಿ ಈ ಭಾಗಕ್ಕೆ 32ಎಂಎಲ್‌ಡಿ ನೀರಿನ ಜೊತೆಗೆ ಹೆಚ್ಚುವರಿ ನೀರು ತಂದು ಅತ್ತಿವಟ್ಟ, ತವಟಹಳ್ಳಿ, ಸೋಲೂರು, ಕಾಮರಾಸನಹಳ್ಳಿ ಸೇರಿದಂತೆ ಈ ಭಾಗದ ಎಲ್ಲಾ ಕೆರೆಗಳಿಗೆ ನೀರು ತುಂಬಿಸಲಾಗುವುದು ಎಂದು ಶಾಸಕ ಶರತ್ ಬಚ್ಚೇಗೌಡ ಭರವಸೆ ನೀಡಿದರು

ಹೊಸಕೋಟೆ: ವೆಂಗಯ್ಯನ ಕೆರೆ ಏತ ನಿರಾವರಿ ಯೋಜನೆಯಡಿ ಈ ಭಾಗಕ್ಕೆ 32ಎಂಎಲ್‌ಡಿ ನೀರಿನ ಜೊತೆಗೆ ಹೆಚ್ಚುವರಿ ನೀರು ತಂದು ಅತ್ತಿವಟ್ಟ, ತವಟಹಳ್ಳಿ, ಸೋಲೂರು, ಕಾಮರಾಸನಹಳ್ಳಿ ಸೇರಿದಂತೆ ಈ ಭಾಗದ ಎಲ್ಲಾ ಕೆರೆಗಳಿಗೆ ನೀರು ತುಂಬಿಸಲಾಗುವುದು ಎಂದು ಶಾಸಕ ಶರತ್ ಬಚ್ಚೇಗೌಡ ಭರವಸೆ ನೀಡಿದರು.

ತಾಲೂಕಿನ ಜಡಿಗೇನಹಳ್ಳಿ ಹೋಬಳಿಯ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಈಗಾಗಲೇ ಸಣ್ಣ ನಿರಾವರಿ ಸಚಿವರಲ್ಲಿ ತಿಳಿಸಿದ್ದು, ಶೀಘ್ರದಲ್ಲಿ ನೀರು ಬರಲಿದೆ. ಜೊತೆಗೆ ಟಾಸ್ಕ್‌ಪೋರ್ಸ್ ಅಡಿಯಲ್ಲಿ ನೂತನ ಕೊಳವೆ ಬಾವಿ ಕೊರೆಯುವ ಕೆಲಸ ಪ್ರಾರಂಭ ಮಾಡಿದ್ದೇವೆ. ಹರಳೂರು, ಸೋಲೂರು, ಅತ್ತಿವಟ್ಟ ಮೂಲಕ ರಾಷ್ಟ್ರೀಯ ಹೆದ್ದಾರಿ 75 ಸೇರುವ ರಸ್ತೆ ಅಭಿವೃದ್ಧಿಯನ್ನು ಪ್ರಗತಿ ಪಥದಡಿ ಆಯ್ಕೆ ಮಾಡಿದ್ದೇವೆ. ಅಲ್ಲಿಯವರೆಗೆ ಗುಂಡಿ ಮುಚ್ಚುವ ಕೆಲಸ ಶೀಘ್ರದಲ್ಲಿ ಪ್ರಾರಂಭಿಸುತ್ತೇವೆ. ಹರಳೂರು, ಬೆಲಮಂಗಳ, ಗೊಣಕನಹಳ್ಳಿ, ಓರೋಹಳ್ಳಿ, ತವಟಹಳ್ಳಿ, ಜಡಿಗೇನಹಳ್ಳಿ, ಸೋಲೂರು ಗ್ರಾಮಗಳಳ್ಳಿ ಸುಮಾರು 1 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ್ದೇವೆ. ಇದರ ಜೊತೆಗೆ ಕೇವಲ ಒಂದು ತಿಂಗಳ ಅಂತರದಲ್ಲಿ ಸೋಲೂರು ಗ್ರಾಮದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮಾಡಿದ್ದು ಇದರಿಂದ ಈ ಭಾಗದ ಜನರಿಗೆ ಅನುಕೂಲವಾಗಲಿದೆ ಎಂದರು.

ಈ ಸಂದರ್ಭದಲ್ಲಿ ಟಿಎಪಿಸಿಎಂಎಸ್ ಅಧ್ಯಕ್ಷ ಕೊಡಿಹಳ್ಳಿ ಸುರೇಶ್, ಶಿವಕುಮಾರ್, ಭತ್ಯಪ್ಪ, ವರದರಾಜ್, ರವಿಕುಮಾರ್, ಸೋಲೂರು ಗ್ರಾಮದ ನಾಗರಾಜ್, ರವಿ ಕುಮಾರ್, ಪಿಕೆಎಸ್ ಶ್ರೀನಿವಾಸ್, ಕೃಪಾ ಕಿರಣ್, ಗುತ್ತಿಗೆದಾರ ಮೋಹನ್, ಅವಿನಾಶ್, ಖಲೀಮ್ ಇತರರು ಉಪಸ್ಥಿತರಿದ್ದರು.

ಫೋಟೋ: 26 ಹೆಚಎಸ್‌ಕೆ 1

ಹೊಸಕೋಟೆ ತಾಲೂಕಿನ ಸೋಲೂರು ಗ್ರಾಮದಲ್ಲಿ ಅಂಬೇಡ್ಕರ್ ಭವನವನ್ನು ಶಾಸಕ ಶರತ್ ಬಚ್ಚೇಗೌಡ ಉದ್ಘಾಟಿಸಿದರು. ಟಿಎಪಿಸಿಎಂಎಸ್ ಅಧ್ಯಕ್ಷ ಕೊಡಿಹಳ್ಳಿ ಸುರೇಶ್, ಶಿವಕುಮಾರ್, ಭತ್ಯಪ್ಪ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮನೆಮನೆಗಳಲ್ಲಿ ಶ್ರೀ ಶಂಕರ ಜಯಂತಿ ಆಚರಣೆ
ಹಣಕ್ಕಿಂತ ಆರೋಗ್ಯವೇ ಅಮೂಲ್ಯ ಎಂದ ಶಾಸಕ ಸ್ವರೂಪ್‌