ಒಡಿಸ್ಸಾ ರಾಜ್ಯ ಗಜಪತಿ ಜಿಲ್ಲೆಯ ಸಿಮನ್ ಸಬರ್ ಆರೋಪಿಯಿಂದ 3 ಕೆ.ಜಿ 180 ಗ್ರಾಂ ಗಾಂಜಾ ಅಂದಾಜು ಮೌಲ್ಯ ರು. 1,75,000 ಒಂದು ಬ್ಯಾಗ್ ಮತ್ತು ಒಂದು ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ.
ಬಂಗಾರಪೇಟೆ: ಪಟ್ಟಣದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಜಾಲದ ಮೇಲೆ ದಾಳಿ ನಡೆಸಿದ ಪೊಲೀಸರು, ಒಡಿಸ್ಸಾ ಮೂಲದ ಓರ್ವ ಆರೋಪಿಯನ್ನು ಬಂಧಿಸಿ ಸುಮಾರು 1.75 ಲಕ್ಷ ರು. ಮೌಲ್ಯದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.ಒಡಿಸ್ಸಾ ರಾಜ್ಯ ಗಜಪತಿ ಜಿಲ್ಲೆಯ ಸಿಮನ್ ಸಬರ್ ಆರೋಪಿಯಿಂದ 3 ಕೆ.ಜಿ 180 ಗ್ರಾಂ ಗಾಂಜಾ ಅಂದಾಜು ಮೌಲ್ಯ ರು. 1,75,000 ಒಂದು ಬ್ಯಾಗ್ ಮತ್ತು ಒಂದು ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ.
ಬಂಗಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಹುಣಸನಹಳ್ಳಿ ಬ್ರಿಡ್ಜ್ ಬಳಿ ಗಾಂಜಾ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಈ ಮಾಹಿತಿಯ ಮೇರೆಗೆ ತಕ್ಷಣ ಕಾರ್ಯಪ್ರವೃತ್ತರಾದ ಇನ್‌ಸ್ಪೆಕ್ಟರ್ ರವಿಕುಮಾರ್ ಹಾಗೂ ತಂಡವು ಸ್ಥಳಕ್ಕೆ ದಾಳಿ ನಡೆಸಿ ಆರೋಪಿಯನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.