- ಚನ್ನಗಿರಿ ಸಂದೀಪನ ಮನೆಗೆ ಭೇಟಿ ನೀಡಿ, ವಧು-ವರನಿಗೆ ಶುಭ ಕೋರಿದ ಡಾ.ಪ್ರಭಾ - ತನ್ನ ಮದುವೆಗೆ ಸಂಸದರು ಬಾರದಿದ್ದರೆ ವಧುವಿಗೆ ತಾಳಿಯನ್ನೇ ಕಟ್ಟೋದಿಲ್ಲ ಎಂದಿದ್ದ
- ಕಾಂಗ್ರೆಸ್ ಕಾರ್ಯಕರ್ತನ ಅಭಿಮಾನಕ್ಕೆ ಸೋತು ಮನೆಗೆ ಭೇಟಿ ನೀಡಿದ ಸಂಸದೆ - - - ಕನ್ನಡಪ್ರಭ ವಾರ್ತೆ ದಾವಣಗೆರೆತನ್ನ ಮದುವೆಗೆ ಬಾರದಿದ್ದರೆ ವಧುವಿನ ಕೊರಳಿಗೆ ತಾಳಿಯನ್ನೇ ಕಟ್ಟುವುದಿಲ್ಲವೆಂದು ಪಟ್ಟುಹಿಡಿದಿದ್ದ ಯುವ ಕಾರ್ಯಕರ್ತನ ನಿವಾಸಕ್ಕೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಭೇಟಿ ನೀಡಿದರು. ಅಲ್ಲದೇ, ಮಾ.6ರಂದು ಖುಷಿಯಿಂದ ಮದುವೆ ಆಗುವಂತೆ ಮನವೊಲಿಸುವಲ್ಲಿ ಸಂಸದರು ಯಶಸ್ವಿಯಾಗಿದ್ದಾರೆ.
ಚನ್ನಗಿರಿ ತಾಲೂಕಿನ ಕಾಂಗ್ರೆಸ್ ಯುವ ಕಾರ್ಯಕರ್ತ ಸಂದೀಪ ಮಾ.6ರಂದು ತನ್ನ ಮದುವೆಗೆ ಆಗಮಿಸುವಂತೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅವರಿಗೆ ಸಂದೀಪನು ಆಹ್ವಾನ ಪತ್ರಿಕೆ ನೀಡಿದ್ದನು. ಈ ಸಂದರ್ಭ ತನ್ನ ಮದುವೆಗೆ ಬಂದು, ಆಶೀರ್ವದಿಸಬೇಕು, ತಾವು ಆಗಮಿಸದಿದ್ದರೆ ವಧುವಿಗೆ ತಾಳಿ ಕಟ್ಟುವುದಿಲ್ಲ ಎಂದು ಹೇಳಿದ್ದರು.ಈ ಹಿನ್ನೆಲೆ ಶನಿವಾರ ಚನ್ನಗಿರಿಗೆ ಕಾರ್ಯಕ್ರಮ ನಿಮಿತ್ತ ತೆರಳಿದ್ದ ಸಂಸದೆ ಡಾ.ಪ್ರಭಾ ಅವರು ಅನಂತರ ಪಕ್ಷದ ಯುವ ಕಾರ್ಯಕರ್ತ ಸಂದೀಪನ ಮನಗೂ ಭೇಟಿ ನೀಡಿದರು. ನಿನ್ನ ಮದುವೆಯ ದಿನವಾದ ಮಾ.6ರಂದು ದಾವಣಗೆರೆ ಕ್ಷೇತ್ರದಲ್ಲಿ ತಾವು ಲಭ್ಯವಿರದ ಕಾರಣ, ಈಗಲೇ ನಿನ್ನ ಮದುವೆಗೆ ಮುಂಗಡವಾಗಿ ಶುಭ ಹಾರೈಸಲು ಬಂದಿದ್ದೇವೆ, ಖುಷಿಯಿಂದ ಆ ದಿನ ಮದುವೆ ಆಗುವಂತೆ ಆತನಿಗೆ ಮನವೊಲಿಸಿದರು.
ಅನಂತರ ಸಂದೀಪನ ಕುಟುಂಬ ಸದಸ್ಯರೊಂದಿಗೆ ಸುಮಾರು ಹೊತ್ತು ಕಳೆದ ಸಂಸದರು, ಮದುವೆ ಮನೆಯವರಿಗೆ ಹಾಗೂ ನವ ವಧು-ವರನಿಗೆ ಶುಭ ಕೋರಿದರು. ಕುಟುಂಬ ಸದಸ್ಯರೊಂದಿಗೆ ಖುಷಿಯಿಂದ ಫೋಟೋ ತೆಗೆಸಿಕೊಂಡರು. ಸಂಸದರ ಸರಳತೆಗೆ ಸಂದೀಪನ ಕುಟುಂಬ ಸದಸ್ಯರು ಅಭಿಮಾನ ವ್ಯಕ್ತಪಡಿಸಿದರು.- - - -2ಕೆಡಿವಿಜಿ2:
ಮಾ.6ರಂದು ಸಂಸದರು ತನ್ನ ಮದುವೆ ಸಮಾರಂಭಕ್ಕೆ ಬಾರದಿದ್ದರೆ ವಧುವಿಗೆ ತಾಳಿ ಕಟ್ಟುವುದಿಲ್ಲ ಎಂದು ಹೇಳಿದ್ದ ಚನ್ನಗಿರಿ ಕಾಂಗ್ರೆಸ್ ಯುವ ಕಾರ್ಯಕರ್ತ ಸಂದೀಪ್ ಮನೆಗೆ ಶನಿವಾರ ಡಾ.ಪ್ರಭಾ ಮಲ್ಲಿಕಾರ್ಜುನ ಭೇಟಿ ನೀಡಿ, ಮದುವೆಗೆ ಮುಂಗಡವಾಗಿ ಶುಭ ಕೋರಿದರು.