ಮಾರ್ಪಳ್ಳಿ: ಮುದ್ದುಕೃಷ್ಣ ಸ್ಪರ್ಧೆ

KannadaprabhaNewsNetwork |  
Published : Sep 07, 2026, 03:00 AM IST
06ಮಾರ್ಪಳ್ಳಿ | Kannada Prabha

ಸಾರಾಂಶ

ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಮಹಿಳಾ ಮಂಡಳಿ ಮಾರ್ಪಳ್ಳಿ ವತಿಯಿಂದ ಆಯೋಜಿಸಲಾದ 3ನೇ ವರ್ಷದ ಮುದ್ದು ಕೃಷ್ಣ ಸ್ಪರ್ಧೆ ಮಾರ್ಪಳ್ಳಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಉಮಾಮಹೇಶ್ವರ ಸಭಾಂಗಣದಲ್ಲಿ ನಡೆಯಿತು.

ಉಡುಪಿ : ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಮಹಿಳಾ ಮಂಡಳಿ ಮಾರ್ಪಳ್ಳಿ ವತಿಯಿಂದ ಆಯೋಜಿಸಲಾದ 3ನೇ ವರ್ಷದ ಮುದ್ದು ಕೃಷ್ಣ ಸ್ಪರ್ಧೆ ಮಾರ್ಪಳ್ಳಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಉಮಾಮಹೇಶ್ವರ ಸಭಾಂಗಣದಲ್ಲಿ ನಡೆಯಿತು.ಕಾರ್ಯಕ್ರಮವನ್ನು ಫಾರ್ಚೂನ್ ಇನ್ಸ್ಟಿಟ್ಯೂಟ್ ಆಫ್ ಎಜುಕೇಷನ್‌ನ ಸ್ಥಾಪಕಿ ಅಕ್ಷತಾ ಕಿರಣ್ ಉದ್ಘಾಟಿಸಿದರು. ಶ್ರೀಮಹಾಲಿಂಗೇಶ್ವರ ಚೆಂಡೆ ಬಳಗ ಮಾರ್ಪಳ್ಳಿಯ ಅಧ್ಯಕ್ಷ ವಾದಿರಾಜ ಉಪಾಧ್ಯ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ರತ್ನಾಕರ್ ಜಿ.ಎಸ್., ದಿನೇಶ್ ಸಿ. ನಾಯ್ಕ್ ಅಲೆವೂರು, ಸುಷ್ಮಿತಾ ಹೆಗ್ಡೆ, ಶೇಖರ್ ಸುವರ್ಣ ಗರಡಿಮನೆ, ವಿಜಯ್ ಆರ್. ನಾಯಕ್, ವಿಶ್ವನಾಥ್ ಅಮೀನ್ ಹಾಗೂ ದಿನೇಶ್ ಶೆಟ್ಟಿ ಮಾರ್ಪಳ್ಳಿ ಆಗಮಿಸಿದ್ದರು. ಮಹಿಳಾ ಮಂಡಳಿಯ ಗೌರವಾಧ್ಯಕ್ಷೆ ಅನುರಾಧ ಉದಯ್ ಹಾಗೂ ಅಧ್ಯಕ್ಷೆ ಸುಲೋಚನ ನಾಯ್ಕ್ ಉಪಸ್ಥಿತರಿದ್ದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಗೆಳೆಯರ ಬಳಗ ಮಾರ್ಪಳ್ಳಿಯ ಗೌರವಾಧ್ಯಕ್ಷ ಲಚೇಂದ್ರ ಬೈಲೂರು ವಹಿಸಿದ್ದರು. ಅತಿಥಿಗಳಾಗಿ ಡಾ. ಉದಯ್ ದೇವಾಡಿಗ, ಯತೀಶ್ ಕುಮಾರ್, ಹರಿದಾಸ್ ಪ್ರಭು, ಉಮೇಶ್ ಮಾರ್ಪಳ್ಳಿ, ಸುಧಾಕರ್ ಶೇರಿಗಾರ್, ಚಂದ್ರಾವತಿ ಸುವರ್ಣ ಹಾಗೂ ಪುಷ್ಪಲತಾ ರಮಾನಂದ್ ಉಪಸ್ಥಿತರಿದ್ದರು. ಕುಮಾರಿ ಯುಕ್ತ ಆರ್. ಭಟ್ ನಿರೂಪಿಸಿದರು. ಕವಿತಾ ಮನೋಜ್ ಹಾಗೂ ವಿನುತ ಗಣೇಶ್ ವಂದಿಸಿದರು. ತೀರ್ಪುಗಾರರಾಗಿ ವಿದುಷಿ ಅನ್ವಿತಾ ಕೋಟ್ಯಾನ್ ಹಾಗೂ ವಿದುಷಿ ಸುಮಲತಾ ಪ್ರಶಾಂತ್ ಕಾರ್ಯನಿರ್ವಹಿಸಿದರು.

ಸ್ಪರ್ಧೆಯಲ್ಲಿ ಸುಮಾರು 75 ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಮಕೃಷ್ಣ ಮಿಷನ್: ಸ್ವಚ್ಛ ಮಂಗಳೂರು ಅಭಿಯಾನ - ಮಾಸಿಕ ಸ್ವಚ್ಛತಾ ಶ್ರಮದಾನ
ಕದ್ರಿ ಕೃಷ್ಣ ವೇಷ ಸ್ಪರ್ಧೆ: ರಾಷ್ಟ್ರೀಯ ಮಕ್ಕಳ ಉತ್ಸವ ಫಲಿತಾಂಶ