ಕುಸ್ತಿಪಟು, ಕಲಾವಿದರ ತವರು ಮರಿಯಮ್ಮನಹಳ್ಳಿ: ಶಾಸಕ ನೇಮರಾಜ್

KannadaprabhaNewsNetwork |  
Published : Nov 14, 2025, 03:30 AM IST
ಫೋಟೋವಿವರ- (12ಎಂಎಂಎಚ್‌1)  ಮರಿಯಮ್ಮನಹಳ್ಳಿಯಲ್ಲಿ ನಡೆದ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯ ಸಮಾರೋಪ ಸಮಾರಭದಲ್ಲಿ ಶಾಸಕ ಕೆ. ನೇಮರಾಜ್‌ ನಾಯ್ಕ ಸಭೆಯಲ್ಲಿ ಮಾತನಾಡಿದರು | Kannada Prabha

ಸಾರಾಂಶ

ನಾರಾಯಣದೇವರಕೆರೆಯು ಅನೇಕ ಪ್ರಸಿದ್ಧ ಕುಸ್ತಿಪಟುಗಳ ಮತ್ತು ಕಲಾವಿದರ ತವರೂರಾಗಿತ್ತು.

ಮರಿಯಮ್ಮನಹಳ್ಳಿ: ಐತಿಹಾಸಿಕ ವಿಜಯನಗರ ಸಾಮ್ರಾಜ್ಯದ ಶ್ರೀಕೃಷ್ದದೇವರಾಯರ ಆಳ್ವಿಕೆಯ ಗ್ರಾಮ ನಾರಾಯಣದೇವರ ಕೆರೆಯು ಕುಸ್ತಿಗೆ, ಕಲೆಗೆ ಹೆಸರುವಾಸಿಗಿತ್ತು. ಅದೇ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿರುವ ಮರಿಯಮ್ಮನಹಳ್ಳಿ ಸಹ ಕುಸ್ತಿಗೆ ಮತ್ತು ಕಲೆಗೆ ದೇಶದಲ್ಲಿಯೇ ಪ್ರಸಿದ್ದಿ ಪಡೆದಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಶಾಸಕ ಕೆ. ನೇಮರಾಜ್ ನಾಯ್ಕ ಹೇಳಿದರು.

ಇಲ್ಲಿನ ವಿನಾಯಕ ಪ್ರೌಢಶಾಲಾ ಆವರಣದಲ್ಲಿ ವಿಜಯನಗರ ಜಿಲ್ಲಾಡಳಿತ, ಶಿಕ್ಷಣ ಇಲಾಖೆ, ಜಿಲ್ಲಾ ಪಂಚಾಯತಿಯಿಂದ ಹಮ್ಮಿಕೊಂಡ ಪ್ರಾಥಮಿಕ ಹಾಗೂ 14 ರಿಂದ 17 ವರ್ಷ ವಯೋಮಾನದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಮೂರು ದಿನಗಳ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿಕೊಂಡು ಸಭೆಯಲ್ಲಿ ಅವರು ಮಾತನಾಡಿದರು.

ನಾರಾಯಣದೇವರಕೆರೆಯು ಅನೇಕ ಪ್ರಸಿದ್ಧ ಕುಸ್ತಿಪಟುಗಳ ಮತ್ತು ಕಲಾವಿದರ ತವರೂರಾಗಿತ್ತು. ನಾರಾಯಣದೇವರಕೆರೆ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿರುವ ಮರಿಯಮ್ಮನಹಳ್ಳಿಯಲ್ಲಿ ಅನೇಕ ಕುಸ್ತಿಪಟುಗಳು ಇದ್ದಾರೆ. ಇಂತಹ ಊರಿನಲ್ಲಿ ರಾಜ್ಯದ 35 ಜಿಲ್ಲೆಗಳಿಂದ ಬಂದ ವಿವಿಧ ವಯೋಮಿತಿ ಕುಸ್ತಿಪಟುಗಳು ಬಂದು ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆಯಬೇಕು ಎಂದು ಅವರು ಕ್ರೀಡಾಪಟುಗಳಿಗೆ ಶುಭು ಹಾರೈಸಿದರು.

ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಯಾವುದೇ ಅಡ್ಡಿ ಆತಂಕಗಳಿಲ್ಲದೇ ಪಂದ್ಯಾವಳಿ ಯಶಸ್ವಿಯಾಗಿದೆ. ಇದಕ್ಕೆ ವಿವಿಧ ಇಲಾಖೆಯ ಅಧಿಕಾರಿಗಳ ಪರಿಶ್ರಮ ಕಾರಣವಾಗಿದೆ. ಪಂದ್ಯಾವಳಿಯ ಯಶಸ್ಸಿಯಾಗಲು ಕ್ರೀಡಾಪಟುಗಳು ಮತ್ತು ತೀರ್ಪುಗಾರರ ಪ್ರಮಾಣಿಕ ಪ್ರಯತ್ನವೂ ಕಾರಣವಾಗಿದೆ. ಪಂದ್ಯಾವಳಿಯ ಯಶಸ್ಸಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳನ್ನು ಶಾಸಕರು ತಿಳಿಸಿದರು.

ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ರಾಷ್ಟ್ರಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಲಿರುವ ಕುಸ್ತಿಪಟುಗಳು ಬಹುಮಾನಗಳನ್ನು ಪಡೆದುಕೊಂಡು ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಕುಸ್ತಿ ಪ್ರದರ್ಶಿಸಲು ಸತತ ಅಭ್ಯಾಸದಲ್ಲಿ ತೊಡಗಿಕೊಂಡು ಉತ್ತಮ ಕುಸ್ತಿಪಟುಗಳಾಗಿ ಗುರುತಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ರಾಜ್ಯ ತೀರ್ಪಗಾರರ ಸಂಘದ ಅಧ್ಯಕ್ಷ ಡಾ. ವಿನೋದ ಸಭೆಯಲ್ಲಿ ಮಾತನಾಡಿದರು.

ರಾಜ್ಯ ತೀರ್ಪಗಾರರ ಸಂಘದ ಅಧ್ಯಕ್ಷ ಡಾ.ವಿನೋದ ಸಭೆಯಲ್ಲಿ ಮಾತನಾಡಿದರು. ಸಮಾಜ‌ ಕಲ್ಯಾಣ ಇಲಾಖೆಯ ಆನಂದ ಕಾಳೆ, ಸ್ಥಳಿಯ ಮುಖಂಡರಾದ ಚಿದ್ರಿ ಸತೀಶ್, ಗುಂಡಾಸ್ವಾಮಿ, ಎಸ್‌. ನವೀನ್‌ ಕುಮಾರ್, ಬಾದಾಮಿ ಮೃತ್ಯುಂಜಯ, ವೈ. ಮಲ್ಲಿಕಾರ್ಜುನ, ಪೈಲ್ವಾನ ವಸಂತ ಗದಗ, ಸಿದ್ದರಾಜು, ನರೇಗಲ್ ಬಸವರಾಜ್, ಯರ್ರಿಸ್ವಾಮಿ, ಎಲಿಗಾರ್ ಮಂಜುನಾಥ, ಸಜ್ಜೇದ ವಿಶ್ವನಾಥ, ಚುಕ್ಕಿ ನಾಗೇಶ್ ಸೇರಿದಂತೆ ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.

ವಿಜಯನಗರ ಜಿಲ್ಲಾ ಎಸ್‌ಪಿ ಜಾಹ್ನವಿ ಅವರ ಮಾರ್ಗದರ್ಶನದಲ್ಲಿ ಹಗರಿಬೊಮ್ಮನಹಳ್ಳಿ ಸಿಪಿಐ ವಿಕಾಸ ಲಮಾಣಿ, ಪಟ್ಟಣದ ಪಿಎಸ್ಐ ತಾರಾಬಾಯಿ ಹಾಗೂ ಪೊಲೀಸ್‌ ಸಿಬ್ಬಂದಿಗಳು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿತ್ತು.

ಹೊಸಪೇಟೆಯ ಕ್ಷೇತ್ರ ಶಿಕ್ಷಣಾಧಿಕಾರಿ ಶೇಖರಪ್ಪ ಹೊರಪೇಟೆ ಸ್ವಾಗತಿಸಿದರು. ಬಳ್ಳಾರಿ ಡಿಡಿಪಿಐ ವೆಂಕಟೇಶ, ರಾಮಚಂದ್ರಪ್ಪ ವಂದಿಸಿದರು. ಶಿಕ್ಷಕ ಬಿ. ಪರಶುರಾಮ ನಿರೂಪಿಸಿದರು.

PREV

Recommended Stories

ಸುಪ್ರೀಂನಲ್ಲಿ ರಾಜ್ಯಕ್ಕೆ ಮೇಕೆದಾಟು ವಿಜಯ - ಯೋಜನೆ ಪ್ರಶ್ನಿಸಿದ್ದ ತಮಿಳುನಾಡು ಅರ್ಜಿ ವಜಾ
ಹಾರನ್‌ ಮಾಡಿದ್ದಕ್ಕೆ ಸಿಟ್ಟಿಗೆದ್ದು ಬೈಕ್‌ಗೆ ಕಾರು ಗುದ್ದಿಸಿದವ ಸೆರೆ