ಮಾರ್ಪಳ್ಳಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಫೆ. 15ರಿಂದ 19ರವರೆಗೆ ವಿಜೃಂಭಣೆಯಿಂದ ನಡೆಯಲಿರುವ ವಾರ್ಷಿಕ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಹಾಗೂ ಜೀರ್ಣೋದ್ಧಾರ ಸಮಿತಿಯ ಮನವಿ ಪತ್ರವನ್ನು ಸೋಮವಾರ ದೇವಸ್ಥಾನದ ವಠಾರದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಚಿಟ್ಪಾಡಿ ಬೀಡು ಡಾ.ಸಿ.ಜಿ. ಬಲ್ಲಾಳ್ ಬಿಡುಗಡೆ
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ಮಾರ್ಪಳ್ಳಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಫೆ. 15ರಿಂದ 19ರವರೆಗೆ ವಿಜೃಂಭಣೆಯಿಂದ ನಡೆಯಲಿರುವ ವಾರ್ಷಿಕ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಹಾಗೂ ಜೀರ್ಣೋದ್ಧಾರ ಸಮಿತಿಯ ಮನವಿ ಪತ್ರವನ್ನು ಸೋಮವಾರ ದೇವಸ್ಥಾನದ ವಠಾರದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಚಿಟ್ಪಾಡಿ ಬೀಡು ಡಾ.ಸಿ.ಜಿ. ಬಲ್ಲಾಳ್ ಬಿಡುಗಡೆಗೊಳಿಸಿದರು. ಈ ಸಂದರ್ಭ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಕಾರ್‍ಯಾಧ್ಯಕ್ಷ ಕಂಬಳಮನೆ ದಿನೇಶ್ ಶೆಟ್ಟಿ, ಉಪಾಧ್ಯಕ್ಷರಾದ ಉದ್ಯಮಿ ಹರೀಶ್ ರಾವ್, ಸಂಗೀತ ಶೆಟ್ಟಿ, ಕೋಶಾಧಿಕಾರಿ ಶಂಕರ್ ಜಿ. ದೇವಾಡಿಗ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಲಕ್ಷ್ಮೀನಾರಾಯಣ ರಾವ್, ಶೇಖರ ಸುವರ್ಣ ಗರಡಿ ಮನೆ, ವಿಜಯಲಕ್ಷ್ಮಿ ಎಂ. ಪಾಂಡುರಂಗ ನಾಯ್ಕ್, ಉಮೇಶ್ ಮಾರ್ಪಳ್ಳಿ, ಶಂಕರ್ ಆಚಾರ್ಯ, ಚಂದ್ರಾವತಿ ಎಂ. ಗೆಳೆಯರ ಬಳಗದ ಅಧ್ಯಕ್ಷ ಸುಧಾಕರ್ ಸೇರಿಗಾರ್, ವಸಂತ್ ಶೆಟ್ಡಿಗಾರ್, ಸದಾಶಿವ ಆಚಾರ್ಯ, ವಿಶ್ವನಾಥ್ ಅಮೀನ್, ರಾಘವೇಂದ್ರ ಪೂಜಾರಿ, ಪ್ರಸಾದ್, ಕ್ಷೇತ್ರದ ಅರ್ಚಕರಾದ ವೆಂಕಚಾಲ ಉಪಾಧ್ಯಾಯ, ರಾಜೇಂದ್ರ ಉಪಾಧ್ಯಾಯ, ಅನಂತ ಉಪಾಧ್ಯಾಯ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.