ಮೂಲ್ಕಿ: ಕೇಂದ್ರ ಬಿಜೆಪಿ ಸರ್ಕಾರ ಗ್ರಾಮ ಮಟ್ಟದಲ್ಲಿ ಕೃಷಿಕರಿಗೆ ಉಪಯೋಗವಾಗುವಂತಹ ಮನರೇಗಾ ಯೋಜನೆ ಬದಲಿಸಿ ಕೃಷಿಕರಿಗೆ ದ್ರೋಹ ಮಾಡುತ್ತಿದೆ. ಗಾಂಧಿಯನ್ನು ಕೊಂದಂತಹ ಗೋಡ್ಸೆಯನ್ನು ವೈಭವಿಕರಿಸುವ ನಿಟ್ಟಿನಲ್ಲಿ ವಿ. ಗೋಪಾಲ್ ರಾಮ್ ಗೋಡ್ಸೆ ಹೆಸರನ್ನು ಯೋಜನೆಗೆ ವಿಜಿ ರಾಮ್ ಜಿ ಇಟ್ಟಿದೆ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಹೇಳಿದರು.
ಪ್ರಧಾನಿ ಮೋದಿಯವರ ಜನಪ್ರಿಯತೆ ಕುಸಿಯುತ್ತಿದೆ. ಸರ್ವಾಧಿಕಾರಿ ಧೋರಣೆಯಿಂದ ಜನರು ಬೇಸತ್ತಿದ್ದು ಇ ಡಿ, ಚುನಾವಣಾ ಆಯೋಗ, ಸಿಬಿಐ ಸೇರಿದಂತೆ ಎಲ್ಲ ಸಂವಿಧಾನಿಕ ಸಂಸ್ಥೆಗಳನ್ನು ಕೇಂದ್ರ ದುರುಪಯೋಗಪಡಿಸಿಕೊಳ್ಳುತ್ತಿದೆ. ಚಿನ್ನ, ಬೆಳ್ಳಿ, ದಿನಸಿ ವಸ್ತುಗಳ ಬೆಲೆ ಏರಿಕೆಯಿಂದ ಜನ ಸಾಮಾನ್ಯರಿಗೆ ಬದುಕಲು ಅಸಾಧ್ಯ ಸ್ಥಿತಿಯಿದೆ. 2014ರವರೆಗೆ ದೇಶದ ಸಾಲ 52 ಲಕ್ಷ ಕೋಟಿ ಇದ್ದು ಈ ಬಾರಿಯ ಬಜೆಟ್ ನಲ್ಲಿ 21695,000 ಕೋಟಿಯಾಗಿದ್ದು ಜನರನ್ನು ಸಾಲದ ಸುಳಿಗೆ ಸಿಲುಕಿಸಲಾಗುತ್ತಿದೆ ಎಂದರು.
ಮಾಜಿ ಸಚಿವರಾದ ಬಿ.ರಮಾನಾಥ ರೈ, ಅಭಯ ಚಂದ್ರ ಜೈನ್, ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ, ಗೇರು ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಪರಿಸರ ಪ್ರವಾಸೋಧ್ಯಮ ನಿಗಮದ ಅಧ್ಯಕ್ಷೆ ಶಾಲೆಟ್ ಪಿಂಟೋ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಕೆಪಿಸಿಸಿ ಸದಸ್ಯ ವಸಂತ್ ಬೆರ್ನಾಡ್, ಕಾಂಗ್ರೆಸ್ ನಾಯಕರಾದ ಪುತ್ತು ಬಾವ, ಮಂಜುನಾಥ ಕಂಬಾರ, ಅಪ್ಪಿ, ಉಷಾ ಅಂಚನ್, ಸುಹಾನ್ ಆಳ್ವ, ಇಬ್ರಾಹಿಂ ನವಾಜ್, ಪ್ರವೀಣ್ ಶಿರ್ತಾಡಿ, ವಿಲ್ಮಾ ಡಿಕೋಸ್ಟ ಮುಲ್ಕಿ, ಮಾಜೀ ಕಾರ್ಪೊರೇಟರ್ ನವೀನ್ ಡಿಸೋಜ ಮತ್ತಿತರರಿದ್ದರು. ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್ ಸ್ವಾಗತಿಸಿದರು.