ಹುಬ್ಬಳ್ಳಿ:
"ನನ್ನನ್ನು ಯಾರು ಬಲವಂತ ಮಾಡಿಲ್ಲ. ಸ್ವ-ಇಚ್ಛೆಯಿಂದಲೇ ಮುಕಳೆಪ್ಪನನ್ನು ಮದುವೆಯಾಗಿದ್ದೇನೆ. ಜೀವ ಬೆದರಿಕೆ ಎಲ್ಲ ಸುಳ್ಳು " ಎಂದು ಯೂಟ್ಯೂಬರ್ ಖ್ವಾಜಾ ಶಿರಹಟ್ಟಿ ಅಲಿಯಾಸ್ ಮುಕಳೆಪ್ಪ ಸ್ಪಷ್ಟಪಡಿಸಿದ್ದಾಳೆ.ಮುಕಳೆಪ್ಪ ತಮ್ಮ ಮಗಳನ್ನು ಅಪಹರಣ ಮಾಡಿ, ಬೆದರಿಸಿ, ಬಲವಂತವಾಗಿ ಮದುವೆಯಾಗಿದ್ದಾನೆ. ನಮ್ಮ ಮಗಳನ್ನು ನಮಗೆ ಕೊಡಿಸಿ ಎಂದು ಗಾಯತ್ರಿ ಪಾಲಕರು ಹಳೇಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಈ ಹಿನ್ನೆಲೆಯಲ್ಲಿ ಸೋಮವಾರ ತಮ್ಮ ವಕೀಲರ ಜೊತೆ ವಿದ್ಯಾನಗರ ಠಾಣೆಗೆ ಬಂದಿದ್ದ ಗಾಯತ್ರಿ, ನಾವು ಸ್ವ-ಇಚ್ಛೆಯಿಂದ ಜೂ. 5ರಂದೆ ಮದುವೆ ಆಗಿದ್ದೇವೆ. ಮದುವೆ ನಂತರ ನನ್ನ ತಾಯಿಯ ಮನೆಗೂ ಹೋಗಿ ಬಂದಿದ್ದೇನೆ. ಎಲ್ಲರಿಗೂ ವಿಷಯ ಗೊತ್ತು. ಅವರ ಅನುಮತಿಯಿಂದಲೇ ಮದುವೆ ಆಗಿದ್ದೇನೆ. ನನ್ನನ್ನು ಯಾರೂ ಬಲವಂತನೂ ಮಾಡಿಲ್ಲ. ಅಪಹರಣವನ್ನೂ ಮಾಡಿಲ್ಲ. ಈಗ ಎರಡು ದಿನದಿಂದ ನಮ್ಮ ಪಾಲಕರನ್ನು ಯಾರೋ ಮೈಂಡ್ ವಾಶ್ ಮಾಡಿದ್ದಾರೋ ಗೊತ್ತಿಲ್ಲ. ಅವರು ಸುಳ್ಳು ಆರೋಪ ಮಾಡುತ್ತಿದ್ದಾರೆ. ಮುಂಡಗೋಡಕ್ಕೆ ಶೂಟಿಂಗ್‌ಗೆ ಹೋಗುತ್ತಿದ್ದೇವು. ಹೀಗಾಗಿ ಅಲ್ಲೇ ರಿಜಿಸ್ಟರ್ ಮದುವೆಯಾಗಿದ್ದೇವೆ ಎಂದು ಸ್ಪಷ್ಟಪಡಿಸಿ, ತಾನು ಗಂಡನ ಮನೆಗೆ ತೆರಳುತ್ತೇನೆ ಎಂದು ಹೇಳಿ ಅಲ್ಲಿಂದ ತೆರಳಿದಳು.ಈ ಕುರಿತಂತೆ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ ಮಾತನಾಡಿ, ಗಾಯತ್ರಿ ಪಾಲಕರು ದೂರು ನೀಡಿದ್ದರು. ಆ ಹಿನ್ನೆಲೆಯಲ್ಲಿ ಕರೆಯಿಸಿ ವಿಚಾರಣೆ ನಡೆಸಿದೇವು. ತನಿಖೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸಹ ಭಾಗಿಯಾಗಿದ್ದರು. ಸ್ವ-ಇಚ್ಛೆಯಿಂದ ಮದುವೆಯಾಗಿರುವುದಾಗಿ ಸ್ಪಷ್ಟಪಡಿಸಿದ್ದಾರೆ ಎಂದು ತಿಳಿಸಿದರು.
ಈ ನಡುವೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಠಾಣೆಯ ಎದುರು ಜಮೆಯಾಗಿದ್ದರು. ಈ ವೇಳೆ ಗಾಯತ್ರಿ ಜತೆಗೆ ತಮಗೆ ಮಾತನಾಡಲು ಅವಕಾಶ ನೀಡಬೇಕೆಂದು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಆಗ್ರಹಿಸಿದ್ದು ನಡೆಯಿತು. ಈ ವೇಳೆ ಪೊಲೀಸರೊಂದಿಗೆ ವಾಗ್ವಾದವೂ ನಡೆಯಿತು.