ಕನಕಪುರ: ಯೂತ್ ಹಾಸ್ಟೇಲ್ ಅಸೋಷಿಯೇಷನ್ ಅಫ್ ಇಂಡಿಯಾ ಸಂಘಟನೆ ಚಾರಣಾ ಪ್ರಿಯರಿಗೆ ಅದ್ಭುತ ಸಂಘಟನೆಯಾಗಿದೆ. ತಾಲೂಕಿನಲ್ಲಿ ಹತ್ತಾರು ಬೆಟ್ಟಗಳಿವೆ, ಪ್ರಕೃತಿಯೊಂದಿಗೆ ಒಡನಾಡುವ ಸುಯೋಗ ಮತ್ತಷ್ಟು ಲಭಿಸಿದೆ. ಸಹಪಾಠಿಗಳೊಂದಿಗೆ ಮುಂದಿನ ದಿನಗಳಲ್ಲಿ ಚಾರಣ ಕೈಗೊಳ್ಳಲಾಗುವುದು ಎಂದು ಪರಿಸರ ಪ್ರೇಮಿ ಮರಸಪ್ಪ ರವಿ ತಿಳಿಸಿದರು.
ಸಂಘಟನೆಯ ಛೇರ್ಮನ್ ಎಸ್.ವಿ.ಪುಟ್ಟರಾಜು, ಉಪಾಧ್ಯಕ್ಷ ಸಿ.ಎಸ್.ನಾಗರಾಜು, ಸುಬ್ರಮಣ್ಯ, ಕಾರ್ಯದರ್ಶಿ ಗುರುರಾಜ್, ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ ಕೆ.ಟಿ., ಖಜಾಂಚಿ ಕಲ್ಪನಾ ಆರ್., ನಿರ್ದೇಶಕರಾದ ಸಿ.ಎನ್.ಅರುಣ್, ನವೀನ್ ಎಂ.ಎಸ್., ವಿ.ರಾಮಯ್ಯ, ದೇವೇಗೌಡ, ಶಿವಕುಮಾರ್, ಪ್ರಶಾಂತ್, ಅರವಿಂದ್ ಕುಮಾರ್ ಇತರರಿದ್ದರು.
ಕೆ ಕೆ ಪಿ ಸುದ್ದಿ 02:ಕನಕಪುರ ತಾಲೂಕು ಯೂತ್ ಹಾಸ್ಟೆಲ್ ಅಸೋಸಿಯೇಷನ್ ಅಧ್ಯಕ್ಷರಾಗಿ ಮರಸಪ್ಪ ರವಿ ಅವರು ಅಧಿಕಾರ ಸ್ವೀಕರಿಸಿದರು.