ಪಿಕಾರ್ಡ್ ಬ್ಯಾಂಕ್ ರೈತರ ಸಾಲ ಮರುಪಾವತಿಗೆ ಮಾರ್ಚ್ ೩೧ ಕಡೆಯ ದಿನ: ಇನೇಶ್

KannadaprabhaNewsNetwork |  
Published : Jan 25, 2025, 01:04 AM IST
ಹೆಚ್.ಎಸ್. ಇನೇಶ್ | Kannada Prabha

ಸಾರಾಂಶ

March 31st is the last day for Picard Bank farmers to repay their loans: Inesh

ಕೊಪ್ಪ:ಪಿಕಾರ್ಡ್ ಬ್ಯಾಂಕ್‌ಗಳ ೨೦೨೪-೨೫ನೇ ಸಾಲಿನ ಆರ್ಥಿಕ ವ್ಯವಹಾರಗಳ ಲೆಕ್ಕಪುಸ್ತಕಗಳನ್ನು ರಾಜ್ಯ ಸಹಕಾರ ಸಂಘಗಳ ನಿಬಂಧಕರ ಆದೇಶದನ್ವಯ ೩೧-೦೩-೨೦೨೫ಕ್ಕೆ ಮುಕ್ತಾಯಗೊಳಿಸಬೇಕಾಗಿರುತ್ತದೆ. ಸಾಲಗಾರ ರೈತರು ೨೦೨೫ರ ಮಾರ್ಚ್ ೩೧ರೊಳಗೆ ಸಾಲದ ಕಂತನ್ನು ಮರುಪಾವತಿಸಬೇಕು. ತಪ್ಪಿದ್ದಲ್ಲಿ ೨೦೨೫ರ ಏಪ್ರಿಲ್ ೧ಕ್ಕೆ ಮುಂದುವರೆದ ಬಡ್ಡಿ, ಸುಸ್ತಿ ಬಡ್ಡಿಯನ್ನು ರೈತರು ಭರಿಸಬೇಕಾಗುತ್ತದೆ ಎಂದು ಕೊಪ್ಪ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಹೆಚ್.ಎಸ್. ಇನೇಶ್ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು ಪ್ರತೀವರ್ಷವು ಮಾರ್ಚ್ ೩೧ರ ನಂತರ ಸಾಲ ಮರುಪಾವತಿಸಿದ ರೈತರ ಸಾಲದ ಲೆಕ್ಕವನ್ನು ಮಾರ್ಚ್ ೩೧ರ ದಿನಾಂಕಕ್ಕೆ ಸರಿಹೊಂದುವಂತೆ ಬರೆಯಲು ಅವಕಾಶವಿತ್ತು. ಈಗ ಸಾಲಮರುಪಾವತಿಯ ದಾಖಲಾತಿಗಳು ಆನ್‌ಲೈನ್‌ನಲ್ಲಿ ನಡೆಯುತ್ತಿರುವುದರಿಂದ ಮಾರ್ಚ್ ೩೧ರೊಳಗಾಗಿ ತಪ್ಪದೆ ಸಾಲವನ್ನು ಮರುಪಾವತಿಸಬೇಕು. ೨೦೨೫ರ ಮಾರ್ಚ್ ೩೦ ಮತ್ತು ೩೧ರಂದು ಸರ್ಕಾರಿ ರಜಾ ದಿನಗಳಿದ್ದರೂ ಎಲ್ಲಾ ಬ್ಯಾಂಕುಗಳಲ್ಲಿ ಈ ಎರಡೂ ದಿನಗಳಂದು ಸಾಲಮರುಪಾವತಿಗೆ ಅವಕಾಶ ಕಲ್ಪಿಸಲಾಗಿದೆ. ಬ್ಯಾಂಕಿನ ಗ್ರಾಹಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ವಿನಂತಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವಶಂಕರಪ್ಪ ಕರ್ನಾಟಕ ರತ್ನಕ್ಕೆ ಅರ್ಹ : ಶ್ರೀ
ಮೈಸೂರು ಹೀಲಿಯಂ ಸಿಲಿಂಡರ್‌ ಸ್ಫೋಟ : ಎನ್‌ಐಎ ಭೇಟಿ